Top

ಟೆಸ್ಟ್ ಸ್ಪೆಶಲಿಸ್ಟ್ ಅಲ್ಲ ರನೌಟ್​ ಸ್ಪೆಶಲಿಸ್ಟ್ ಪೂಜಾರ..!

ಟೆಸ್ಟ್ ಸ್ಪೆಶಲಿಸ್ಟ್ ಅಲ್ಲ ರನೌಟ್​ ಸ್ಪೆಶಲಿಸ್ಟ್ ಪೂಜಾರ..!
X

ಲಂಡನ್ : ಟೀಂ ಇಂಡಿಯಾದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ನಿನ್ನೆ ಆಂಗ್ಲರ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ರನೌಟ್​ ಆಗುವ ಮೂಲಕ ಟೆಸ್ಟ್ ನಲ್ಲಿ ಅತಿ ಹೆಚ್ಚು ಬಾರಿ ರನೌಟ್​ ಆದ ಬ್ಯಾಟ್ಸ್ ಮನ್​ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ದಿನದಾಟದ ಪಂದ್ಯದಲ್ಲಿ ಒಂದನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರ ನಾಯಕ ವಿರಾಟ್ ಕೊಹ್ಲಿ ಜೊತೆ ಆಡುವಾಗ ಅನಗತ್ಯ ರನ್​ ಕದಿಯಲು ಹೋಗಿ ರನೌಟ್​ ಬಲೆಗೆ ಬಿದ್ರು. ಇದರೊಂದಿಗೆ ಟೆಸ್ಟ್ ನಲ್ಲಿ ತಮಗೆ ಬೇಡವಾದ ದಾಖಲೆಯೊಂದನ್ನ ಬರೆದ್ರು. ನಿನ್ನೆ 41ನಿಮಿಷಗಳ ಕಾಲ ಆಡಿದ ಪೂಜಾರ 25 ಎಸೆತ ಎದುರಿಸಿ ಗಳಿಸಿದ್ದು ಕೇವಲ 1 ರನ್ ಕಳೆದ 10 ವರ್ಷಗಳಲ್ಲಿ ಪೂಜಾರ ಎಂಟನೆ ಬಾರಿ ರನೌಟಾದ ದಾಖಲೆ ಬರೆದ್ರು. ಇಂಗ್ಲೆಂಡ್​ ತಂಡದ ಮ್ಯಾಟ್​ ಪ್ರಿಯರ್, ಶ್ರೀಲಂಕಾ ತಂಡದ ರಂಗನಾ ಹೆರತ್, ಆಸೀಸ್ ನ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಮತ್ತು ನ್ಯೂಜಿಲೆಂಡ್​ನ ರಾಸ್ ಟೇಲರ್ ಅವರುಗಲ ದಾಖಲೆ ಸರಿಗಟ್ಟಿದ್ರು. ಇತ್ತೀಚೆಗೆ 13 ರನೌಟ್​ಗಳ ಪೈಕಿ 8 ಬಾರಿ ಪೂಜಾರ ತಂಡದಲ್ಲಿ ಅತಿ ಹೆಚ್ಚು ಬಾರಿ ರನೌಟ್​ ಆಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ ಎರಡು ಇನ್ನಿಂಗ್ಸ್​ಗಳಲ್ಲೂ ರನೌಟ್​ ಆಗಿ ಅಚ್ಚರಿ ಮೂಡಿಸಿದ್ದರು.

Next Story

RELATED STORIES