ಕ್ಯಾಚ್ ಕೈಚೆಲ್ಲಿದಕ್ಕೆ ಸೆಲೆಬ್ರೇಟ್ ಮಾಡಿದ ಬೌಲರ್..!

ಪೋರ್ಟ್ ಆಫ್ ಸ್ಪೇನ್: ಸಾಮಾನ್ಯವಾಗಿ ಫೀಲ್ಡರ್ ಕ್ಯಾಚ್ ಕೈಚೆಲ್ಲಿದ್ರೆ ಬೌಲರ್ ಕೆಂಡಾಮಂಡಲರಾಗೊದನ್ನ ನೀವು ನೋಡಿರ್ತಿರಾ. ಆದ್ರೆ ಇಲ್ಲೊಬ್ಬ ಬೌಲರ್ ತಂಡದ ವಿಕೆಟ್ ಕೀಪರ್ ಕ್ಯಾಚ್ ಕೈಚೆಲ್ಲಿದಕ್ಕೆ ಸೆಲೆಬ್ರೇಟ್ ಮಾಡಿ ನಗೆಪಾಟಲೀಕ್ಕೀಡಾಗಿದ್ದಾರೆ.
ಇಂಥದೊಂದು ಘಟನೆ ನಡೆದಿದ್ದು ಕೆರೆಬಿಯನ್ ಕ್ರಿಕೆಟ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ. ಮೊನ್ನೆ ಮೊದಲ ಪಂದ್ಯ ನೈಟ್ ರೈಡರ್ಸ್ ಮತ್ತು ಸೇಂಟ್ ಲೂಸಿಯಾ ನಡುವೆ ನಡೆದಿತ್ತು. ನೈಟ್ ರೈಡರ್ಸ್ ತಂಡ 100 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ನೈಟ್ರೈಡರ್ಸ್ ತಂಡದ ಕಾಲಿನ್ ಮನ್ರೊ ಮತ್ತು ವೆಸ್ಟ್ ಇಂಡೀಸ್ ತಂಡದ ರಾಮ್ದಿನ್ ನಡುವೆ ಅಚ್ಚರಿಯ ಘಟನೆ ನಡೆಯಿತು. ನೈಟ್ ರೈಡರ್ಸ್ ತಂಡದ ಅಲಿ ಖಾನ್ ಓವರ್ನಲ್ಲಿ ಕಾಲಿನ್ ಮನ್ರೊ ವಿಕೆಟ್ ಕೀಪರ್ ರಾಮ್ದಿನ್ಗೆ ಕ್ಯಾಚ್ ನೀಡಿದ್ರು. ಚೆಂಡು ರಾಮ್ದಿನ್ ಕೈಸೇರಿದ ಕ್ಷಣದಲ್ಲೇ ಬೌಲರ್ ಅಲಿ ಖಾನ್ ಹಿಂದು ಮುಂದು ನೋಡದೇ ಜೆರ್ಸಿಗೆ ಮುತ್ತಿಟ್ಟು ಸೆಲೆಬ್ರೇಟ್ ಮಾಡಿದ್ರು. ಆದ್ರೆ ಅಸಲಿಗೆ ಚೆಂಡನ್ನ ವಿಕೆಟ್ ಕೀಪರ್ ರಾಮ್ದಿನ್ ಕೈಚೆಲ್ಲಿದ್ದರು. ಇದನ್ನ ಗಮನಿಸದ ಅಲಿ ಖಾನ್ ಕೊನೆಗೆ ನಿರಾಸೆ ಅನುಭವಿಸಿದ್ರು. ಈ ಸೆಲೆಬ್ರೇಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.