Top

ಅಳಿವಿನ ಅಂಚಿನಲ್ಲಿ ಗಾಂಧಿ ಸ್ಮಾರಕ ಭವನ.!

ಅಳಿವಿನ ಅಂಚಿನಲ್ಲಿ ಗಾಂಧಿ ಸ್ಮಾರಕ ಭವನ.!
X

ರಾಮನಗರು : ಮಹಾತ್ಮ ಗಾಂಧೀಜಿ ಅವರ ನೆನಪಿನ ಸ್ಮಾರಕ ಇಂದು ಸೋಮಾರಿಗಳ ಆವಾಸ ಸ್ಥಾನವಾಗಿದೆ. ಗಾಂಧೀಜಿಯವರು ಬಂದು ಹೋದ ನೆನಪಿಗಾಗಿ ಸ್ಮಾರಕವನ್ನು ಕಟ್ಟಲಾಗಿತ್ತು.

ಸ್ಮಾರಕವನ್ನ ಕೇಂದ್ರ ಗ್ರಂಥಾಲಯವಾಗಿ ಮಾರ್ಪಾಡು ಮಾಡಿ, ಪಾರಂಪರಿಕತೆಯನ್ನು ಉಳಿಸಿಕೊಳ್ಳಲಾಗಿತ್ತು. ಆದ್ರೆ ಈಗ ಅದೇ ಸ್ಮಾರಕ ಪ್ರತಿನಿತ್ಯ ಕೆಲಸವಿಲ್ಲದೇ, ಕುಡಿದು ಮಲಗೋ ಸೋಮಾರಿಗಳ ತಾಣವಾಗಿದೆ. ಸ್ಮಾರಕವನ್ನ ಸಂರಕ್ಷಿಸಬೇಕಾದ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿ, ಕಣ್ಣಿದು ಕುರುಡಾಗಿದೆ.

ಸೋಮಾರಿ ಕಟ್ಟೆಯಾಗಿರುವ ಗಾಂಧೀ ಭವನ

ಹೌದು.. ಬೀಳುವ ಹಂತದಲ್ಲಿರುವ ಕಟ್ಟಡದ ಗೋಡೆಗಳು. ಕಟ್ಟಡದ ಆವರಣದೊಳಗೆ ಮಲಗಿರೋ ಸೋಮಾರಿಗಳು. ಸರಿಯಾಗಿ ನಿರ್ವಾಹಣೆ ಇಲ್ಲದೆ ಆವರಣದಲ್ಲಿ ಬೆಳದು ನಿಂತಿರುವ ಗಿಡಗಡ್ಡೆಗಳು. ಅಂದಹಾಗೆ ಇಂತಹ ದೃಶ್ಯಕಂಡು ಬರೋದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣದಲ್ಲಿ.

ಹತ್ತು ದಶಕಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಚನ್ನಪಟ್ಟಣಕ್ಕೆ ಬಂದು ಹೋದ, ನೆನಪಿಗಾಗಿ ಗಾಂಧಿ ಹೆಸರಿನಲ್ಲಿ ಭವನವನ್ನು ನಿರ್ಮಾಣ ಮಾಡಲಾಗಿತ್ತು. ನಂತರ ಇದನ್ನು ಗ್ರಾಂಥಾಲಯವಾಗಿ ಮಾರ್ಪಾಡು ಮಾಡಲಾಗಿದೆ.

ಯಾವುದೇ ಕ್ಷಣದಲ್ಲೂ ಬೀಳಬಹುದು..

ಆದ್ರೆ ಈಗ ಅದೇ ಸ್ಮಾರಕ ಪ್ರತಿನಿತ್ಯ ಕೆಲಸ ಇಲ್ಲದೇ ಕುಡಿದು ಮಲಗೋರ ತಾಣವಾಗಿದೆ. ತಂಪಾಗಿ ಮಲಗೋದಕ್ಕೆ ಸ್ಮಾರಕವನ್ನ ಉಪಯೋಗಿಸಿಕೊಳ್ಳಲಾಗುತ್ತಿದೆ. ಇದನ್ನ ಸಂರಕ್ಷಿಸಿಸಬೇಕಾದ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲಾಗಿದೆ.

ಇನ್ನೂ ಗಾಂಧಿ ಗ್ರಾಂಥಾಲಯ ಪ್ರತಿನಿತ್ಯ ಬೆಳಿಗ್ಗೆ 8 ರಿಂದ 12 ಗಂಟೆವರೆಗೆ ತೆರೆಯಲಾಗುತ್ತೆ. ಗ್ರಾಂಥಾಲಯ ಮುಚ್ಚಿರುವ ಸಮಯದಲ್ಲಿ ವಿಶಾಂತ್ರಿಗೆಂದು ಇಲ್ಲಿ ಬರುವ ಜನ, ಮಲಗಿಕೊಳ್ತಾರೆ. ಈ ಮೂಲಕ ತಮ್ಮ ಸೋಮಾರಿ ಕಟ್ಟೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ದಶಕಗಳ ಹಿಂದೆ ಕಟ್ಟಿರುವ ಹಳೆಯ ಕಟ್ಟಡ ಇದಾಗಿರುವುದರಿಂದ, ಇದೀಗ ಶಿಥಿಲಾವ್ಯಸ್ಥೆಗೆ ತಲುಪಿದೆ. ಹೀಗಾಗಿ ಯಾವುದೇ ಸಮಯದಲ್ಲಿ ಆದರೂ ಬೀಳುವ ಸಂಭವವಿದೆ. ಒಂದು ವೇಳೆ ವಿಶಾಂತ್ರಿಗೆಂದು ಜನ ಮಲಗಿರುವ ಸಮಯದಲ್ಲಿ ಕಟ್ಟಡವೇನಾದ್ರು ಬಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ.

ರಾತ್ರಿಯಾದರೇ ಕುಡುಕರ ಅಡ್ಡ..

ಇನ್ನೂ ರಾತ್ರಿ ವೇಳೆಯಲ್ಲಿ ಗ್ರಾಂಥಾಲಯ ಕುಡುಕರ ತಾಣವಾಗುತ್ತದೆ. ಇಷ್ಟಾದ್ರು ಇಲ್ಲಿನ ಸಿಬ್ಬಂದಿ ಮಾತ್ರ ಯಾವುದಕ್ಕೂ ತಲೆಕೆಡಿಕೊಳ್ಳುತ್ತಿಲ್ಲ. ಈಗಲಾದ್ರು ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚೆತ್ತುಕೊಂಡು ಗ್ರಂಥಾಲಯವನ್ನು ಉಳಿಸಿ, ಕಟ್ಟವನ್ನು ದುರಸ್ಥಿ ಮಾಡಬೇಕೆಂಬುದು ಸ್ಥಳೀಯರ ಆಗ್ರಹ.

ಒಟ್ಟಾರೆ ಸೋಮಾರಿ ಕಟ್ಟೆಗೆ, ಕುಡುಕರ ಅಡ್ಡೆಗೆ ಬ್ರೇಕ್‌ ಹಾಕಿ, ಯಾವುದೇ ಅನಾವುತ ಸಂಭಸುವ ಮುಂಚಿತವಾಗಿ ತಾಲ್ಲೂಕು ಆಡಳಿತ ಹೆಚ್ಚೆತ್ತುಕೊಂಡು ಕಟ್ಟಡವನ್ನು ದುರಸ್ಥಿ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹ.

ವರದಿ : ನಟರಾಜ್ ಬೆಳಕವಾಡಿ, ಟಿವಿ 5 ರಾಮನಗರ.

Next Story

RELATED STORIES