ಇದು ಟಿವಿ5 ಕನ್ನಡದ ಬಿಗ್ಇಂಪಾಕ್ಟ್ : ಬೆಳಗ್ಗೆ ಸ್ಟೋರಿ, ಸಂಜೆ ಸಚಿವರಿಂದ ಉತ್ತರ

ವಿಶೇಷ ವರದಿ : ದಶರಥ್ ಸಾವೂರು, ವೀಣಾ ಸಿದ್ದಾಪುರ
ಬೆಂಗಳೂರು : ಇದು ಬೆಳ್ಳಂ ಬೆಳಗ್ಗೆ ಪಿಯು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದ ಸ್ಟೋರಿ.. ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್ ಕಾರ್ಡ್ ಎಷ್ಟರ ಮಟ್ಟಿಗೆ ಸೇಫ್ ಅಂತಾ ತಮ್ಮನ್ನೇ ತಾವು ಪ್ರಶ್ನೆ ಮಾಡಿಕೊಂಡ ಸಂಗತಿ.. ಈ ಕುರಿತು ನಿಮ್ಮ ಟಿವಿ5 ಕನ್ನಡ ಸುದ್ದಿವಾಹಿನಿಯಲ್ಲಿ ವಿಸ್ಕೃತ ವರದಿ ಮಾಡಿತ್ತು.. ವರದಿ ನೋಡಿದ ಉನ್ನತ ಶಿಕ್ಷಣ ಸಚಿವರು ಎಚ್ಚೆತ್ತುಕೊಂಡಿದ್ದಾರೆ..
ಡಿಜಿ ಲಾಕರ್ ಅನ್ಸೇಫ್ ಕುರಿತು ಚರ್ಚೆ ನಡೆಸೋದಾಗಿ ಭರವಸೆ
ಬೆಳಗ್ಗೆ 8 ಗಂಟೆ.. ನಿಮ್ಮ ಟಿವಿ5 ಕನ್ನಡ ಸ್ಪೋಟಕ ಸುದ್ದಿಯೊಂದನ್ನಾ ವರದಿ ಮಾಡ್ತು.. ಲಕ್ಷಾಂತರ ಪಿಯು ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾಡಿರೋ ಯಡವಟ್ಟನ್ನಾ ವರದಿ ಮಾಡ್ತು.. ಜೊತೆಗೆ ಪಿಯು ಮಂಡಳಿ ಮಾಡಿಯೋ ಯಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಗುವ ತೊಂದರೆ ಕುರಿತು ವರದಿ ಮಾಡ್ತು.. ವರದಿ ಪ್ರಸಾರವಾಗ್ತಿ ಇತ್ತ ಸಚಿವರು ಕೂಡ ಅಲರ್ಟ್ ಆಗಿದ್ದಾರೆ
ಎಚ್ಚೆತ್ತ ಉನ್ನತ ಶಿಕ್ಷಣ ಸಚಿವರು
ವಾ. 2: ಹೌದು ಕಳೆದ ತಿಂಗಳಷ್ಟೇ ನಕಲಿ ಅಂಕಪಟ್ಟಿ ಹಾವಳಿ ತಡೆಗಟ್ಟಲು ಹಾಗೂ ಎಲ್ಲಾ ಕಡೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ದೊರಕಲು ಪದವಿಪೂರ್ವ ಶಿಕ್ಷಣ ಇಲಾಖೆ ಡಿಜಿ ಲಾಕರ್ ಎಂಬ ಟೆಕ್ನಾಲಜಿ ಪರಿಚಯಿಸಿತ್ತು.. ಆದ್ರೆ ಸದ್ಯ ಈ ಟೆಕ್ನಾಲಜಿ ಅನ್ಸೇಫ್ ಆಗಿದ್ದು ಅಂಕಪಟ್ಟಿಗಳನ್ನು ತಿರುಚಬಹುದಾಗಿದೆ.. ಈ ಹಿನ್ನಲೆ ಟಿವಿ5 ಕನ್ನಡ ಈ ಕುರಿತು ವಿಸ್ಕೃತ ವರದಿ ಮಾಡ್ತು.. ವರದಿ ನೋಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಈ ಕುರಿತು ಅಧಿಕಾರಿಗಳ ಸಭೆ ಕರೆದು ಬೇರೆ ತಂತ್ರಜ್ಞಾನ ಅಳವಡಿಸೋದಾಗಿ ಹೇಳಿದ್ದಾರೆ..
ಹೊಸ ತಂತ್ರಜ್ಞಾನದ ಮೊರೆ ಹೋದ ಇಲಾಖೆ
ಪಿಯು ಬೋರ್ಡ್ ಮಾಡಿರೋ ಯಡವಟ್ಟಿನಿಂದ ಕಂಗಾಲಾಗಿದ್ದ ವಿದ್ಯಾರ್ಥಿಗಳಿಗೆ ಸಚಿವರ ಉತ್ತರ ಭರವಸೆ ಸಿಕ್ಕಂತಾಗಿದೆ.. ಸಚಿವರು ಎಚ್ಚೆತ್ತುಕೊಂಡು ಹೊಸ ತಂತ್ರಜ್ಞಾನದ ಮೊರೆ ಹೋಗ್ತಾರಾ ಅಥ್ವಾ ಕೇವಲ ಭರವಸೆ ನಿಡಿ ಸುಮ್ಮನಾಗ್ತಾರಾ ಕಾದು ನೋಡ್ಬೇಕಿದೆ.