Top

TV5 Exclusive : ಉಗ್ರ ಲಾಡೆನ್ ತಾಯಿಯ ಸಂದರ್ಶನ ಹೇಗಿತ್ತು ಗೊತ್ತಾ.?

TV5 Exclusive : ಉಗ್ರ ಲಾಡೆನ್ ತಾಯಿಯ ಸಂದರ್ಶನ ಹೇಗಿತ್ತು ಗೊತ್ತಾ.?
X

ಒಸಾಮಾ ಬಿನ್ ಲಾಡೆನ್ ಯಾರಿಗೆ ಗೊತ್ತಿಲ್ಲ ಹೇಳಿ..

2001 ಸೆಪ್ಟಂಬರ್ 11 ರ ನಂತರ ಒಸಾಮಾ ಬಿನ್ ಲಾಡೆನ್ ವಿಶ್ವದಾದ್ಯಂತ ರಾತ್ರೋರಾತ್ರಿ ಕುಖ್ಯಾತಿ ಗಳಿಸಿದ ವ್ಯಕ್ತಿ.. ತನ್ನ ದೇಶದ ಮೇಲೆ ದಾಳಿ ನಂತರ ಅಮೆರಿಕಾ ಒಸಾಮಾ ಬಿನ್ ಲಾಡೆನ್​ನನ್ನ ಹುಡುಕದ ಜಾಗವಿಲ್ಲ.. ಅಂತಿಮವಾಗಿ ಪಾಕಿಸ್ತಾನದಲ್ಲಿ ಅವಿತಿದ್ದ ಲಾಡೆನ್ ಅಮೆರಿಕಾ ಸೇನೆಯ ಕೈಯಲ್ಲಿ ಹತನಾಗಿ ಹೋದ..

ಲಾಡೆನ್ ಹೆಂಡತಿ ಯಾರು..? ಮಕ್ಕಳೆಷ್ಟು..? ಹೀಗೆ ಸಂಸಾರದ ಕಂಪ್ಲೀಟ್ ಸೀಕ್ರೆಟ್ ಬಯಲಾಗಿತ್ತು.. ಆದ್ರೆ, ಒಸಾಮಾ ಬಿನ್ ಲಾಡೆನ್ ತಾಯಿ ಹೇಗಿದ್ದಾರೆ.? ಅನ್ನೋದನ್ನ ನೋಡಲು 17 ವರ್ಷಗಳ ಬೇಕಾಯ್ತು.. ಕೇವಲ ಲಾಡೆನ್ ತಾಯಿಯ ಮುಖವನ್ನ ಪ್ರಪಂಚ ನೋಡಲಿಲ್ಲ.. ಮುಖದ ಜೊತೆ ಆ ತಾಯಿಯ ಮೌನವೂ ಮಾತಾಯ್ತು..

ಹೌದು, 17 ವರ್ಷಗಳ ನಂತರ ಲಾಡೆನ್ ತಾಯಿ ಆಲಿಯಾ ಘನೆಮ್ ಪ್ರಪಂಚದ ಮುಂದೆ ತನ್ನ ಮಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. ಇದೆಲ್ಲವೂ ಸಾಧ್ಯವಾಗಿದ್ದು 'ಡೇವಿಡ್ ಲೆವೆನೆ' ಸತತ ಪರಿಶ್ರಮದಿಂದ..

ಯಾರು ಈ ಡೇವಿಡ್ ಲೆವೆನೆ..?

ಅಸಾಧ್ಯ ಅನ್ನೋದನ್ನ ಡೇವಿಡ್ ಇವತ್ತು ಸಾಧಿಸಿದ್ದಾರೆ.. ಪ್ರಪಂಚದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದವನ ಮನೆಗೆ ತೆರಳಿ ಲಾಡೆನ್ ತಾಯಿಯ ಜೊತೆ ಮಗನ ಬಗ್ಗೆ ಮಾತನಾಡಿ ಆಕೆ ಹೇಗಿದ್ದಾರೆ.? ಅನ್ನೋದನ್ನ ಪ್ರಪಂಚದ ಮುಂದೆ ತೆರೆದಿಟ್ಟಿದ್ದಾರೆ..

