Top

ಕಿಡ್ನಿ ಸಮಸ್ಯೆಗೆ ಔಷಧಿ ಅಂತ ತಗೊಂಡ್ರೇ, ಆಗಿದ್ದೇನು ಗೊತ್ತಾ.?

ಕಿಡ್ನಿ ಸಮಸ್ಯೆಗೆ ಔಷಧಿ ಅಂತ ತಗೊಂಡ್ರೇ, ಆಗಿದ್ದೇನು ಗೊತ್ತಾ.?
X

ವಿಜಯಪುರ : ಕಿಡ್ನಿ ಕಾಯಿಲೆ ಗುಣ ಮಾಡ್ತೆನೆ ಎಂದು ನೀಡಿದ ವನಸ್ಪತಿ ಔಷಧ... ವ್ಯಾಪಾರಸ್ಥ ನೀಡಿದ ಔಷಧಿಯಿಂದ ಆಯ್ತು ರಿಯಾಕ್ಷನ್... ಜಮೀನು ಮಾರಿ ಔಷಧಿ ಅಂಗಡಿಯವನಿಗೆ ಹಣ ಕೊಟ್ಟಿದ್ದ ರೋಗಿಗಳು ಕಂಗಾಲ್...

ಹೌದು ನೀವು ಯಾರ ಬಳಿಯೂ ಹೋಗಬೇಡಿ, ನಿಮ್ಮ ಕಿಡ್ನಿ ಕಾಯಿಲೆ ನಾನು ಗುಣಪಡಿಸುತ್ತೇನೆ ಎಂದು ಹೇಳಿದ್ದ ಔಷಧಿ ಅಂಗಡಿ ವ್ಯಾಪಾರಸ್ಥ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಜಯಪುರ ನಗರದಲ್ಲಿರುವ ಧಾರವಾಡಕರ ವನಸ್ಪತಿ ಔಷಧಿ ಮಳಿಗೆಯ ಮಾಲೀಕ ಅನೀಲ ಧಾರವಾಡಕರ ಎಂಬುವರೇ ಹೀಗೆ ವಂಚಿಸಿದ ವ್ಯಕ್ತಿಯಾಗಿದ್ದಾರೆ.

ಮೂಲತಹ ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದ ವಿಠ್ಠಲ ತುಕಾಜಿ ಹಾಗೂ ಎಮ್ ಡಿ ನಿಸಾರ್ ಕಿಡ್ನಿ ಸಮಸ್ಯೆಗೆ ಇಂತಹ ವಂಚಕನಿಂದ ಔಷಧಿ ಪಡೆದು, ವಂಚನೆಗೆ ಒಳಗಾದವರಾಗಿದ್ದಾರೆ. ಇವರಿಬ್ಬರಿಗೂ ಕಿಡ್ನಿ ವೈಫಲ್ಯವಾಗಿದ್ದು ಚಿಕಿತ್ಸೆಗಾಗಿ ಅಲೆದಾಡುತ್ತಾ ವಿಜಯಪುರದಲ್ಲಿ ದಾಖಲಾಗಿದ್ದರು.

ಈ ವೇಳೆ ಎರಡು ತಿಂಗಳ ಹಿಂದೆ ಧಾರವಾಡಕರ ವನಸ್ಪತಿ ಔಷಧಿ ಅಂಗಡಿಗೆ ಬಂದಿದ್ದಾರೆ. ಅಂಗಡಿಯ ಮಾಲೀಕ ಅನೀಲ ನಿಮ್ಮ ಕಿಡ್ನಿ ಕಾಯಿಲೆ ನಾನು ಗುಣಪಡಿಸುತ್ತೇನೆ. ನಾನು ಕೊಡುವ ಔಷಧಿ, ಹೊಟ್ಟೆ ಮೇಲೆ ಲೇಪಿಸಿದರೇ ಸಾಕು ನಿಮ್ಮ ಕಿಡ್ನಿ ಸಮಸ್ಯೆ ಪರಿಹಾರವಾಗಲಿದೆ ಎಂದು ನಂಬಿಸಿದ್ದಾರೆ.

