Top

ವಿಶಾಲ್ ತಂದೆ ಇನ್ಮೇಲೆ ರಾಧಿಕಾ ಕುಮಾರಸ್ವಾಮಿ ತಂದೆ.!

ವಿಶಾಲ್ ತಂದೆ ಇನ್ಮೇಲೆ ರಾಧಿಕಾ ಕುಮಾರಸ್ವಾಮಿ ತಂದೆ.!
X

ಸ್ಯಾಂಡಲ್​ವುಡ್​ನ ಎವರ್ ಚಾರ್ಮಿಂಗ್ ಗ್ಲಾಮರ್ ಡಾಲ್ ರಾಧಿಕಾ ಕುಮಾರಸ್ವಾಮಿ ಅರುಂಧತಿ ಅವತಾರ ತಾಳೋಕೆ ಮುಂದಾಗಿದ್ದಾರೆ. ಅರೇ ಏನಾಯ್ತಪ್ಪಾ ರಾಧಿಕಾಗೆ ಅಂತ ಹುಬ್ಬೇರಿಸ್ಬೇಡಿ. ನಾವು ಹೇಳ್ತಿರೋದು ರಿಯಲ್ ಅಲ್ಲ, ರೀಲ್ ವಿಷಯ. ಹೌದು... ಬಹುಭಾಷಾ ಚಿತ್ರ ಕಾಂಟ್ರಾಕ್ಟ್ ಸಿನಿಮಾ ಮುಗೀತಾ ಇದ್ದಂತೆ ಸೈಲೆಂಟ್ ಆಗಿ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಸ್ವೀಟಿ ರಾಧಿಕಾ.

ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಧಮಯಂತಿ ಅನ್ನೋ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸೋ ಸುದ್ದಿ ಹೊರಬಿದ್ದಿದೆ. ಅನುಷ್ಕಾ ಶೆಟ್ಟಿಯ ಅರುಂಧತಿಯನ್ನ ಮೀರಿಸೋ ಅಂತಹ ಮೆಗಾ ಪ್ರಾಜೆಕ್ಟ್ ಇದಾಗಲಿದ್ದು, ಟೈಟಲ್​ನಿಂದಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

ರಾಕ್ಷಸಿ, ವೈರ ಹಾಗೂ ಸೈಕೋ ಶಂಕ್ರ ಸಿನಿಮಾಗಳ ಖ್ಯಾತಿಯ ನಟ, ನಿರ್ದೇಶಕ ನವರಸನ್‌ ಈ ಸಿನಿಮಾನ ತಮ್ಮದೇ ಹೋಮ್ ಬ್ಯಾನರ್​ನಲ್ಲಿ ನಿರ್ದೇಶಿಸಿ, ನಿರ್ಮಿಸೋ ಯೋಜನೆಯಲ್ಲಿದ್ದಾರೆ. ಇನ್ನು ರಾಧಿಕಾ ಹೈಟು, ವೈಟು, ಗ್ಲಾಮರ್ ಖದರ್​ಗೆ ತಕ್ಕನಾದ ಮಹಾರಾಣಿ ಪಾತ್ರ ಇದಾಗಿದ್ದು, ಇಲ್ಲಿ ಸ್ವೀಟಿ ಗತ್ತು ಗೈರತ್ತು ಬೇರೆಯದ್ದೇ ರೀತಿಯಲ್ಲಿರಲಿದೆ.

ಅಂದಹಾಗೆ ಧಮಯಂತಿ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಶಾಲ್ ತಂದೆ ಜಿ.ಕೆ.ರೆಡ್ಡಿ, ಧಮಯಂತಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಂದ್ರೆ ರಾಧಿಕಾ ಕುಮಾರಸ್ವಾಮಿ ತಂದೆ ಪಾತ್ರದಲ್ಲಿ ಜಿಕೆ ರೆಡ್ಡಿ ಮಿಂಚಲಿದ್ದಾರೆ. ಅತೀವ ಕನ್ನಡಾಭಿಮಾನ ಇರೋ ಜಿ.ಕೆ. ರೆಡ್ಡಿ, ವಿಶಾಲ್ ಜೊತೆ ಕೂಡ ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಇಚ್ಚಿಸದ ಅವರು, ರಾಧಿಕಾ ಕುಮಾರಸ್ವಾಮಿ ತಂದೆಯಾಗಿ ಕನ್ನಡದಲ್ಲಿ ನಟಿಸೋಕೆ ಓಕೆ ಅಂದಿರೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, TV5

Next Story

RELATED STORIES