ಡೇವಿಡ್ ‘ದಿ ಗಾರ್ಡಿಯನ್’ ಪತ್ರಿಕೆಯ ಪತ್ರಕರ್ತ.. 2001ರಿಂದ 'ದಿ ಗಾರ್ಡಿನ್' ಪತ್ರಿಕೆಗೆ ಒಸಾಮಾ ಬಿನ್ ಲಾಡೆನ್ ತಾಯಿ ಸಂದರ್ಶನ ಮಾಡೋದು ದೊಡ್ಡ ಸವಾಲಾಗಿತ್ತು. ಅಂತಿಮವಾಗಿ ಸಂದರ್ಶನ ಸಾಧ್ಯವಾಗಿದ್ದು 17 ವರ್ಷಗಳ ನಂತರ.. ಬಹು ದೊಡ್ಡ ರಿಸ್ಕ್ ತೆಗೆದುಕೊಂಡು ಸಂದರ್ಶನ ಮಾಡಿದ್ದು ಇದೇ ಡೇವಿಡ್ ಅಂಡ್ ಟೀಂ..

ಡೇವಿಡ್​ಗೆ ಒಸಾಮಾ ಬಿನ್ ಲಾಡೆನ್ ತಾಯಿ 'ಆಲಿಯಾ' ಸಂದರ್ಶನ ಮಾಡೋದ್ರಿಂದ ದೊಡ್ಡ ಹೆಸರು, ಸಾಕಷ್ಟು ಹಣ ಬರುತ್ತೆ ಅನ್ನೋದು ಗೊತ್ತಿತ್ತು.. ಜೊತೆಗೆ ಇದು ತುಂಬಾ ಕಷ್ಟದ ಕೆಲಸ ಅನ್ನೋದು ಸಹ ಗೊತ್ತಿತ್ತು. ಒಸಾಮಾ ತಾಯಿ ಆಲಿಯಾ ಇದುವರೆಗೂ ಕ್ಯಾಮೆರಾ ಮುಂದೆ ಬಂದಿರಲಿಲ್ಲ. ಜೊತೆಗೆ ಇದೇ ಮೊದಲ ಬಾರಿಗೆ ಆಲಿಯಾ ಕ್ಯಾಮೆರಾ ಮುಂದೆ ಮಾತನಾಡ್ತಿದ್ದಾರೆ ಅನ್ನೋದು ಮತ್ತೊಂದು ಇಂಟರೆಸ್ಟಿಂಗ್.. ಡೇವಿಡ್ ವೃತ್ತಿ ಜೀವನದ ಬಹುದು ದೊಡ್ಡ ಸಂದರ್ಶನ ಮಾಡಲು ಅವಕಾಶ ಸಿಕ್ಕಿದ್ದು ಕೇವಲ ಎರಡೇ ಗಂಟೆ..

ಇನ್ನು ಡೇವಿಡ್ ಎರಡು ಬಾರಿ ವರ್ಷದ ಪತ್ರಿಕಾ ಛಾಯಾಗ್ರಾಹಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.. ಇನ್ನು ಆಗಿಂದ್ದಾಗ್ಗೆ ಡೇವಿಡ್​ ಅವರ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿರುತ್ತೆ.. ಇತ್ತೀಚೆಗೆ ಲಂಡನ್‌ನಲ್ಲೂ ಡೇವಿಡ್ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ರು.. ಇನ್ನು ಪತ್ರಕರ್ತ ಡೇವಿಡ್ ಲಂಡನ್ ಮೂಲದವರೇ ಆಗಿದ್ದಾರೆ.. ಟಿವಿ5 ಗ್ರೂಪ್ ಎಡಿಟರ್ ದಿನೇಶ್ ಅಕುಲಾ ಪತ್ರಕರ್ತ ಡೇವಿಡ್ ಸಂದರ್ಶನ ಮಾಡಿದ್ದಾರೆ..

