video viral: ಟೆನಿಸ್ ಆಡಿದ ಗರ್ಭಿಣಿ ಸಾನಿಯಾ ಮಿರ್ಜಾ

ಭಾರತ ತಂಡದ ಏಕೈಕ ಮಹಿಳಾ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಗುವಿಗೆ ಜನ್ಮ ನೀಡುವ ಖುಷಿಯಲ್ಲಿದ್ದಾರೆ. ಹಾಗಂತ ಆಕೆ ಎಲ್ಲರಂತೆ ಸುಮ್ಮನೆ ಇರದೇ ಗರ್ಭಿಣಿಯಾಗಿದ್ದರೂ ಟೆನಿಸ್ ಆಡಿ ಗಮನ ಸೆಳೆದಿದ್ದಾರೆ.
ತಮ್ಮ ಆಕರ್ಷಕ ಸರ್ವ್ ಹಾಗೂ ಗ್ಯಾಪ್ ಶಾಟ್ ಗಳ ಮೂಲಕ ಎದುರಾಳಿ ಆಟಗಾರ್ತಿಯರಿಗೆ ಕಾಡುತ್ತಿದ್ದ, ಭಾರತದ ಸ್ಟಾರ್ ಟೆನಿಸ್ ತಾರೆ, ಸಾನಿಯಾ ಮಿರ್ಜಾ. ಸದ್ಯ ಸಾನಿಯಾ ಮಿರ್ಜಾ ತಾಯಿ ಆಗುವ ಸಂತಸದಲ್ಲಿದ್ದು, ಹಲವು ದಿನಗಳಿಂದ ರಾಕೆಟ್ ಹಿಡಿದು ಅಂಗಳಕ್ಕೆ ಇಳಿದಿಲ್ಲ.
https://www.instagram.com/p/BmLMOkwAR0G/?taken-by=anammirzaaa
ಆದರೆ ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ಸಾನಿಯಾ ಮಿರ್ಜಾರ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ಹೊಟ್ಟೆಯ ಭಾರವನ್ನು ಲೆಕ್ಕಿಸದೆ ಸಾನಿಯಾ ತನ್ನ ಸಹೋದರಿಯ ಜೊತೆ ಟೆನಿಸ್ ಆಡುವ ದೃಶ್ಯಗಳು ಅಭಿಮಾನಿಗಳ ಮನ ಗೆಲ್ಲುತ್ತಿವೆ. ಒಂದು ಕೋರ್ಟ್ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತೆ ಸಾನಿಯಾ ಕಂಡ್ರೆ, ಇನ್ನೊಂದು ಕೋರ್ಟ್ನಲ್ಲಿ ಸೋದರಿ ಅನಮ್ ಬ್ಯಾಟ್ ಹಿಡಿದು ಅಕ್ಕನ ಸವಾಲು ಸ್ವೀಕರಿಸಲು ರೆಡಿಯಾಗಿದ್ದಾರೆ. ತಮ್ಮ ಹೆಣ್ಣು ಮಕ್ಕಳ ಟೆನಿಸ್ ಕೌಶಲ್ಯವನ್ನು ಕಣ್ಣು ತುಂಬಿಕೊಳ್ಳಲು, ಸಾನಿಯಾರ ತಂದೆ ಸಹ ಕೋರ್ಟ್ ಮಧ್ಯದಲ್ಲೇ ನಿಂತು ಆಟ ಆನಂದಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್ ಲೋಡ್ ಆಗುತ್ತಿದ್ದಂತೆ 7000 ಜನ ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಈ ವಿಡಿಯೋಗೆ 700 ಲೈಕ್ ಸಿಕ್ಕಿವೆ.