'ಒಂದು ಪಂದ್ಯ ನೋಡಿ ನಮ್ಮನ್ನ ಜಡ್ಜ್ ಮಾಡಬೇಡಿ'

X
TV5 Kannada9 Aug 2018 4:28 AM GMT
ಲಂಡನ್: ಕೇವಲ ಒಂದು ಪಂದ್ಯವನ್ನ ನೋಡಿ ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಜಡ್ಜ್ ಮಾಡೋದು ಸರಿಯಲ್ಲ ಎಂದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಆಂಗ್ಲರ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 31 ರನ್ಗಳ ಅಂತರದಿಂದ ಸೋಲು ಕಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ಕೊಹ್ಲಿ, ನಾವು ಒಂದು ತಂಡವಾಗಿ ಬೇಗನೆ ಜಡ್ಜ್ ಮಾಡಿ ಒಂದು ತೀರ್ಮಾನಕ್ಕೆ ಬರಬಾರದು. ಸ್ವಲ್ಪ ತಾಳ್ಮೆಯಿಂದ ಇರಬೇಕು. ನಾವು ಹೇಗೆ ಸೋತೆವು ಅನ್ನೊದನ್ನ ನಾವು ನೋಡಲ್ಲ. ನಾವು ವೈಫಲ್ಯ ಅನುಭವಿಸುತ್ತಿರೋದು ತಾಂತ್ರಿಕ ಕಾರಣಗಳಿಂದಲ್ಲ ಎಂದು ಹೇಳಿದ್ದಾರೆ.
ಹೊರಗಿನಿಂದ ನಮ್ಮ ತಂಡವನ್ನ ನೋಡಿದವರಿಗೆ ಕೆಟ್ಟದಾಗಿ ಕಾಣಿಸುತ್ತೆ. ನಾವೀಗ ಆಂಗ್ಲರ ನಾಡಲ್ಲಿ ಟೆಸ್ಟ್ ಆಡುತ್ತಿದ್ದೇವೆ. ಇಲ್ಲಿ ಆಡೋದು ತುಂಬ ಕಷ್ಟ. ಆದರೆ ತಪ್ಪುಗಳನ್ನ ಆದಷ್ಟು ಕಡಿಮೆ ಮಾಡಬೇಕಿದೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
Next Story