ಈ ವೇಳೆ ಒಸಾಮಾ ಬಿನ್ ಲಾಡೆನ್‌ನ ಜೆಡ್ಡಾ ನಿವಾಸದಲ್ಲಿನ ಅನುಭವವನ್ನ ಟಿವಿ5 ಜೊತೆ ಡೇವಿಡ್ ಹಂಚಿಕೊಂಡಿದ್ದಾರೆ. ಆ ಮಾತುಗಳು ಈ ಕೆಳಗಿನಂತಿವೆ..

ದಿನೇಶ್ ಅಕುಲಾ : ಆ ಫೋಟೋದಲ್ಲಿ ನೋಡಿದ್ರೆ .. ಲಾಡೆನ್ ಕುಟುಂಬ ಸೌದಿ ಅರೇಬಿಯಾದ ಶ್ರೀಮಂತ ಕುಟುಂಬ ನೋಡಿದ ರೀತಿ ಆಗುತ್ತೆ..

ಡೇವಿಡ್ : ಸಂದರ್ಶನ ಹಾಗೂ ಫೋಟೋಗ್ರಫಿಯನ್ನ ಒಂದು ರೂಂನಲ್ಲಿ ಅರೇಂಜ್ ಮಾಡಲಾಗಿತ್ತು.. ಆ ರೂಂ ಸಹ ಸರಳವಾಗಿತ್ತು.. ಒಂದು ಒಳ್ಳೆಯ ಕುಟುಂಬ ಅತಿಥಿಗಳನ್ನ ಗೌರವಿಸುವಂತೆ ನಡೆದುಕೊಂಡ್ರು.. ಲಾಡೆನ್ ಮನೆ ತುಂಬಾ ವಿಶಾಲವಾಗಿದೆ.. ಎರಡು ಕಡೆ ಕೂಡ ಲಿಫ್ಟ್ ಇದೆ..

ದಿನೇಶ್ ಅಕುಲಾ : ಆ ಟೇಬಲ್ ಒಂದರ ಮೇಲೆ ಸರಳವಾಗಿ ಒಸಾಮಾ ಬಿನ್ ಲಾಡೆನ್ ಫೋಟೋ ಇಟ್ಟಿದ್ರಲ್ಲ.. ಆ ಮನೆಯಲ್ಲಿ ಅದೊಂದೇನಾ ಲಾಡೆನ್ ಫೋಟೋ ಇರೋದು..?

ಡೇವಿಡ್ : ಮನೆಯಲ್ಲಿ ಲಾಡೆನ್ ನ ಹಲವು ಫೋಟೋಗಳಿವೆ. ಅದರಲ್ಲಿ ಒಂದು ಫೋಟೋ ಮಾತ್ರ ಇದು.. ಈ ಫೋಟೋವನ್ನ ಅವರ ತಾಯಿಯೇ ಪೇಂಟಿಂಗ್ ಮಾಡಿರುವ ಕಾರಣ ಇದನ್ನ ಆಯ್ಕೆ ಮಾಡಿದ್ವಿ..

ದಿನೇಶ್ ಅಕುಲಾ : ನಾವು ಕೆಳಗಡೆ ತುಂಬಾ ಫೋಟೋಗಳಿರುವ ರೀತಿ ನೋಡಿದ್ವಿ.. ಆ ರೀತಿ ನೀವೇ ಅರೇಂಜ್ ಮಾಡಿದ್ರಾ..?

