Top

ಐಪಿಎಲ್ ಬ್ರ್ಯಾಂಡ್ ಮೌಲ್ಯ ಎಷ್ಟು ಶತಕೋಟಿ ಗೊತ್ತಾ?

ಐಪಿಎಲ್ ಬ್ರ್ಯಾಂಡ್ ಮೌಲ್ಯ ಎಷ್ಟು ಶತಕೋಟಿ ಗೊತ್ತಾ?
X

ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಟಿ-20 ಟೂರ್ನಿಯ ಬ್ರ್ಯಾಂಡ್ ಮೌಲ್ಯ ಇದೀಗ 6.3 ಶತಕೋಟಿ ಡಾಲರ್. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು 100ರ ಕ್ಲಬ್ ಸೇರಿದ ತಂಡಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಐಪಿಎಲ್ ಟಿ-20 ಟೂರ್ನಿ ಆರಂಭವಾಗಿ 11 ವರ್ಷ ಕಳೆದಿವೆ. ಪ್ರತಿ ಬಾರಿ ಟೂರ್ನಿ ನಡೆದಾಗಲೂ ಹಿಂದಿನ ದಾಖಲೆಗಳನ್ನು ಮುರಿಯುತ್ತಲೇ ಬಂದಿದೆ. ಈ ಬಾರಿ ಅದರ ಬ್ರ್ಯಾಂಡ್ ಮೌಲ್ಯ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಶತಕೋಟಿಗಳ ಲೆಕ್ಕದಲ್ಲಿ ಹೆಚ್ಚಾಗಿದೆ. ಇದು ಕಳೆದ ಬಾರಿಗಿಂತ ಶೇ.19ರಷ್ಟು ಹೆಚ್ಚು. 2017ರಲ್ಲಿ ಐಪಿಎಲ್ ಮೌಲ್ಯ 5.3 ಶತಕೋಟಿ ಆಗಿದ್ದು, ಈ ಬಾರಿ ಬರೋಬ್ಬರಿ 1 ಶತಕೋಟಿಯಷ್ಟು ಹೆಚ್ಚಳವಾಗಿದೆ.

ಡಫ್ ಮತ್ತು ಫಿಲಿಪ್ಸ್ ಜಾಗತಿಕ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಐಪಿಎಲ್ ಬ್ರ್ಯಾಂಡ್ ಮೌಲ್ಯ ಪ್ರತಿ ವರ್ಷದಂತೆ ಸುಮಾರು 1 ಶತಕೋಟಿಯಷ್ಟು ಹೆಚ್ಚಳವಾಗುತ್ತಲೇ ಬಂದಿರುವುದು ತಿಳಿದು ಬಂದಿದೆ.

ಸ್ಟಾರ್ ಇಂಡಿಯಾ ಕಳೆದ ವರ್ಷ 16347 ಕೋಟಿಗೆ ಬಿಡ್ ಮಾಡಿ 5 ವರ್ಷಗಳಿಗೆ ಐಪಿಎಲ್ ಟೂರ್ನಿಯ ಪ್ರಸಾರ ಹಕ್ಕು ಪಡೆದಿತ್ತು. ಈ ಮೂಲಕ ಸೋನಿಯಿಂದ ಪ್ರಸಾರ ಹಕ್ಕು ಕಿತ್ತುಕೊಂಡಿತ್ತು.

100 ಕ್ಲಬ್ ಸೇರಿದ ಮುಂಬೈ, ಕೆಕೆಆರ್

ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ಬ್ರ್ಯಾಂಡ್ ಮೌಲ್ಯ 100 ದಶಲಕ್ಷ ಡಾಲರ್ ದಾಟಿದೆ. ಮುಂಬೈದು 113 ಕೋಟಿ ಇದ್ದರೆ, ಕೆಕೆಆರ್ ಮೌಲ್ಯ 104 ಕೋಟಿ ಮೌಲ್ಯವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ಮೌಲ್ಯ 98 ಕೋಟಿ ಆಗಿದ್ದು, ಕೇವಲ 2 ಕೋಟಿಯಿಂದ 100ರ ಕ್ಲಬ್ ಸೇರುವ ಅವಕಾಶದಿಂದ ವಂಚಿತವಾಗಿದೆ.

ಹೈದರಾಬಾದ್ ತಂಡ (70 ದಶಲಕ್ಷ ಡಾಲರ್ ), ಡೆಲ್ಲಿ ಡೇರ್ ಡೆವಿಲ್ಸ್ (54 ದಶಲಕ್ಷ), ಕಿಂಗ್ಸ್ ಇಲೆವೆನ್ ಪಂಜಾಬ್ (52 ದಶಲಕ್ಷ) ಮತ್ತು ರಾಜಸ್ಥಾನ್ ರಾಯಲ್ಸ್ (43 ದಶಲಕ್ಷ) ಡಾಲರ್ ಆಗಿದೆ.

Next Story

RELATED STORIES