Top

7 ನಿಮಿಷದ ಪ್ರಮಾಣ ವಚನ ಸಮಾರಂಭಕ್ಕೆ, ಖರ್ಚಾಗಿದ್ದು 42 ಲಕ್ಷ.!

7 ನಿಮಿಷದ ಪ್ರಮಾಣ ವಚನ ಸಮಾರಂಭಕ್ಕೆ, ಖರ್ಚಾಗಿದ್ದು 42 ಲಕ್ಷ.!
X

ಬೆಂಗಳೂರು : ಇದು ರಾಜ್ಯದ ಜನರು ಬೆಕ್ಕಸ ಬೆರಗು ಮಾಡುವಂತ ಸುದ್ದಿ. ರಾಜ್ಯದ ಜನರ ದುಡ್ಡನ್ನು ಜನಪ್ರತನಿಧಿಗಳು ಹೇಗೆ ನೀರಿನಂತೆ ಖರ್ಚು ಮಾಡುತ್ತಿದ್ದಾರೆ ಎಂಬ ಮಾಹಿತಿ.

ರಾಜ್ಯದ ರೈತರ ಸಾಲ ಮನ್ನಾ ಮಾಡೋಕೆ ಹಣವಿಲ್ಲ....

ಹಲವು ತಿಂಗಳಿಂದ ಪೌರಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ..

ರಾಜ್ಯದ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳಿಗೆ ಹಣವಿಲ್ಲ....

ಆದರೇ... ಓದುಗರೇ... ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳಾದ ಶಾಸಕರ ಪ್ರಮಾಣವಚನಕ್ಕೆ ಮಾತ್ರ ಲಕ್ಷ ಲಕ್ಷಗಟ್ಟಲೇ ಹಣ ಪೋಲು...

ನಿಮಗೆ ಇದು ಆಶ್ಚರ್ಯ ಎನಿಸಬಹುದು. ಆದರೇ ಈ ಎಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯಿಂದ ಬಹಿರಂಗವಾಗಿದೆ.

ಮೇ 23ರಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಹೆಚ್‌ ಡಿ ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಹಿಂದ ನಾಯಕರ ದಂಡೇ ಆಗಮಿಸಿತ್ತು.

ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಯಾವತಿ, ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಕಾಂಗ್ರೆಸ್‌ನ ಲೀಡರ್ ಅಶೋಕ್ ಗೆಹ್ಲೋಟ್‌, ಸಿಪಿಎ ಲೀಡರ್ ಸಿತಾರಾಂ ಯೆಚೂರಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌, ಎನ್‌ ಸಿ ಪಿ ನಾಯಕ ಶರದ್ ಪವಾರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂದಿ ಆಗಮಿಸಿದ್ದರು.

ಈ ಎಲ್ಲಾ ಗಣ್ಯರಿಗೆ, ತಾಜ್‌ ವೆಸ್ಟ್‌ ಎಂಡ್ ಹೊಟೇಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಂತಹ ಗಣ್ಯರಪಟ್ಟಿಯಲ್ಲಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅತಿಹೆಚ್ಚು ಬಿಲ್ ಮಾಡಿರುವ ಅತಿಥಿ. ತಾಜ್ ವೆಸ್ಟ್ ಎಂಡ್‌ನಲ್ಲಿ ಉಳಿದುಕೊಳ್ಳಲು 8,72,485 ರೂ. ಬಿಲ್ ಆಗಿದೆ.

ಮೇ 23ರಂದು ಬೆಳಗ್ಗೆ 9.49ಕ್ಕೆ ಹೋಟೆಲ್‌ಗೆ ಚೆಕ್‍ಇನ್ ಆದ ನಾಯ್ಡು ಮೇ 24ರಂದು ಬೆಳಗ್ಗೆ 05.34ಕ್ಕೆ ಖಾಲಿ ಮಾಡಿದ್ದಾರೆ.

ಇದೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್‌ ಊಟ/ಜ್ಯೂಸ್‌ಗೆ 71,025 ರೂ. ಖರ್ಚಾಗಿದ್ದು ಪಾನೀಯಗಳಿಗೆ 5,000 ರೂ. ಖರ್ಚಾಗಿದೆ. ರಾತ್ರಿ ಹೋಟೆಲ್‌ಗೆ ಬಂದಿದ್ದ ಅವರು ಕೇವಲ 2 ಗಂಟೆಗಳ ಕಾಲ ಮಾತ್ರ ಉಳಿದುಕೊಂಡಿದ್ದರು.

ಇಷ್ಟು ಕಡಿಮೆ ಸಮಯದಲ್ಲಿ ಪಾನೀಯ ಮತ್ತು ಊಟಕ್ಕೆ ಇಷ್ಟು ಖರ್ಚಾಗಿರುವು ಅಚ್ಚರಿ ಮೂಡಿಸಿದೆ.

ಒಟ್ಟು ಏಳು ನಿಮಿಷಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರಕಾರದ ಬೊಕ್ಕಸದಿಂದ ಖರ್ಚಾಗಿರುವುದು 42 ಲಕ್ಷ ರೂ. ಎಂಬುದು ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿರುವ ಅರ್ಜಿಯಿಂದ ತಿಳಿದಿದೆ.

ಆದರೆ ಯಾವುದಕ್ಕೆ ಎಷ್ಟು ಎಂಬ ವಿವರಗಳು ಮಾತ್ರ ಲಭ್ಯವಾಗಿಲ್ಲ.

ಮಾಹಿತಿ ಹಕ್ಕು ಅನುಸಾರ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರ ಆತಿಥ್ಯಕ್ಕೆ ಸರಕಾರ ಖರ್ಚು ಮಾಡಿರುವ ವಿವರಗಳು ಈ ರೀತಿ ಇವೆ.

  1. ಉ.ಪ್ರ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್: Rs 1,02,400
  2. ಬಹುಜನ ಸಮಾಜ ಪಕ್ಷ ಮುಖ್ಯಸ್ಥೆ ಮಾಯಾವತಿ: Rs 1,41,443
  3. ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್: Rs 1,02,400
  4. ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್: Rs 1,02,400
  5. ಸಿಪಿಎಂ ಮುಖಂಡ ಸೀತಾರಾಮ್ ಯಚೂರಿ: Rs 64,000
  6. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್: Rs 38,400
  7. ಎನ್‍ಸಿಪಿ ಮುಖಂಡ ಶರದ್ ಪವಾರ್: Rs 64,000
  8. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ: Rs 38,400
  9. ಜಾರ್ಖಂಡ್ ಮಾಜಿ ಸಿಎಂ ಬಾಬುಲಾಲ್ ಮರಾಂಡಿ: Rs 45,952

ವಿಶೇಷ ಎಂದರೆ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ನಟ ಮತ್ತು ಮಕ್ಕಳ ನೀತಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ 1,02,040 ರೂ. ಬಿಲ್ ಮಾಡಿದ್ದಾರೆ.

Next Story

RELATED STORIES