Top

ಲಾರ್ಡ್ಸ್‌ನಲ್ಲಿ ಎಲ್ಲರ ಗಮನ ಸೆಳೆದ ಅರ್ಜುನ್ ತೆಂಡೂಲ್ಕರ್

ಲಾರ್ಡ್ಸ್‌ನಲ್ಲಿ ಎಲ್ಲರ ಗಮನ ಸೆಳೆದ ಅರ್ಜುನ್ ತೆಂಡೂಲ್ಕರ್
X

ಲಂಡನ್ : ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸವ್ಯ ಸಚಿನ್​ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಖತ್ ಸೌಂಡ್ ಮಾಡಿದ್ದಾರೆ. ಮೊನ್ನೆಯಷ್ಟೆ ಇಂಗ್ಲೆಂಡ್ ಆಟಗಾರ್ತಿ ಜೊತೆ ಡಿನ್ನರ್ ಪಾರ್ಟಿ ಮಾಡಿ ಸದ್ದು ಮಾಡಿದ್ದ ಅರ್ಜುನ್ ಇದೀಗ ಗ್ರೌಂಡ್ಸ್​ ಮನ್​ ಆಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸದ್ಯ ಆಂಗ್ಲರ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಟೆಸ್ಟ್ ನಡೆಯುತ್ತಿರುವ ಹಿನ್ನೆಲಯಲ್ಲಿ ಟೀಂ ಇಂಡಿಯಾ ಬ್ಯಾಟ್​ ಮನ್​ಗಳಿಗೆ ಅರ್ಜುನ್ ನೆಟ್ಸ್​ ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ ಕ್ಯಾಂಪ್​ನಲ್ಲಿರುವ ಅರ್ಜುನ್ ನಿನ್ನೆ ಎರಡನೇ ದಿನದಾಟದ ಪಂದ್ಯ ನಡೆಯುವ ವೇಳೆ ಮಳೆ ಬಂದಾಗ ಅರ್ಜುನ್ ತೆಂಡೂಲ್ಕರ್ ಇಲ್ಲಿನ ಪಿಚ್ ಸಿದ್ದಪಡಿಸುವ ಗ್ರೌಂಡ್ಸ್​ ಮನ್​ಗಳಿಗೆ ಮಳೆಯಿಂದ ಒದ್ದೆಯಾಗಿದ್ದ ಕ್ರೀಡಾಂಗಣವನ್ನ ತಯಾರು ಮಾಡಲು ನೆರವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಲಾರ್ಡ್ಸ ಕ್ರಿಕೆಟ್​ ಗ್ರೌಂಡ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದೆ.

Next Story

RELATED STORIES