ಡೇವಿಡ್ : ನಾವು ಆಲಿಯಾ ಘನೆಮಾ ಬಳಿ ಪೇಂಟಿಂಗ್ ಬಗ್ಗೆ ಮಾತನಾಡಲು ಶುರುಮಾಡಿದ್ವಿ.. ನಂತರ ಅವರ ಫೋಟೋ ತೆಗೆಯಲು ನಿರ್ಧರಿಸಿದ್ವಿ.. ಆ ವೇಳೆ ಆಲಿಯಾ ಕೆಳಗೆ ನಿಂತಿರುವಾಗ ಆ ಪೇಂಟಿಂಗ್ ನೋಡಿದ್ವಿ.. ನಂತರ ಆಲಿಯಾ ಜೊತೆ ಔಟ್​ ಆಫ್ ಫೋಕಸ್​ನಲ್ಲಿ ಬರುವಂತೆ ಆ ಫೋಟೋ ತೆಗೆಯಲು ನಿರ್ಧರಿಸಿದ್ವಿ..

ದಿನೇಶ್ ಅಕುಲಾ : ಆ ಫೋಟೋಗಳನ್ನ ನೋಡಿದಾಗ ಆಲಿಯಾ ಅವರಲ್ಲಿ ನಿರಾಸಕ್ತಿ ಕಾಣಿಸ್ತಿತ್ತು..?

ಡೇವಿಡ್ : ಇಲ್ಲ.. ಅವರು ಗಂಭೀರವಾಗಿದ್ರು.. ನಿರಾಸಕ್ತಿ ಏನೂ ಇರಲಿಲ್ಲ..

ದಿನೇಶ್ ಅಕುಲಾ : ಆಲಿಯಾ ಅವರನ್ನ ಚಿತ್ರೀಕರಿಸುವುದು ಕಷ್ಟ ಅಂತ ಏನಾದ್ರೂ ಅನ್ನಿಸ್ತಾ..? ಫ್ಯಾಮಿಲಿಯವರು ಸಹಕರಿಸಿದ್ರಾ..?

ಡೇವಿಡ್ : ನಾವು ಹೆಚ್ಚು ಬ್ರೈಟ್​ ಆಗಿ ಲೈಟ್ಸ್, ಟ್ರೈಪಾಡ್ ಕ್ಯಾಮೆರಾ ಬಳಸಿದ್ವಿ. ಅದು ಸ್ವಲ್ಪ ಅವರಿಗೆ ಹೊಸದು ಅನ್ನಿಸಿರಬಹುದು.. ಇನ್ನು ಅವರ ಫ್ಯಾಮಿಲಿಯವರು ತುಂಬಾ ಸಹಕರಿಸಿದ್ರು.. ಅವರೂ ಸಹ ಸಂದರ್ಶನಕ್ಕೆ ಒಪ್ಪಿಕೊಂಡಿದ್ರು.. ಇದು ನನ್ನ ವೃತ್ತಿ ಜೀವನದಲ್ಲಿ ಸವಾಲಿನ ಕೆಲಸವಾಗಿತ್ತು.. ನಾನು ಅಂದುಕೊಂಡಷ್ಟು ಆಲಿಯಾ ಅವರ ಜೊತೆ ಸಮಯ ಸಿಗಲಿಲ್ಲ.. ನನಗೆ ಅರಿವಿತ್ತು ನಾನೇನು ಮಾಡಬೇಕು ಹಾಗೂ ನಾನು ಅಂದುಕೊಂಡಿದ್ದನ್ನ ಚಿತ್ರೀಕರಿಸಿದೆ..

ದಿನೇಶ್ ಅಕುಲಾ : ನೀವು ತೆಗೆದ ಚಿತ್ರಗಳು ಪ್ರಪಂಚದಾದ್ಯಂತ ಭಾರೀ ಕುತೂಹಲ, ಆಸಕ್ತಿ ಉಂಟು ಮಾಡುತ್ತೆ ಅನ್ನೋ ಬಗ್ಗೆ ಗೊತ್ತಿತ್ತಾ..?