ಕಿಡ್ನಿ ವೈಫಲ್ಯ ಚಿಕಿತ್ಸೆಗೆ ತಮ್ಮ ಬಳಿ ಹಣವಿಲ್ಲದೆ ಪರದಾಡಿದ್ದ ವಿಠ್ಠಲ ಹಾಗೂ ನಿಸಾರ ಹಣ ಹೊಂದಿಸಿ 3.70 ಲಕ್ಷ ರೂಪಾಯಿಗಳನ್ನು ಆರ್ ಟಿ ಜಿ ಎಸ್ ಮೂಲಕ ಮತ್ತು 50 ಸಾವಿರ ರೂಪಾಯಿಗಳನ್ನು ಅನೀಲ ಧಾರವಾಡಕರ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಿದ್ದಾರೆ.

ಹಣ ತುಂಬಿ ಪಡೆದ ವನಸ್ಪತಿ ಔಷಧಿಗಳು ಕಾಯಿಲೆಯನ್ನು ಗುಣಪಡಿಸುವ ಬದಲು ಮಾರಕವಾಗಿದ್ದು, ಇದೀಗ ಜೀವಕ್ಕೆ ಕುತ್ತು ತಂದಿವೆ. ಹಣದ ಆಸೆಗೆ ಬೇಕಾಬಿಟ್ಟಿ ಔಷಧ ನೀಡಿ ಮುಗ್ದ ಹಾಗೂ ಬಡ ರೋಗಿಗಳನ್ನು ವಂಚಿಸುತ್ತಿರುವ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರೋಗಿಗಳು ಆಗ್ರಹಿಸಿದ್ದಾರೆ.

ಇನ್ನು ಈ ಕುರಿತು ಅಂಗಡಿ ಮಾಲೀಕ ಅನೀಲನನ್ನು ಕೇಳಿದ್ರೆ ಆತ ಹೇಳೋದೆ ಬೇರೆ, ನಾನು ಔಷಧಿ ನೀಡಿದ್ದು ನಿಜ. ಆ ಔಷಧಿ ಲೇಪನದಿಂದ ನೋವು ಕಡಿಮೆಯಾಗುತ್ತದೆ. ಹೊರತಾಗಿ ಕಿಡ್ನಿ ವಾಸಿಯಾಗುದಿಲ್ಲ. ನಾನು ಕಿಡ್ನಿ ಸರಿಪಡಿಸುವ ಔಷಧಿ ಎಂದು ಅವರಿಗೆ ಹೇಳಿಲ್ಲ. ಕೇವಲ ನೋವು ಕಡಿಮೆ ಆಗುವ ಔಷಧಿಯನ್ನಷ್ಟೆ ನೀಡಿದ್ದೇನೆ, ಇಬ್ಬರಿಂದ ಹಣ ಪಡೆದಿರುವುದು ನಿಜ. ಔಷಧಿಯಿಂದ ರಿಯಾಕ್ಷನ್ ಆಗಿಲ್ಲ. ಅವರಿಂದ ಔಷಧಿಗಾಗಿ ಪಡೆದು ಹಣ ವಾಪಸ್ಸು ನೀಡುತ್ತೇನೆ ಎಂದಿದ್ದಾರೆ.

ಆದ್ರೇ, ಅಂಗಡಿಯವರು ನೀಡಿದ ಔಷಧಿಗೆ ಇಬ್ಬರಿಗೂ ರಿಯಾಕ್ಷನ್ ಆಗಿದೆ. ಹೀಗಾಗಿ ಮತ್ತೆ ಕಲಬುರಗಿಯ ಆಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂಬುದು ರೋಗಿಗಳ ಆರೋಪವಾಗಿದೆ. ಅಲ್ಲದೇ ಹಣದ ಆಸೆಗಾಗಿ ಅನೀಲ ಧಾರವಾಡಕರ ಯಾವುದೋ ನಾಟಿ ಔಷಧಿ ನೀಡಿ ನಮಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಸೋ ಸಾರ್ವಜನಿಕರೇ ಹುಷಾರಾಗಿರಿ, ನಿಮ್ಮ ಸಮಸ್ಯೆಗೆ ಸೂಕ್ತಿ ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆ, ಔಷಧಿ ಪಡೆದು ಹಾರೈಕೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಹೀಗೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES