ಜೆಡಿಎಸ್ ಕಾರ್ಯಕರ್ತರಿಗೆ ಹೆಚ್ಡಿಕೆ ಬಂಪರ್.!

ಬೆಂಗಳೂರು : ಸಮ್ಮಿಶ್ರ ಸರ್ಕಾರ ರಚನೆಯ ನಂತ್ರ, ಸಾಲ ಮನ್ನಾ, ರೈತರಿಗೆ ಗುನ್ನ ಎಂಬಂತ್ತಾಗಿತ್ತು. ಆನಂತ್ರ ಕಾಂಗ್ರೆಸ್-ಜೆಡಿಎಸ್ ಆಡಳಿತದ ಸರ್ಕಾರ ಸುಸ್ತಿ ಸಾಲ ಕೂಡ ಮನ್ನಾ ಮಾಡುವ ಮೂಲಕ ರೈತರ ಒಲೈಕೆ ಮಾಡಿತ್ತು.
ಇದೀಗ, ಜೆಡಿಎಸ್ ತನ್ನ ಕಾರ್ಯಕರ್ತರನ್ನು ಸೆಳೆಯಲು ಬಂಪರ್ ಘೋಷಣೆ ಮಾಡುವ ಹೊಸ ಹೆಚ್ಚಿ ಇರಿಸಿದೆ. ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಹಾಕಲಾಗಿದ್ದ ಮೊಕ್ಕದ್ದಮ್ಮೆಗಳನ್ನು ವಾಪಾಸ್ ಪಡೆಯಲು ಮೆಗಾ ಪ್ಲಾನ್ ಮಾಡಿದೆಯಂತೆ.
ಯಾಕೆಂದರೇ ಜೆಡಿಎಸ್ 10 ವರ್ಷಗಳ ನಂತ್ರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಇದರ ಹಿಂದೆ ರಾಜ್ಯದ ನೂರಾರು ಕಾರ್ಯಕರ್ತರ ಪರಿಶ್ರಮ ಇದೆ. ಹೀಗಾಗಿ ಕಾರ್ಯಕರ್ತರ ಪಾತ್ರ ಪರಿಗಣಿಸಿ, ಅವರ ಮೇಲಿನ ಕೇಸ್ ವಾಪಾಸು ಪಡೆಯಲು ಮುಂದಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಹೊರ ಬಿದ್ದಿದೆ. ಆದರೇ ಅಷ್ಟು ಸುಲಭಕ್ಕೆ ಇದು ಸಾಧ್ಯವಿಲ್ಲ.
ರಾಜ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲಿನ ನೂರಾರು ಕೇಸ್ ವಾಪಾಸು ಪಡೆಬೇಕು ಅಂದ್ರೇ, ನಿಯಮಾವಳಿ ಪ್ರಕರಾ ಸಮಿತಿ ರಚನೆ ಮಾಡಬೇಕು. ಸರ್ಕಾರ ರಚಿಸಿದ ಸಮಿತಿಯ ವರದಿಯನ್ನು ಆಧರಿಸಿ, ಜೆಡಿಎಸ್ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಾಸು ಪಡೆಯಬಹುದಾಗಿದೆ.
ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮುಂದಿನ ಬಾರಿ ನಡೆಯುವ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಿಎಂಗೆ ಸೂಚಿಸಿದ್ದಾರಂತೆ. ಈ ಬಗ್ಗೆ ಸ್ವತಹ ದೊಡ್ಡ ಗೌಡರೇ ಜೆಡಿಎಸ್ ಕಚೇರಿಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಒಂದು ವೇಳೆ ಮುಂಬರುವ ಕ್ಯಾಬಿನೇಟ್ನಲ್ಲಿ ಈ ಬಗ್ಗೆ ಚರ್ಚೆ ನಡೆದು, ಸಮಿತಿ ರಚನೆಯಾದರೇ ರಾಜ್ಯದಲ್ಲಿನ ನೂರಾರು ಜೆಡಿಎಸ್ ಕಾರ್ಯಕರ್ತರ ಮೇಲಿನ ಕೇಸ್ಗಳನ್ನು ವಾಪಾಸ್ಗೆ ಅವಕಾಶವಾಗಲಿದೆ. ಸದ್ಯಕ್ಕೆ ದೊಡ್ಡಗೌಡರ ಸೂಚನೆಯನ್ನು ಸಿಎಂ ಪಾಲಿಸಿ, ಕ್ಯಾಬಿನೆಟ್ನಲ್ಲಿ ಅಜೆಂಡಾ ಮಾಡಿ, ಚರ್ಚೆಗೆ ತಂದು ಸಮಿತಿ ರಚನೆ ನಂತ್ರ, ಇದು ಕಾರ್ಯ ಸಾಧ್ಯವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.