ಡೇವಿಡ್ : ನನಗೆ ಈ ಸಂದರ್ಶನದ ಮಹತ್ವ ಗೊತ್ತಿತ್ತು.. ಇದರಿಂದ ಭಾರೀ ಹಣ, ಹೆಸರು ಸಿಗುತ್ತೆ ಅಂತನೂ ಗೊತ್ತಿತ್ತು.. ಸೆಪ್ಟಂಬರ್ 11, 2001ರ ನಂತರ ಒಸಾಮಾ ಬಿನ್ ಲಾಡೆನ್ ತಾಯಿ ಮೊದಲ ಬಾರಿ ಹೊರ ಜಗತ್ತಿನ ಜೊತೆ ಮಾತನಾಡ್ತಿರೋದು, ಹಾಗೆಯೇ ಆಕೆ ಕಂಡ ಒಸಾಮಾ ಬಿನ್ ಲಾಡೆನ್ ಹೇಗೆ ಅನ್ನೋದು.. ಇದೆಲ್ಲ ಒತ್ತಡವೂ ನಾನು ಉತ್ತಮವಾಗಿ ಕೆಲಸ ಮಾಡಲು ಅನುಕೂಲವಾಯ್ತು.. ಇಂತಹ ಒತ್ತಡದ ಸಂದರ್ಭದಲ್ಲಿ ಕ್ರೀಯೇಟಿವ್ ಆಗಿ ಕೆಲಸ ಮಾಡೋಕೆ ಸಾಧ್ಯವಿರೋದಿಲ್ಲ.. ಆದ್ರೆ ನಾನು ಆ ಒತ್ತಡವನ್ನ ಕಂಟ್ರೋಲ್ ಮಾಡಿಕೊಂಡು ಉತ್ತಮವಾಗಿ ಸಂದರ್ಶನ ಮಾಡಿದ್ದೇನೆ..

ದಿನೇಶ್ ಅಕುಲಾ : ಲಾಡೆನ್ ಮನೆಯ ಕಾಂಪೌಂಡ್‌ನಿಂದ ಮನೆಯ ಒಳಗಿನವರೆಗೂ ಯಾವ ರೀತಿಯ ವಾತಾವರಣವಿದೆ ಅಂತ ವಿವರಿಸ್ತಿರಾ..?

ಡೇವಿಡ್ : ನಾನು ಹಾಗೂ ಪತ್ರಕರ್ತ ಮಾರ್ಟಿನ್ ಚುಲಾವ್ ಸೇರಿ ತಂಡದ ಎಲ್ಲರೂ ಸಂದರ್ಶನ ಶುರುವಾಗುವ ವರೆಗೂ ಮಾಮೂಲಿ ರೀತಿ ಇರಲಿಲ್ಲ.. ಸಂದರ್ಶನ ಹಾಗೂ ಫೋಟೋಶೂಟ್‌ಗೆ ಹೋದಾಗ ಅಸಹಜ ಸನ್ನಿವೇಶಗಳಲ್ಲಿ ಹೀಗೆ ಆಗೋದು ಸಹಜ.. ನಾವು ಅಲ್ಲಿಗೆ ಅಡ್ಜೆಸ್ಟ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ತು.. ಹಾಗಂತ ತುಂಬಾ ಸಮಯವೇನಲ್ಲ.. ಯಾಕಂದ್ರೆ ಲಾಡೆನ್ ಫ್ಯಾಮಿಲಿ ಜೊತೆ ಊಟ ಮಾಡಿದ್ಮೇಲೆ ನಾವು ಅವರ ಜೊತೆ ಆತ್ಮೀಯರಾದೆವು..

ದಿನೇಶ್ ಅಕುಲಾ : ಎಷ್ಟು ಕಾಲ ನೀವು ಆ ಮನೆಯಲ್ಲಿದ್ರಿ..?

ಡೇವಿಡ್ : ಸುಮಾರು 2 ಗಂಟೆಗಳ ಕಾಲ ಅಲ್ಲಿದ್ವಿ..

