Top

ಮಕ್ಕಳ ಕೈಯಲ್ಲಿ ಶೌಚಾಲಯ, ಬೈಕ್ ತೊಳೆಸಿ ಶಿಕ್ಷಕನ ದರ್ಪ

ಮಕ್ಕಳ ಕೈಯಲ್ಲಿ ಶೌಚಾಲಯ, ಬೈಕ್ ತೊಳೆಸಿ ಶಿಕ್ಷಕನ ದರ್ಪ
X

ಬೆಳಗಾವಿ : ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ.. ಗುರು ಸಾಕ್ಷಾತ್ಹ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ಅಂತ ಶಾಲೆಯಲ್ಲಿ ಪಾಠ ಬೋಧಿಸೊ ಶಿಕ್ಷಕನನ್ನ ಪೂಜ್ಯ ಭಾವನೆಯಿಂದ ಕಾಣೋದನ್ನ ನಾವೆಲ್ಲ ನೋಡಿದಿವಿ. ಆದ್ರೆ ಇಲ್ಲೊಬ್ಬ ಶಿಕ್ಷಕ ಇದಕ್ಕೆಲ್ಲ ಅಪವಾದವಾಗಿದ್ದಾನೆ. ಶಾಲೆಗೆ ಅಕ್ಷರ ಕಲಿಯಲು ಬಂದ ಮಕ್ಕಳ ಕೈಲಿ ಶೌಚಾಲಯ, ಬೈಕ್ ತೊಳೆಸುವ ಮೂಲಕ ದರ್ಪ ಮೆರೆದಿದ್ದಾನೆ.

ಶಾಲೆಯಲ್ಲಿ ನಾಲ್ಕಕ್ಷರ ಕಲಿಸೋ ಗುರುವನ್ನ ನಮ್ಮ ಸಮಾಜ ಪೂಜನಿಯ ಭಾವದಿಂದ ಕಾಣುತ್ತೆ. ಆದ್ರೆ ಹೀಗೆ ಪೂಜನಿಯ ಭಾವದಿಂದ ನಾವ್ ನೀವೆಲ್ಲ ಕಾಣೊ ಗುರುವೆ ಅಡ್ಡದಾರಿ ಹಿಡಿದ್ರೆ. ಹೌದು... ಇಲ್ಲಾಗಿದ್ದು ಅದೇ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಕನ್ನಡ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಜೈಪಾಲ್ ಭಜಂತ್ರಿ ಎಂಬಾತ ಶಾಲೆಯ ಅವಧಿಯಲ್ಲಿ ಮಕ್ಕಳಿಗೆ ಪಾಠ ಹೇಳೆದೊದನ್ನ ಬಿಟ್ಟು ಮುಗ್ದ ಮಕ್ಕಳ ಕೈಯಲ್ಲಿ ತನ್ನ ಬೈಕನ್ನು ತೊಳೆಸಿದ್ದಾನೆ. ಅಷ್ಟೇ ಅಲ್ಲ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಶಾಲೆಯ ಶೌಚಾಲಯವನ್ನು ತೊಳೆಸಿದ್ದು, ಶಿಕ್ಷಕನ ಅಂದಾ ದರ್ಬಾರ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಶಿಕ್ಷಕ ಜೈಪಾಲ್ ಭಜಂತ್ರಿ ಈ ರೀತಿ ಮಕ್ಕಳನ್ನ ಶೌಚಾಲಯ, ಬೈಕ್ ತೊಳೆಸೊದಕ್ಕೆ ಬಳಸಿಕೊಂಡಿದ್ದು ಇದೆ ಮೊದಲೆನಲ್ಲ. ಹೀಗೆ ಹಲವು ಭಾರಿ ಈ ಶಿಕ್ಷಕ ಮಕ್ಕಳನ್ನ ಬಳಸಿಕೊಂಡು ಇಂತಹ ಕೃತ್ಯ ಎಸಗಿದ್ದಾರೆ. ಆದ್ರೇ, ಈ ಬಗ್ಗೆ ಸ್ಥಳಿಯರು ಗಮನಕ್ಕೆ ಬರುತ್ತಿದ್ದಂತೆ ಮೊನ್ನೆಯ ದಿನ ಶಿಕ್ಷಕ ಮತ್ತೆ ಮಕ್ಕಳ ಕೈಲಿ ಬೈಕ್ ಮತ್ತು ಶೌಚಾಲಯ ತೊಳೆಸುತ್ತಿದ್ದಾಗ ಸ್ಥಳಿಯರು ಗೌಪ್ಯವಾಗಿ ಶಾಲೆಯ ಕಿಟಕಿ ಮೂಲಕ ತಮ್ಮ ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ. ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಬಿಇಓ, ಶಿಕ್ಷಕ ಜೈಪಾಲ್ ಭಜಂತ್ರಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಒಟ್ನಲ್ಲಿ ನಮ್ಮ ಮಕ್ಕಳು ಚೆನ್ನಾಗಿ ಶಾಲೆ ಕಲಿತು ಮುಂದೆ ಬರಲಿ ಅಂತಿದ್ದ ಪೋಷಕರು ಇದೀಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಇಂತಹ ಶಿಕ್ಷಕರಿಗೆ ತಕ್ಕ ಪಾಠ ಕಾಲಿಸುವ ಮೂಲಕ ಇಂತಹ ಕೃತ್ಯಗಳಿಗೆ ಅಂತ್ಯಹಾಡಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ ಬೆಳಗಾವಿ

Next Story

RELATED STORIES