ಸೂಪರ್ ಸಿಎಂ ಪ್ರಭಾವ : ಬೆಳಗಾವಿಯಿಂದ ಕೆಶಿಫ್ ಕಚೇರಿ ಹಾಸನಕ್ಕೆ ಶಿಫ್ಟ್.?

ಬೆಳಗಾವಿ : ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರಭಾವಕ್ಕೆ ಬೆಳಗಾವಿಯಲ್ಲಿದ್ದ ಕೆಶಿಪ್ ಕಚೇರಿ ಹಾಸನಕ್ಕೆ ಶಿಫ್ಟ್ ಆಗಿವೆ.
ಒಂದೆಡೆ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಜನರು ಪ್ರತ್ಯೇಕ ರಾಜ್ಯದ ಹೋರಾಟ ಬೇಡವೇ ಬೇಡ... ಸುವರ್ಣ ಸೌಧಕ್ಕೆ ಅಗತ್ಯ ಕಚೇರಿಗಳನ್ನ ಸ್ಥಳಾಂತರಿಸುವುದಾಗಿ ಹೇಳಿದ್ರೆ.. ಇತ್ತ ದೋಸ್ತಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಕರೆಸಿಕೊಳ್ಳುವ ಹೆಚ್.ಡಿ.ರೇವಣ್ಣ ಸಾಹೇಬ್ರು.. ಬೆಳಗಾವಿಯ ಕೆಶಿಫ್ ಕಚೇರಿಯನ್ನ ಹಾಸನಕ್ಕೆ ಸಿಬ್ಬಂದಿ ಸಮೇತ್ ವರ್ಗಾಯಿಸಿದ್ದಾರೆ. ಇದು ಉತ್ತರ ಕರ್ನಾಟಕದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು... ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂದು ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ... ಪ್ರತ್ಯೇಕ ಕೂಗು ತಗ್ಗಿಸಲು ಸಿಎಂ ಕುಮಾರಸ್ವಾಮಿ ಬೆಳಗಾವಿಗೆ ಅಗತ್ಯ ಕಚೇರಿಗಳನ್ನ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು.
ಇದರ ಬೆನ್ನಲ್ಲೇ, ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣನರ ಪ್ರಭಾವದಿಂದ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವಿಭಾಗ ಮತ್ತು ಉಪ ವಿಭಾಗ ಕಚೇರಿಗಳನ್ನ ಹುದ್ದೆಗಳ ಸಮೇತ ಹಾಸನ ಜಿಲ್ಲೆಗೆ ವರ್ಗಾಯಿಸಿದ್ದಾರೆ. ಕೆಶಿಫ್ ವಿಭಾಗೀಯ ಕಚೇರಿಯನ್ನ ಹಾಸನಕ್ಕೆ ಮತ್ತು ಕೆಶಿಫ್ ಉಪ ವಿಭಾಗೀಯ ಕಚೇರಿಯನ್ನ ಮಡಿಕೇರಿಗೆ ವರ್ಗಾಯಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.
ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದು ಕರೆಸಿಕೊಳ್ಳುವ ಸಚಿವ ರೇವಣ್ಣನವರ ಈ ಕ್ರಮ ಉತ್ತರ ಕರ್ನಾಟಕದ ಜನರನ್ನ ಕೆರಳಿಸಿದೆ.. 500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುವರ್ಣ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳನ್ನ ವರ್ಗಾಯಿಸಿ ಎಂದು ಹೋರಾಟ ನಡೆಯುತ್ತಿರುವಾಗಲೇ. ಬೆಳಗಾವಿಯಲ್ಲಿದ್ದ ಕೆಶಿಫ್ ಕಚೇರಿಯನ್ನ ಹಾಸನಕ್ಕೆ ಶಿಫ್ಟ್ ಮಾಡಿದ್ದು ಮತ್ತೆ ಪ್ರತ್ಯೇಕ ರಾಜ್ಯದ ಕೂಗಿಗೆ ತುಪ್ಪ ಸುರಿದಂತಾಗಿದೆ.
ಇನ್ನು ಸಚಿವ ರೇವಣ್ಣನರ ಏಕಪಕ್ಷೀಯ ನಿರ್ಧಾರದಿಂದ ಉತ್ತರ ಕರ್ನಾಟಕದ ಜನರ ಪರದಾಡಬೇಕು.. ರಸ್ತೆ ನಿರ್ಮಾಣಕ್ಕೆ, ಭೂಮಿ ಕೊಟ್ಟ ರೈತರು ರಾಯಚೂರಗೆ ಎಡತಾಕಬೇಕು. ಕೆಶಿಫ್ ಕಚೇರಿ ಶಿಫ್ಟ್ ಆಗಿದ್ದರಿಂದ ಸಾಕಷ್ಟು ಯೋಜನೆಗಳು ಅರ್ಧಕ್ಕೆ ನಿಂತು ಹೋಗುತ್ತವೆ... ಜೊತೆಗೆ ಕೆಶಿಪ್ ಕಚೇರಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 20ಕ್ಕೂ ಅಧಿಕ ಸಿಬ್ಬಂದಿಗಳೂ ಬೀದಿಗೆ ಬೀಳುವಂತಾಗಿದೆ.
ಒಟ್ಟ್ನಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಿರ್ಧಾರದಿಂದ ಮತ್ತೆ ಉತ್ತರ ಕರ್ನಾಟಕವನ್ನ ಸಮ್ಮಿಶ್ರ ಸರ್ಕಾರ ಅನ್ಯಾಯವಾಗಿದೆ. ಈ ಮೂಲಕ ಕಚೇರಿ ಹಾಸನಕ್ಕೆ ಶಿಫ್ಟ್ ಆಗಿದ್ದು, ಉತ್ತರ ಕರ್ನಾಟಕ ಭಾಗದ ಅನೇಕ ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದು ದುರಂತವೇ ಸರಿ. ಈ ಬಗ್ಗೆ ಇನ್ನಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ರೇಕ್ ಹಾಗಿ, ಕಚೇರಿ ಹಾಸನಕ್ಕೆ ವರ್ಗಾವಣೆ ಮಾಡುವುದನ್ನು ತಪ್ಪಿಸಬೇಕು ಎಂಬುದು ಈ ಭಾಗದ ಜನರ ಕೋರಿಕೆಯಾಗಿದೆ.
ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ
- Belagavi Belagavi division Chief Minister HD Kumaraswamy developing North Karnataka Hassan kannada news today karnataka news today Karnataka State Highway Improvement Project KSHIP latest karnataka news madikeri North Karnataka North Karnataka have blamed pending KSHIP works Revenue Minister H D Revanna Suvarna Vidhana Soudha topnews tv5 kannada tv5 kannada live tv5 live tv5kannada news