Top

ಹಾಸನಕ್ಕೆ ಸಿಗುತ್ತಾ ಮತ್ತೊಂದು ಸಚಿವ ಸ್ಥಾನ.?

ಬೆಂಗಳೂರು : ಇವತ್ತಿಗೆ ಆಷಾಢ ಮುಗೀತು.. ನಾಳೆಯಿಂದ ಶ್ರಾವಣ ಆರಂಭ.. ಬಕಪಕ್ಷಿಯಂತೆ ಕಾದು ಕುಳಿತಿದ್ದ ಆಕಾಂಕ್ಷಿ ಶಾಸಕರಿಗೆ ಮತ್ತೆ ಮಂತ್ರಿಗಿರಿಯ ಕನಸು ಕಾಣ್ತಿದ್ದಾರೆ. ಯಾರಿಗೆ ಶ್ರಾವಣ ಶುಭ ತರುತ್ತೆ..ಯಾರಿಗೆ ಕಹಿ ನೀಡುತ್ತೆ ಅನ್ನೋದು ದೊಡ್ಡ ಕುತೂಹಲ ಸೃಷ್ಟಿಸಿದೆ.

ಆಷಾಢ ಮುಗೀತು.. ಶ್ರಾವಣ ಬಂತು, ಶಾಸಕರಿಗೆ ಮಂತ್ರಿಭಾಗ್ಯದ ಆಸೆ ಮತ್ತೆ ತಂತು

ಕಾಂಗ್ರೆಸ್​ ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಶಾಸಕರು ಅತೃಪ್ತರಾಗಿದ್ರು. ತಮಗೆ ಮಂತ್ರಿಭಾಗ್ಯ ಸಿಗದೇ ಹತಾಷರಾಗಿದ್ರು. ಕೆಲವರಂತೂ ನೇರವಾಗಿ ಅಸಮಧಾನ ಹೊರಹಾಕಿದ್ರು. ಸಂಪುಟದ ಕೆಲವಷ್ಟು ಇಲಾಖೆಗಳನ್ನ ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ರಿಂದ ಸಚಿವ ಸಂಪುಟ ಪುನಾರಚನೆ ವೇಳೆ ಸಿಗುತ್ತೆ ಅಂತ ಕಾಯ್ದು ಕೂತಿದ್ರು.

ಆಷಾಢ ಮುಗಿಯುವವರೆಗೆ ಸಂಪುಟ ವಿಸ್ತರಣೆ ಆಗೋದಿಲ್ಲ ಅಂತ ಸಿಎಂ ಹೇಳಿದ್ರು. ಇದೀಗ ಇಂದಿಗೆ ಆಷಾಢ ಮುಗ್ದಿದೆ. ನಾಳೆಯಿಂದ ಶ್ರಾವಣ ಆರಂಭವಾಗ್ತಿದೆ. ಅತೃಪ್ತ ಶಾಸಕರಿಗೆ ಮಂತ್ರಿಭಾಗ್ಯದ ಆಸೆ ಚಿಗುರುವಂತೆ ಮಾಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಿದೆ. ಇದ್ರಲ್ಲಿ ಯಾರಿಗೆ ಮಣೆ ಹಾಕಬೇಕೆಂಬ ಸವಾಲು ಸಿಎಂ ಮುಂದಿದೆ.

ಹೆಚ್​.ಕೆ.ಕುಮಾರಸ್ವಾಮಿ.. ಶಿವಲಿಂಗೇಗೌಡ ಮಧ್ಯೆ ಪೈಪೋಟಿ

ಈಗಾಗಲೇ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಗೆ ಎರೆಡೆರಡು ಸಚಿವ ಸ್ಥಾನಗಳನ್ನ ನೀಡಲಾಗಿದೆ. ಹಾಸನದಲ್ಲೂ ಸಚಿವ ಸ್ಥಾನಕ್ಕೆ ದೊಡ್ಡ ಪೈಪೋಟಿ ಇದ್ರೂ ಹೆಚ್​.ಡಿ.ರೇವಣ್ಣನವರನ್ನ ಉಪೇಕ್ಷಿಸಿ ಕೊಡುವಂತಿರಲಿಲ್ಲ. ಸಕಲೇಶಪುರ ಶಾಸಕ ಹೆಚ್​.ಕೆ.ಕುಮಾರಸ್ವಾಮಿ ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಚಿವ ಸ್ಥಾನದಿಂದ ವಂಚಿತರಾಗಿದ್ರು. ಆದ್ರೆ ಇದೀಗ ಸಂಪುಟ ವಿಸ್ತರಣೆ ವೇಳೆ ಇಬ್ಬರಲ್ಲಿ ಒಬ್ಬರಿಗೆ ಮಂತ್ರಿಗಿರಿ ಸಿಗೋದು ಬಹುತೇಕ ಖಚಿತವಾಗಿದೆ. ಹೀಗಾಗಿ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಹೆಚ್ಚಾಗಿದೆ. ಇಬ್ಬರೂ ತಮ್ಮ ಪರವಾಗಿ ಭರ್ಜರಿ ಲಾಬಿ ನಡೆಸ್ತಿದ್ದಾರೆ.

ನಾಳೆಯಿಂದ ಸಂಪುಟ ವಿಸ್ತರಣೆ ಕಸರತ್ತು.!

ಸಂಪುಟ ವಿಸ್ತರಣೆಯ ಮೂಲಕ ಎಲ್ಲರಿಗೂ ಸಮಾಧಾನ ಪಡಿಸೋಕೆ ಸಾಧ್ಯವಾಗಲ್ಲ. ವಂಚಿತ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಏಳೋದು ಕೂಡ ಸ್ಪಷ್ಟ. ಇದು ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಸಂಪುಟ ವಿಸ್ತರಣೆ ಮುಂದೂಡೋಕೂ ಕೂಡ ಪಕ್ಷದಲ್ಲಿ ಚರ್ಚೆ ನಡೀತಿದೆ. ಇದೆಲ್ಲದಕ್ಕೂ ಇಂಪಾರ್ಟೆಂಟ್​ ಅಂದ್ರೆ ಅತೃಪ್ತ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟು ಕೂತಿದೆ. ಇವರ ಅತೃಪ್ತಿಯನ್ನ ಬಳಸಿಕೊಳ್ಳಲು ಬಿಜೆಪಿ ಹವಣಿಸ್ತಿದೆ. ಒಟ್ನಲ್ಲಿ ಸಂಪುಟ ವಿಸ್ತರಣೆ ಸಮ್ಮಿಶ್ರ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ವರಿದಿ : ದಶರಥ್​ ಸಾವೂರು, ಪೊಲಿಟಿಕಲ್​ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES