Top

ತಾಲೂಕು ಕಚೇರಿಯಲ್ಲಿ ಸತ್ತು ಹೋಯ್ತಾ ಮಾನವೀಯತೆ..?

ತಾಲೂಕು ಕಚೇರಿಯಲ್ಲಿ ಸತ್ತು ಹೋಯ್ತಾ ಮಾನವೀಯತೆ..?
X

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಾ ಕಚೇರಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತನ್ನ ಮಗುವಿನ ಅಂಗವಿಕಲ ವೇತನಕ್ಕಾಗಿ ತಾಯಿಯೋರ್ವಳು ವಿಕಲಚೇತನ ಮಗುವನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಆದರೂ ಅಲ್ಲಿಯ ಸಿಬ್ಬಂದಿಗಳ ಕಲ್ಲು ಮನಸ್ಸು ಕರಗಲೇ ಇಲ್ಲ.

ಪಾವಸಂದ್ರ ಗ್ರಾಮದ ಮಹಿಳೆ ಕುಮಾರಿ ತನ್ನ 7 ವರ್ಷದ ಅಂಗವಿಕಲ ಮಗ ಹರೀಶನಿಗೆ ಅಂಗವಿಕಲ ವೇತನಕ್ಕಾಗಿ ಅರ್ಜಿ ಹಾಕಲು ಬಂದಿದ್ರು. ಮಗುವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದ ಮೇಲೆ ಎತ್ತಿಕೊಂಡು ಸಿಬ್ಬಂದಿಗಳ ಬಳಿ ಮಾಹಿತಿ ಕೇಳಿದ್ದಾಳೆ. ಆದರೂ ಯಾರೂ ಈ ಬಡ ಮಹಿಳೆ ಮಾತು ಕೇಳಿಲ್ಲ. ಸೊಂಟ‌ ಸೋತು ಬಂದಾಗ ಕಚೇರಿ ಕೌಂಟರ್ ಕೆಳಗೆ ಮಗುವನ್ನು ಮಲಗಿಸಿ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ ಆಗಲೂ ಅರೆಬರೆ ಮಾಹಿತಿ‌ ನೀಡಿದ್ದಾರೆ. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮಂಜುನಾಥ್ ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ತಾಲೂಕಾ ಕಚೇರಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಅಂಗವಿಕಲ ವೇತನದ ಅರ್ಜಿ ಹಾಕಲು ಸಹಾಯ ಮಾಡಿದ್ದಾರೆ. ಈ ನಡುವೆ ಒಂದೂವರೆ ವರ್ಷದ ಹಿಂದೆಯೇ ಮಧ್ಯವರ್ತಿ ಕೆಂಪಣ್ಣ‌ಎನ್ನುವ ವ್ಯಕ್ತಿ ಅಂಗವಿಕಲ ವೇತನ ಕೊಡಿಸುವುದಾಗಿ ಹೇಳಿ 1300 ರೂ. ವಸೂಲಿ ಮಾಡಿದ್ದಾನಂತೆ. ಆದರೆ ಕೆಲಸ ಮಾಡಿಕೊಡದ ಕಾರಣ ಮಹಿಳೆ ತನ್ನ ಮಗುವನ್ನು ಕರೆದುಕೊಂಡು ತಾಲೂಕಾ ಕಚೇರಿಗೆ ಬಂದಿದ್ದಾಳೆ.

Next Story

RELATED STORIES