Top

ನಕಲಿ ಪತ್ರಕರ್ತರ ಬಂಧನ

ನಕಲಿ ಪತ್ರಕರ್ತರ ಬಂಧನ
X

ಬೆಳಗಾವಿ : ಸರ್ಕಾರಿ ವೈದ್ಯೆಗೆ ಹಣ ನೀಡುವಂತೆ ಬ್ಲಾಕ್ ಮೇಲ್‌ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಬಂಧಿತ ಮೂವರನ್ನು ಬಾಗಲಕೋಟೆ ಜಿಲ್ಲೆಯ ಬನ್ನಹಟ್ಟಿಯ ಪರಶುರಾಮ ಹೊಸಮನಿ, ಮೂಧೋಳದ ಇಸ್ಮಾಯಿಲ್ ಅಬ್ದುಲ್ ಕುಡಚಿ ಹಾಗೂ ರಾಮದುರ್ಗ ಶೈಲಾ ಹೊಸಮನಿ ಎಂದು ಗುರುತಿಸಲಾಗಿದೆ.

ರಾಮದುರ್ಗ ಸರ್ಕಾರಿ ಆಸ್ಪತ್ರೆಯ ವೈದ್ಯೆ ವಿದ್ಯಾವತಿ ಅಮಿನಬಾವಿ ಎಂಬುವವರಿಗೆ ಹಣ ನೀಡುವಂತೆ ಪೀಡಿಸುತ್ತಿದ್ದರು. ಪ್ರಜಾ ಜಗತ್ತು ಮಾಸಿಕ ಪತ್ರಿಕೆ ಉಪ ಸಂಪಾದಕ, ಎಂದು ಹೇಳಿ ಹೆದರಿಸುತ್ತಿದ್ದು, 80 ಸಾವಿರ ಹಣ ನೀಡದಿದ್ದರೆ ನಿನ್ನ ವರದಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದರು.

ಈ ಸಂಬಂಧ ದಿನೇ ದಿನೇ ಡಾಕ್ಟರ್ ವಿದ್ಯಾವತಿ ಬಳಿ ತೆರಳುತ್ತಿದ್ದ ಆರೋಪಿಗಳು, ಹಣಕ್ಕಾಗಿ ಒತ್ತಾಯಿಸುತ್ತಿದ್ದರು. ಆದರೇ ಹಣ ಡಾಕ್ಟರ್‌ ವಿದ್ಯಾವತಿ ಇವರ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ.

ಪತ್ರಕರ್ತರು ಎಂದು ಹೇಳಿಕೊಂಡು ವಸೂಲಿಗೆ ಇಳಿದಿದ್ದ ನಕಲಿ ಪತ್ರಕರ್ತರ ಬಗ್ಗೆ ಅನುಮಾನ ಬಂದ ಡಾಕ್ಟರ್ ವಿದ್ಯಾವತಿ, ಹಣಕ್ಕೆ ಬೇಡಿಕೆ ಇಟ್ಟವರ ವಿರುದ್ಧ ರಾಯದುರ್ಗ ಪೊಲೀಸರಿಗೆ ದೂರು ನೀಡಿದರು.

ಡಾಕ್ಟರ್‌ ವಿದ್ಯಾವತಿ ನೀಡಿದ ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದ ರಾಯದೂರ್ಗ ಪೊಲೀಸರು, ಮೂವರು ಆರೋಪಿಗಳನ್ನು ಬಂದಿಸಿದ್ದಾರೆ. ಈ ಮೂಲಕ ನಕಲಿ ಪತ್ರಕರ್ತರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Next Story

RELATED STORIES