Top

ಸಿದ್ದು ಸರ್ಕಾರ ಅವಧಿಯಲ್ಲಿ ಶಾಸಕರಿಗೆ ಕೋಟಿ ಕೋಟಿ ಭತ್ಯೆ.!

ಸಿದ್ದು ಸರ್ಕಾರ ಅವಧಿಯಲ್ಲಿ ಶಾಸಕರಿಗೆ ಕೋಟಿ ಕೋಟಿ ಭತ್ಯೆ.!
X

ಬೆಳಗಾವಿ : ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಾಸಕರು ಮತ್ತು ಎಂಎಲ್‌ಸಿಗಳ ಭತ್ಯಗಳಿಗಾಗಿ ಕೋಟಿ ಕೋಟಿ ವೆಚ್ಚ ಮಾಡಲಾಗಿದೆ. ಐದು ವರ್ಷದಲ್ಲಿ 235 ಕೋಟಿ ರುಪಾಯಿ ವೆಚ್ಚ ಮಾಡಿದ ಅಂಶವೂ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್ ಪಡೆದ ಆರ.ಟಿ.ಐ ಮಾಹಿತಿಯಲ್ಲಿ ಬೆಳಕಿಗೆ ಬಂದಿದೆ. ಜನ ಸಾಮಾನ್ಯರ ಸಮಸ್ಯೆಗಳಿಗೂ ಸ್ಪಂದಿಸಲ್ಲ. ಸದನದಲ್ಲೂ ಕ್ಷೇತ್ರದ ಜನರ ಬಗ್ಗೆ ತುಟಿ ಬಿಚ್ಚುವುದಿಲ್ಲ. ಆದ್ರೂ ಸರ್ಕಾರದ ಬೋಕ್ಕಸದಿಂದ ಕೋಟಿ ಕೋಟಿ ಹಣವನ್ನ ವಿವಿಧ ಭತ್ಯೆ ರೂಪದಲ್ಲಿ ಪೋಲಾಗಿದೆ ಎಂಬ ಬಗ್ಗೆ ಮುಂದೆ ಓದಿ..

ಹೌದು... ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕರ ವೇತನ ಸೇರಿ ವಿವಿಧ ಭತ್ಯೆಗಾಗಿ 235 ಕೋಟಿ ವೆಚ್ಚ ಮಾಡಲಾಗಿದೆ. ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಪಡೆದ RTI ಮಾಹಿತಿ ಅಡಿ ಈ ಸತ್ಯ ಭಹಿರಂಗವಾಗಿದ್ದು, ಸರ್ಕಾರದಿಂದ ವಿವಿಧ ಭತ್ಯೆಗಳ ಹೆಸರಲ್ಲಿ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂಬ ಆರೋಪವನ್ನ ಭೀಮಪ್ಪ ಗಡಾದ್ ಮಾಡಿದ್ದಾರೆ. ಯಾಕೆಂದ್ರೆ 14ನೇ ವಿಧಾನ ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಕೋಟಿ ಕೋಟಿ ವೆಚ್ಚ ಮಾಡಲಾಗಿದೆ.

ಸರ್ಕಾರದಿಂದ ಶಾಸಕರಿಗೆ 203 ಕೋಟಿ 78 ಲಕ್ಷದ 28 ಸಾವಿರದ 570 ರೂಪಾಯಿ ವೆಚ್ಚ ಮಾಡಿದ್ರೆ. ಅತ್ತ ಎಂ.ಎಲ್.ಸಿಗಳಿಗೆ 32 ಕೋಟಿ 78 ಲಕ್ಷದ 28 ಸಾವಿರದ 91 ರೂಪಾಯಿ ವೆಚ್ಚ ಮಾಡಲಾಗಿದೆ. ಸರ್ಕಾರದಿಂದ ಶಾಸಕರು ಮತ್ತು ಎಂ.ಎಲ.ಸಿಗಳಿಗೆ ಒಟ್ಟು 235 ಕೋಟಿ 95 ಲಕ್ಷ 62 ಸಾವಿರದ 661 ರುಪಾಯಿ ವೆಚ್ಚ ಮಾಡಿದ್ದು ಆರ.ಟಿ.ಐ ಮಾಹಿತಿಯಿಂದ ಗೊತ್ತಾಗಿದೆ.

