Top

ಕುರ್ಚಿಗಾಗಿ ಅಧಿಕಾರಮಾಡುವ ಶಾಸಕ ನಾನಲ್ಲ

ಕುರ್ಚಿಗಾಗಿ ಅಧಿಕಾರಮಾಡುವ ಶಾಸಕ ನಾನಲ್ಲ
X

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದಯೇ ವೈದ್ಯಕೀಯ ಕಾಲೇಜಾದ್ರು ಸಿಎಂ ಕುಮಾರಸ್ವಾಮಿ ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಅಂತಾ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಒಕ್ಕಲಿಗ ಕಲ್ಯಾಣಮಂಟಪದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸುಧಾಕರ್ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಘೋಷಣೆ ಮಾಡಿದ್ದು.

ಆದರೇ ಇಂತಹ ಜಿಲ್ಲೆಯ ಅಭಿವೃದ್ಧಿಗೆ, ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರೇ ಸಹಕರಿಸುತ್ತಿಲ್ಲ. ಜಿಲ್ಲಾ ಕೇಂದ್ರಕ್ಕೆ ಅನುದಾನ ನೀಡುವ ಬದಲು ತಾಲ್ಲೂಕು ಕೇಂದ್ರಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿರೋದು ದುರಂತ ಎಂದು ಹೇಳಿದರು.

ಇದೇ ವೇಳೆ ನಾನು ಕುರ್ಚಿಗೋಸ್ಕರ ರಾಜಕೀಯ ಮಾಡುವ ನಾಯಕ ನಾನಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ, ಜನರ ಏಳಿಗೆಗಾಗಿ ನಾನು ಶ್ರಮಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಸುಧಾಕರ್ ಹೇಳಿದರು.

ಇನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾ ವೈದ್ಯಕೀಯ ಕಾಲೇಜಿಗೆ ಈಗಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ರು.

Next Story

RELATED STORIES