ದಿನೇಶ್ ಅಕುಲಾ : ನೀವು ಸಂದರ್ಶನ ಹಾಗೂ ಫೋಟೋಗ್ರಫಿ ಮಾಡುವಾಗ ಅಲ್ಲಿ ಸಿಬ್ಬಂದಿ ಹಾಗೂ ಮನೆಯವರು ಯಾರಾದರೂ ತುಂಬಾ ಆಸಕ್ತಿಯಾಗಿ ಭಾಗಿಯಾದ್ರಾ..?

ಡೇವಿಡ್ : ನಾನು ಕಂಡಂತೆ ಆ ರೀತಿ ಯಾರು ಇರಲಿಲ್ಲ..

ದಿನೇಶ್ ಅಕುಲಾ : ಈ ಸ್ಟೋರಿ ಚಿತ್ರೀಕರಿಸಲು ನಿಮ್ಮ ತಯಾರಿ ಹೇಗಿತ್ತು..?

ಡೇವಿಡ್ : ನನ್ನ ಕ್ಯಾಮೆರಾ ಕಿಟ್ ಯಾವಾಗಲು ರೆಡಿ ಇರುತ್ತೆ.. ನನ್ನ ರೆಗ್ಯುಲರ್ ಕ್ಯಾಮೆರಾಗಳು, ಲೆನ್ಸ್ ಹಾಗೂ ಲೈಟಿಂಗ್ಸ್​ ಯುಕೆಯಿಂದ ತೆಗೆದುಕೊಂಡು ಹೋಗಿದ್ದೆ.. ಜೊತೆಗೆ ಮತ್ತೊಂದು ಹೆಚ್ಚುವರಿ ಕ್ಯಾಮೆರಾ ಕೂಡ ತೆಗೆದುಕೊಂಡು ಹೋಗಿದ್ದೆವು.. ಹೆಚ್ಚು ಒತ್ತಡವಿಲ್ಲದೇ ಸಂದರ್ಶನ ಮಾಡಲು ನನ್ನ ಕಿಟ್ ಸರಿಯಾಗಿ ಇರಬೇಕೆಂದು ನನಗೆ ಗೊತ್ತಿತ್ತು..

ದಿನೇಶ್ ಅಕುಲಾ : ಒಬ್ಬ ಛಾಯಾಗ್ರಾಹಕನಾಗಿ ಈ ಸಂದರ್ಶನದಲ್ಲಿ ನಿಮ್ಮ ನೆನಪಿನಲ್ಲಿ ಉಳಿಯೋದೇನು..?

ಡೇವಿಡ್ : ನಾನು ಲಾಡೆನ್ ಕುಟುಂಬದ ಜೊತೆ ಕೂತು ಊಟ ಮಾಡಿದ ಸನ್ನಿವೇಶ.. ಯಾಕಂದ್ರೆ ನಾನು ಯಾವತ್ತು ಒಸಾಮಾ ಬಿನ್ ಲಾಡೆನ್ ಮನೆಯಲ್ಲಿ ಅವರ ಕುಟುಂಬದ ಜೊತೆ ಕೂಡ ಊಟ ಮಾಡ್ತೇನೆ ಅಂತ ಊಹೆ ಸಹ ಮಾಡಿಕೊಂಡಿರಲಿಲ್ಲ.. ಇದು ವಿಶೇಷ ಅನುಭವ.. ಊಟ ಮಾಡುವಾಗ ಒಂದೆಡೆ ಇದು ಸಾಧ್ಯವಾಗ್ತಿದೆಯಾ ಅಂತ ಅನ್ನಿಸ್ತಿತ್ತು.. ಮತ್ತೊಂದು ಕಡೆ ಒಂದು ಕುಟುಂಬದ ಜೊತೆ ಕೂತು ಊಟ ಮಾಡ್ತಿದ್ದೇನೆ ಅಂತ ಅನ್ನಿಸ್ತಿತ್ತು.. ಇದ್ಯಾಕೆ ಹೀಗೆ ಅನ್ನಿಸ್ತು ಅಂದ್ರೆ ಲಾಡೆನ್ ಫ್ಯಾಮಿಲಿ ಜೊತೆ ಕೂತು ಊಟ ಮಾಡುವಾಗ ಈ ರೀತಿ ಅನ್ನಿಸೋದು ಸಹಜ..