ಇನ್ನು ಸರ್ಕಾರದಿಂದ ಜನಪ್ರತಿನಿಧಿಗಳಿಗೆ ವೇತನ, ಪ್ರಯಾಣ ಭತ್ಯೆ, ವಿದೇಶಿ ಪ್ರವಾಸ, ರೈಲ್ವೆ ಪ್ರಯಾಣ ಭತ್ಯೆ, ವೈದ್ಯಕೀಯ ವೆಚ್ಚಗಳಿಗಾಗಿ ಹಣ ವೆಚ್ಚ ಮಾಡಲಾಗಿದೆ. ಸರ್ಕಾರದಿಂದ 21/05/2013 ರಿಂದ 29/04/2015 ರವೆಗೂ ವೆಚ್ಚದ ಮಾಹಿತಿ ನೀಡಿದ್ದು, ಇದರಲ್ಲಿ ಇದರಲ್ಲಿ ಶಾಸಕರಿಗೆ ವೇತನ ಮತ್ತು ಇತರೆ ಭತ್ಯೆಗಳಿಗಾಗಿ 90 ಕೋಟಿ 24 ಲಕ್ಷಕ್ಕೂ ಅಧಿಕ ವೆಚ್ಚ ಮಾಡಲಾಗಿದೆ. ವಸತಿ ಭತ್ಯೆಗಾಗಿ 63 ಲಕ್ಷ 68 ಸಾವಿರಕ್ಕೂ ಅಧಿಕ ವೆಚ್ಚ ಮಾಡಲಾಗಿದೆ..

ಶಾಸಕರು, ಎಂಎಲ್‌ಸಿಗಳ ವಿದೇಶಿ ಪ್ರವಾಸ, ರೈಲ್ವೆ ಮತ್ತು ಅಧಿವೇಶನ ಭತ್ಯೆಗಾಗಿ 106 ಕೋಟಿ 43 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಲಾಗಿದೆ.. ವೈದ್ಯಕೀಯ ವೆಚ್ಚಕ್ಕಾಗಿ 5 ಕೋಟಿ 86 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ಅದೇ ಎಂಎಲಸಿಗಳಿಗೆ ವೇತನ, ದೂರವಾಣಿ, ಕ್ಷೇತ್ರ , ಅಂಚೆ ಭತ್ಯೆಗಾಗಿ 28 ಕೋಟಿ 63 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಲಾಗಿದೆ.. ಇನ್ನೂ ಎಂಎಲಸಿಗಳಿಗೆ ವೈದ್ಯಕೀಯ ವೆಚ್ಚಕ್ಕಾಗಿ 3 ಕೋಟಿ 22 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಿದ್ದು, ದುರಂತವೆಂದ್ರೆ ಸರ್ಕಾರ ಶಾಸಕರಿಗೆ 3 ತಿಂಗಳಿಗೆ 60 ಸಾವಿರ ರುಪಾಯಿ ದೂರವಾಣಿ ವೆಚ್ಚಕ್ಕೆ ನೀಡುತ್ತಿದೆ. ವಾಸ್ತವದಲ್ಲಿ 500 ರುಪಾಯಿ ಪ್ಲಾನಗೆ ಉಚಿತ ಕರೆ, ಇಂಟರ್ನೆಟ್ ಅಂತಾ ಪ್ಲಾನಗಳು ಟೆಲಿಕಾಂ ಸೇವೆಯಲ್ಲಿ ಲಭ್ಯವಿದೆ.

ಒಟ್ಟ್ನಲ್ಲಿ ಸಿದ್ದು ಸರ್ಕಾರದ ಅವಧಿಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ 235 ಕೋಟಿ ವೆಚ್ಚ ಮಾಡಿದ್ದು, ಸರ್ಕಾರದಿಂದ ಇಷ್ಟೊಂದು ಭತ್ಯೆಗಳ ಸೌಲಭ್ಯ ಪಡೆಯುವ ನಮ್ಮ ಜನಪ್ರತಿನಿಧಿಗಳು ಮಾತ್ರ ಎಷ್ಟೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಎಷ್ಟೂ ಸದನದಲ್ಲಿ ತಮ್ಮ ಕ್ಷೇತ್ರ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುತ್ತಾರೆ. ಹೀಗಾಗಿ ಸರ್ಕಾರದ ಜನಪ್ರತಿನಿಧಿಗಳ ಮೇಲೆ ವಿವಿಧ ಭತ್ಯೆಗಳ ರೂಪದಲ್ಲಿ ವೆಚ್ಚ ಮಾಡುತ್ತಿರುವ ಹಣಕ್ಕೆ ಕತ್ತರಿ ಹಾಕ್ಬೇಕಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES