Top

ಸೂರ್ಯಗ್ರಹದ ವೇಳೆ ಗರ್ಭಿಣಿಯರು ಪಾಲಿಸಬೇಕಾದ ಶಾಸ್ತ್ರ ನಿಯಮಗಳು

ಸೂರ್ಯಗ್ರಹದ ವೇಳೆ ಗರ್ಭಿಣಿಯರು ಪಾಲಿಸಬೇಕಾದ ಶಾಸ್ತ್ರ ನಿಯಮಗಳು
X

ಬೆಂಗಳೂರು : ನಾಳೆ ಭಾರತದ ಸಮಯ 1.30ರಿಂದ 5 ಗಂಟೆಯವರೆಗೆ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣಾವಧಿ ಮೂರೂವರೆ ಗಂಟೆ ಇರಲಿದೆ. ಭಾರತದಲ್ಲಿ ಸೂರ್ಯಗ್ರಹಣ ಮಾತ್ರ ಗೋಚರಿಸುವುದಿಲ್ಲ.

ಗ್ರಹಣದ ಬಗ್ಗೆ ಧರ್ಮದಲ್ಲಿ ಹಲವಾರು ನಂಬಿಕೆಗಳಿವೆ. ಆ ನಂಬಿಕೆಯಂತೆ ಕೆಲವೊಂದು ಶಾಸ್ತ್ರ ನಿಯಮಗಳನ್ನು ಪಾಲಿಸುವುದು ಒಳ್ಳೆಯದೆಂದು ನಂಬಲಾಗಿದೆ.

ಸೂರ್ಯಗ್ರಹಣದಂದು ಗರ್ಭಿಣಿಯರು ಏನು ಮಾಡಬಹುದು, ಏನು ಮಾಡಬಾರದು ಎಂಬುವುದರ ಕುರಿತು ಹೇಳಲಿದ್ದೇವೆ. ಆ ನಿಯಮಗಳನ್ನು ಪಾಲಿಸಿದರೇ ಉತ್ತಮ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ.

ನಮ್ಮ ಶಾಸ್ತ್ರ, ಧರ್ಮ, ಪದ್ಧತಿಯಲ್ಲಿ ಗರ್ಭಿಣಿಯರು ಸೂರ್ಯಗ್ರಹಣವನ್ನು ನೋಡುವಂತಿಲ್ಲ. ಸೂರ್ಯಗ್ರಹಣವನ್ನು ನೋಡುವುದು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ನಂಬಿಕೆ ಇದೆ.

ಹೀಗಾಗಿ ಗ್ರಹಣದ ಕಾಲದಲ್ಲಿ ಗರ್ಭಿಣಿಯರು ಸೂರ್ಯಗ್ರಹಣವನ್ನು ನೋಡಬಾರದು ಎಂದು ಹಿರಿಯರ ಸಲಹೆ. ಇದನ್ನೇ ಇಂದು ಕೂಡ ನಾವು ನೀವೆಲ್ಲಾ ಪಾಲಿಸಿಕೊಂಡು ಬರುತ್ತಿದ್ದೇವೆ.

  1. ಈ ದಿನ ಗರ್ಭಿಣಿಯರು ಹೊರಗಡೆ ಸುತ್ತಾಡದೇ, ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಬೇಕು.
  2. ಗರ್ಭಿಣಿಯರಿಗೆ, ತಿನ್ನುವುದು, ಕುಡಿಯುವುದು, ನೈಸರ್ಗಿಕ ಕರೆಗಳಿಗೆ ಹೋಗುವುದು ಇವುಗಳಿಗೆ ನಿರ್ಬಂಧವಿರುವುದಿಲ್ಲ.
  3. ಈ ದಿನದಂದು ದೇವರಿಗೆ ತುಪ್ಪದ ದೀಪ ಹಚ್ಚಿದರೆ ಶುಭವಾಗವುದು ಎಂಬ ನಂಬಿಕೆ ಇದೆ.
  4. ಈ ಸಮಯದಲ್ಲಿ ದೇವರ ನಾಮ ಜಪ ಮಾಡುವುದು ಕೂಡ ಒಳ್ಳೆಯದು ಎಂದು ಹೇಳಲಾಗುವುದು.
  5. ಗ್ರಹಣದ ಬಳಿಕ ಸ್ನಾನ ಮಾಡಿ.

ಈ ಎಲ್ಲಾ ನಿಯಮಗಳನ್ನು ಪಾಲಿಸಿದರೇ, ಗರ್ಭಿಣಿಯರು ಆರೋಗ್ಯವಂತ ಮಗುವಿನ ಜನನಕ್ಕೆ ಕಾರಣವಾಗುತ್ತಂತೆ. ಇಂತಹ ನಿಯಮಗಳನ್ನು ಈಗಲೂ ಅನೇಕರು ಪಾಲಿಸುತ್ತಿರುವುದು, ನಮ್ಮ ಧಾರ್ಮಿಕ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿದೆ.

Next Story

RELATED STORIES