Top

ಲಾರ್ಡ್ಸ್ ಟೆಸ್ಟ್: ತಿರುಗೇಟು ನೀಡಲು ಸಜ್ಜಾದ ಕೊಹ್ಲಿ ಪಡೆ

ಲಾರ್ಡ್ಸ್ ಟೆಸ್ಟ್: ತಿರುಗೇಟು ನೀಡಲು ಸಜ್ಜಾದ ಕೊಹ್ಲಿ ಪಡೆ
X

ನಾಯಕ ವಿರಾಟ್ ಕೊಹ್ಲಿ ಅವರ ಸಾಹಸ ಹಾಗೂ ಬೌಲರ್​ಗಳ ಶಿಸ್ತಿನ ದಾಳಿ ನಡುವೆಯೂ ಮೊದಲ ಟೆಸ್ಟ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಭಾರತ ತಂಡ ಲಾರ್ಡ್ಸ್​ನಲ್ಲಿ ಗುರುವಾರದಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ತಿರುಗೇಟು ನೀಡಲು ಹಾತೊರೆಯುತ್ತಿದೆ.

ಭಾರತ ತಂಡದಲ್ಲಿ ಬದಲಾವಣೆ ಕುರಿತು ಮಾತುಗಳು ಕೇಳಿ ಬರುತ್ತಿದ್ದರೂ ತಂಡದ ಇನ್ನೂ ಯಾವುದೇ ಅಂತಿಮ ನಿರ್ಧಾರದ ಗುಟ್ಟು ಬಿಟ್ಟುಕೊಟ್ಟಿಲ್ಲ. ಅದರಲ್ಲೂ ಚೇತೇಶ್ವರ್ ಪೂಜಾರ ಅವರನ್ನು ಆಡಿಸುವ ಬಗ್ಗೆ ಒತ್ತಡ ಕೇಳಿ ಬಂದಿದೆ. ಆದರೆ ಪೂಜಾರ ಆಗಮನವಾದರೆ ಕೆ.ಎಲ್. ರಾಹುಲ್ ಅಥವಾ ಅಜಿಂಕ್ಯ ರಹಾನೆ ಸ್ಥಾನ ಬಿಟ್ಟು ಕೊಡಬೇಕಾಗಬಹುದು. ಬೌಲಿಂಗ್​ನಲ್ಲಿ ಹಾರ್ದಿಕ್ ಪಾಂಡ್ಯ ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಸ್ಪಿನ್ನರ್ ಆರ್ .ಅಶ್ವಿನ್ ಯಶಸ್ಸು ಪಡೆದಿರುವುದರಿಂದ ಮತ್ತೊಬ್ಬ ಸ್ಪಿನ್ನರ್ ಆಡಿಸುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.

ಇಂಗ್ಲೆಂಡ್ ಈಗಾಗಲೇ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ. ಅದರಲ್ಲೂ ತಂಡದ ಪ್ರಮುಖ ಬ್ಯಾಟ್ಸ್ ಮನ್ ಬೆನ್ ಸ್ಟೋಕ್ಸ್ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿರುವುದರಿಂದ ಲಾರ್ಡ್ಸ್​ ಟೆಸ್ಟ್ ನಿಂದ ಹೊರಗುಳಿದಿದ್ದಾರೆ. ಅವರ ಬದಲು ಆಲ್​ರೌಂಡರ್ ಕ್ರಿಸ್ ವೋಕ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಇಂಗ್ಲೆಂಡ್ ಈಗಾಗಲೇ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದ್ದು, ಭಾರತ ಚೇತರಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

Next Story

RELATED STORIES