Top

ಅಶೋಕ್‌ ಖೇಣಿಗೆ ಈಗ ಲೋಕಸಭಾ ಚುನಾವಣೆ ಮೇಲೆ ಕಣ್ಣು.?

ಅಶೋಕ್‌ ಖೇಣಿಗೆ ಈಗ ಲೋಕಸಭಾ ಚುನಾವಣೆ ಮೇಲೆ ಕಣ್ಣು.?
X

ಬೀದರ್ : ಮಕ್ಕಳ ಪಕ್ಷದಿಂದ ಹೊರ ಬಂದು ಕಾಂಗ್ರೇಸ್ ನಿಂದ ಸ್ಪರ್ಥೆ ಮಾಡಿ ಸೋಲು ಅನುಭವಿಸದ್ದ ಅಶೋಕ್ ಖೇಣಿ ಈದಿಗ ಲೋಕಸಭಾ ಚುನಾವಣೆಯ ಮೇಲೆಕಣ್ಣು ಇಟ್ಟಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಬಂಡೆಪ್ಪ ಕಾಶಂಪೂರ್ ವಿರುದ್ದ ಸೂಲು ಅನುಭವಿಸಿದ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಇದೇ ಮೊದಲ ಬಾರಿಗೆ ಬೀದರ್ ಜಿಲ್ಲೆಗೆ ಆಗಮಿಸಿದ್ದರು. ಇದೇ 13 ರಂದು ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ ಹಿನ್ನಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಆಗಮಿಸಿದ್ದ ಅಶೋಕ್ ಖೇಣಿ, ರಾಹುಲ್ ಗಾಂಧಿ ಸಮ್ಮತಿ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಗೆ ಮತ್ತೆ ಸ್ಪರ್ಥೆ ಮಾಡಲು ಒಲವು ತೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಶೋಕ್ ಖೇಣಿ, ರಾಹುಲ್ ಗಾಂಧಿ ಒಪ್ಪಿಗೆ ಕೊಟ್ಟರೆ ನಾನು ಸ್ಪರ್ಧೆ ಮಾಡುವೆ. ಕೆಲವರು ಟಿಕೆಟ್ ಸಿಕ್ಕಿಲ್ಲಾ ಎಂದಾಗ ಅಳುತ್ತಾರೆ. ಮತ್ತೆ ಸೋತಾಗಲೂ ಅಳುತ್ತಾರೆ.. ಆದ್ರೆ ನಾ ಸೋತಾಗಲೂ ಐ ಅಮ್ ಹ್ಯಾಪಿ ಎಂದ್ರು. ನಮಗೆ ರಾಜಕೀಯದಿಂದ ಯಾವುದೇ ಬಿಸಿನೆಸ್ ಇಲ್ಲಾ ಎಂದು ಕೂಡ ಹೇಳಿದರು.

ಇದೇ ವೇಳೆ ಅಲ್ಲಾ ನೈಸ್ ಹಗರಣದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದರು. ಆದ್ರೇ ಈದೀಗ ಎಲ್ಲದಕ್ಕೂ ಬಾಯಿಮುಚ್ಚಿಸಿದಂತಾಗಿರುವುದು ಏಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ್ರು..

ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಅಶೋಕ್ ಖೇಣಿ ಬೀದರಲ್ಲಿ ಕಾಣುತ್ತಿಲ್ಲಾ ಎಂದಿದ್ದಕ್ಕೇ, ನೀವು ಕನ್ನಡಕ ಹಾಕಿ ಕೊಂಡು ನೋಡಿ ನನ್ನದೆ ಕನ್ನಡಕ ಕೋಡ್ತಿನಿ ಎಂದು ಹಾಸ್ಯಮಾಡಿದ್ರು.

Next Story

RELATED STORIES