ದಿನೇಶ್ ಅಕುಲಾ : ಈ ಫೋಟೋಗಳನ್ನ ನೋಡಿ ಯಾವ ರೀತಿ ಅಭಿಪ್ರಾಯ ವ್ಯಕ್ತವಾಯ್ತು..?

ಡೇವಿಡ್ : ಪಾಸಿಟೀವ್, ನೆಗೆಟೀವ್ ಅಭಿಪ್ರಾಯ ವ್ಯಕ್ತವಾಗಿದೆ.. ಯಾಕಂದ್ರೆ ಟೀಕೆ ಮಾಡೋರು ಫೋಟೋಗ್ರಫಿ ಅಂತ ನೋಡೋದಿಲ್ಲ.. ಉಳಿದವರು ಇದನ್ನ ಫೋಟೋಗ್ರಫಿಯಾಗಿ ನೋಡ್ತಾರೆ.. ಲಾಡೆನ್ ತಾಯಿಯ ಫೋಟೋಗ್ರಫಿ, ಸಂದರ್ಶನ ಹೆಚ್ಚು ಆಸಕ್ತಿಯನ್ನ ಉಂಟುಮಾಡಿದೆ..

ದಿನೇಶ್ ಅಕುಲಾ : ಈ ಕೆಲಸ ನಿಮಗೆ ಎಷ್ಟು ಮುಖ್ಯವಾಗಿತ್ತು..?

ಡೇವಿಡ್ : ಹೌದು ನನಗೆ ಗೊತ್ತು.. ಈಗ ಹೇಳೋಕೆ ಕಷ್ಟ ಆಗುತ್ತೆ.. ಈ ಮೊದಲೇ ಹೇಳಿದಂತೆ ಇದು ಮುಖ್ಯವಾದ ಕೆಲಸವಾಗಿತ್ತು.. ತುಂಬಾ ಉತ್ತಮವಾಗಿ ಕೆಲಸ ಮಾಡುವ ಒತ್ತಡ ನನ್ನ ಮೇಲಿತ್ತು.. ಆದ್ರೆ, ಈ ರೀತಿಯ ಅವಕಾಶ ವೃತ್ತಿ ಜೀವನದಲ್ಲಿ ಸಿಗೋದು ಒಮ್ಮೆ ಮಾತ್ರ.. ಈ ರೀತಿ ಕೆಲಸ ಮಾಡುವ ಸನ್ನಿವೇಶ ಬರುತ್ತೆ ಅಂತ ನಾನು ಯೋಚನೆ ಮಾಡಿರಲಿಲ್ಲ.. ಈ ಫೋಟೋಗಳನ್ನ ನೋಡಿದಾಗ ಬಹಳ ಖುಷಿಯಾಗುತ್ತೆ.. ಮಾರ್ಟಿನ್ ಚುಲವ್ ಜೊತೆಗಿನ ಈ ಜರ್ನಲಿಸಂ ಜರ್ನಿ ನಿಜವಾಗಿಯೂ ತುಂಬಾ ಖುಷಿ ಕೊಟ್ಟಿದೆ.. ಯಾಕಂದ್ರೆ ಲಾಡೆನ್ ಫ್ಯಾಮಿಲಿಯ ಜೊತೆ ಮೊದಲ ಬಾರಿ ಸಂದರ್ಶನ ಹಾಗೂ ಫೋಟೋಗ್ರಫಿ ಮಾಡುವ ಜವಾಬ್ದಾರಿ ನಾವು ನಿರ್ವಹಿಸಿದ್ದು ಉತ್ತಮ ಅನ್ನಿಸ್ತು..

Next Story

RELATED STORIES