Top

ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ಮದುವೆಗೆ ಮುಹೂರ್ತ ಫಿಕ್ಸ್

ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ಮದುವೆಗೆ ಮುಹೂರ್ತ ಫಿಕ್ಸ್
X

ಸ್ಯಾಂಡಲ್​ವುಡ್​ನ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಮದುವೆಗೆ ವೇದಿಕೆ ಸಿದ್ಧವಾಗಿದೆ.. ಗೋವಿಂದಾಯನ ನಮ:, ಗೂಗ್ಲಿ, ರಣವಿಕ್ರಮ, ಜೆಸ್ಸಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರೋ, ನಿರ್ದೇಶಕ ಪವನ್ ಒಡೆಯರ್ ನಟಿ ಅಪೇಕ್ಷಾ ಕೈ ಹಿಡಿಯುತ್ತಿದ್ದಾರೆ. ನಿಶ್ಚಿತಾರ್ಥ ಮಾಡ್ಕೊಂಡಿದ್ದ ಜೋಡಿ ಇದೀಗ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ದಾರೆ. ಇದೇ ಆಗಸ್ಟ್ 20ಕ್ಕೆ ಬಾಗಲಕೋಟೆಯಲ್ಲಿ ಮದುವೆ ಸಮಾರಂಭ ನಡೆಯಲಿದೆ.

ಫ್ಯಾಮಿಲಿ ಫ್ರೆಂಡ್​​​ ಮೂಲಕ ಪವನ್, ಅಪೇಕ್ಷಾ ಪರಿಚಿತರಾದ್ರಂತೆ. ಆಮೇಲೆ ಲವ್ ಗೂಗ್ಲಿ ಯಾರ್ ಬಿಟ್ರೊ ಗೊತ್ತಿಲ್ಲ. ಆದ್ರೆ, ಮದುವೆಗೆ ಪೋಷಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಇದು ಪಕ್ಕಾ ಅರೇಂಜ್ ಮ್ಯಾರೇಜ್. ಕಳೆದ ಡಿಸೆಂಬರ್​​​ನಲ್ಲಿ ಬಾಗಲಕೋಟೆಯಲ್ಲಿನ ಹರಿಪ್ರಿಯಾ ಹೊಟೇಲ್ ನಲ್ಲಿ ಪವನ್ ಒಡೆಯರ್ ಮತ್ತು ಅಪೇಕ್ಷಾ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು. ಎರಡು ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು.

ಎಂಗೇಜ್ಮೆಂಟ್ ಏನೋ ಸಿಂಪಲ್ಲಾಗಿ ಆಯ್ತು. ಆದ್ರೆ, ವಧು ಅಪೇಕ್ಷಾ ತವರು ಬಾಗಲಕೋಟೆಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ಆಗಸ್ಟ್​​ 20ಕ್ಕೆ ಬೆಳಗ್ಗೆ 9.05 ಕ್ಕೆ ಬಹಳ ಅದ್ಧೂರಿಯಾ ಮದುವೆ ನೆರವೇರಲಿದೆ. ಪವನ್, ಅಪೇಕ್ಷಾ ಇಬ್ರೂ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರೋದ್ರಿಂದ ಈ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್​ವುಡ್ ಸೂಪರ್ ಸ್ಟಾರ್ಸ್​​ ಜೊತೆಗೆ ಸಿನಿಮಾ ತಂತ್ರಜ್ಞರು, ಸ್ನೇಹಿತರು ತಾರೆಯರು ಸಾಕ್ಷಿಯಾಗಲಿದ್ದಾರೆ.

ಸದ್ಯ ಪವನ್ ಒಡೆಯರ್, ನಟಸಾರ್ವಭೌಮ ಸಿನಿಮಾ ಶೂಟಿಂಗ್​ನಿಂದ ಬ್ರೇಕ್ ತಗೊಂಡು, ಮದುವೆಗೆ ಅತಿಥಿಗಳನ್ನ ಆಹ್ವಾನಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್​ವುಡ್​​ನಲ್ಲಿ ಕಳೆದ ವರ್ಷ ಶುರುವಾದ ಸಾಲು ಸಾಲು ಮದುವೆ ಸಂಭ್ರಮ ಈ ವರ್ಷವೂ ಹೆಚ್ಚಾಗಿದ್ದು, ಪವನ್ ಒಡೆಯರ್-ಅಪೇಕ್ಷಾ ಕಲ್ಯಾಣೋತ್ಸವ ಆ ಕೊಂಡಿಯನ್ನ ಮುಂದುವರೆಸಿದೆ.

Next Story

RELATED STORIES