Top

'ವಿರಾಟ್‌ ಕೊಹ್ಲಿ ಕ್ರಿಕೆಟ್‌ನ ದಂತಕಥೆಯಾಗುವ ಸನಿಹಕ್ಕೆ ಬಂದಿದ್ದಾರೆ'

ವಿರಾಟ್‌ ಕೊಹ್ಲಿ ಕ್ರಿಕೆಟ್‌ನ ದಂತಕಥೆಯಾಗುವ ಸನಿಹಕ್ಕೆ ಬಂದಿದ್ದಾರೆ
X

ವಿಶ್ವ ಕ್ರಿಕೆಟಿನ ಹಲವು ದಾಖಲೆಗಳನ್ನು ಮುರಿಯುತ್ತಿರುವ ವಿರಾಟ್‌ ಕೊಹ್ಲಿ ಅವರು ಕ್ರಿಕೆಟ್‌ನ ದಂತಕಥೆಯಾಗುವ ಸನಿಹಕ್ಕೆ ಬಂದಿದ್ದಾರೆ ಎಂದು ಮಹೇಂದ್ರ ಸಿಂಗ್‌ ಧೋನಿ ಅಭಿಪ್ರಾಯಪಟ್ಟಿದ್ದಾರೆ. ಯುವ ಆಟಗಾರರಾಗಿ ತಂಡದಲ್ಲಿ ಕಾಣಿಸಿಕೊಂಡು ಮಹೋನ್ನತ ಸಾಧನೆಗೈಯುತ್ತ ಅನುಭವಿ ಕ್ರಿಕೆಟಿಗರಾಗಿ ಬೆಳೆದ ವಿರಾಟ್‌ ಕೊಹ್ಲಿ ಇದೀಗ ಭಾರತೀಯ ಕ್ರಿಕೆಟ್‌ ರಂಗದಲ್ಲಿ ತನ್ನ ವಿರಾಟ್‌ ದರ್ಶನ ಮಾಡಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಉತ್ಕೃಷ್ಟ ಬ್ಯಾಟಿಂಗ್‌ ನಿರ್ವಹಣೆ, ನಾಯಕತ್ವದೊಂದಿಗೆ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಲೆಜೆಂಡ್‌ ಆಗುವ ಎಲ್ಲ ಅರ್ಹತೆಗಳನ್ನು ಗಳಿಸಿಕೊಂಡಿದ್ದಾರೆ ಎಂದು ಧೋನಿ ಹೇಳಿದ್ದಾರೆ.

ಅವರು (ಕೊಹ್ಲಿ) ಶ್ರೇಷ್ಠ ಮತ್ತು ಲೆಜೆಂಡ್‌ ಗೌರವಕ್ಕೆ ಸನಿಹದಲ್ಲಿದ್ದಾರೆ. ಹಾಗಾಗಿ ಅವರ ಬಗ್ಗೆ ಹೆಮ್ಮೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅವರ ಬ್ಯಾಟಿಂಗ್‌ ವೈಭವವನ್ನು ಗಮನಿಸಿದರೆ ಅವರೊಬ್ಬ ಬ್ರಿಲಿಯೆಂಟ್‌ ಎಂದು ಧೋನಿ ತಿಳಿಸಿದರು.

ಧೋನಿ ಅವರ ನಾಯಕತ್ವದ ವೇಳೆ ಕೊಹ್ಲಿ ಬ್ಯಾಟಿಂಗ್‌ ಪರಾಕ್ರಮ ಮೆರೆದಿದ್ದರು. ಯುವ ಆಟಗಾರರಾಗಿ ಕ್ರಿಕೆಟಿಗೆ ಪಾದಾರ್ಪಣೆಗೈದ ಅವರು ವಿಶ್ವ ಖ್ಯಾತಿಯಾಗಿ ಬೆಳೆದಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು 149 ರನ್‌ ಹೊಡೆದಿರುವುದು ಅವರ ಬ್ಯಾಟಿಂಗ್‌ ಶಕ್ತಿಗೆ ಸಾಕ್ಷಿಯಾಗಿದೆ. ಅವರು ಭಾರತ ತಂಡವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುತ್ತಿರುವುದಕ್ಕೆ ಧೋನಿ ಸಂತಸ ವ್ಯಕ್ತಪಡಿಸಿದರು.

Next Story

RELATED STORIES