Top

ಗೌರಿ ಹಬ್ಬಕ್ಕೆ ಸರ್ಕಾರದಿಂದ ರಾಜ್ಯದ ಜನತೆಗೆ ಬಂಪರ್ ಗಿಫ್ಟ್‌.!

ಗೌರಿ ಹಬ್ಬಕ್ಕೆ ಸರ್ಕಾರದಿಂದ ರಾಜ್ಯದ ಜನತೆಗೆ ಬಂಪರ್ ಗಿಫ್ಟ್‌.!
X

ಮಂಡ್ಯ : ಇಂದು ರಾಜ್ಯದ ಮುಖ್ಯಮಂತ್ರಿ, ರೈತನಾಗಿ ತೋರ್ಪಟ್ಟರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ಗದ್ದೆಗಿಳಿದು ಭತ್ತ ನಾಟಿ ಮಾಡಿ ರೈತ ನಾಯಕ ಎನಿಸಿಕೊಂಡರು.

ಇದೇ ವೇಳೆ ಮಾತನಾಡಿ ಮುಖ್ಯಮಂತ್ರಿ, ಇನ್ನೊಂದು ವಾರದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡಲಾಗುವುದು. ತಿಂಗಳಲ್ಲಿ ಒಂದು ದಿನ ರೈತರ ಜೊತೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದರು.

ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ, ಮುಂದಿನ ತಿಂಗಳಿನಿಂದ ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿ, ರೈತರ ಜೊತೆಗೂಡಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಯಾವ ರೈತರೂ ಕೂಡ ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು. ರೈತರೊಂದಿಗೆ ಸರ್ಕಾರವಿದೆ. ಗೌರಿ ಗಣೇಶ ಹಬ್ಬದ ವೇಳೆಗೆ ರೈತರಿಗೆ ಒಳ್ಳೆಯ ಕಾರ್ಯಕ್ರಮವನ್ನು ಕೊಡುವುದಾಗಿ ಭರವಸೆ ನೀಡಿದರು.

ಜನರನ್ನು ಮೆಚ್ಚಿಸುವುದಕ್ಕೆ ಇಂತಹ ಕಾರ್ಯಕ್ರಮ ಕೊಡುವುದಿಲ್ಲ. ಹೃದಯ ಪೂರ್ವಕವಾಗಿ ಜನೋಪಯೋಗಿ ಕಾರ್ಯಕ್ರಮ ನೀಡುವುದಾಗಿ ಹೇಳಿ ಬಿಜೆಪಿಯ ಕೆ ಎಸ್ ಈಶ್ವರಪ್ಪ ಮಾತಿಗೆ ತಿರುಗೇಟು ನೀಡಿದರು.

ಭತ್ತ ನಾಡಿ ಮಾಡುವ ಕಾರ್ಯವನ್ನು ಡ್ರಾಮಾ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ನಾಟಕ ಮಾಡಲು ಬಂದಿಲ್ಲ. ಮಂಡ್ಯ ಜನರ ಋಣ ತಮ್ಮ ಮೇಲಿದೆ. ನಾನು ಒಂದು ಪ್ರಾಂತ್ಯಕ್ಕೆ ಸಿಎಂ ಅಲ್ಲ ಅಂದರು.

ಸಮಯಾವಕಾಶ ಕೊಡಿ. ರೈತರನ್ನು ಉಳಿಸುತ್ತೇನೆ. ನಾನು ಹೆದರುವುದು, ಗೌರವ ಕೊಡುವುದು ರೈತರಿಗೆ ಮಾತ್ರ. 25 ವರ್ಷಗಳ ಬಳಿಕ ಗದ್ದೆಗೆ ಇಳಿದು ನಾಟಿ ಮಾಡಿದ್ದೇನೆ. ರೈತರ ಸಂಕಷ್ಟ ನನಗೆ ಅರಿವಿದೆ ಎಂದರು.

Next Story

RELATED STORIES