Top

ಡೇನಿಯಲ್‌ ವ್ಯಾಟ್‌ ಜೊತೆಗೆ ಸಚಿನ್ ಪುತ್ರನ ಪಾರ್ಟಿ ಜೋರು..!

ಡೇನಿಯಲ್‌ ವ್ಯಾಟ್‌ ಜೊತೆಗೆ ಸಚಿನ್ ಪುತ್ರನ ಪಾರ್ಟಿ ಜೋರು..!
X

ಇಂಗ್ಲೆಂಡ್‌ನ‌ ಖ್ಯಾತ ಕ್ರಿಕೆಟ್‌ ಆಟಗಾರ್ತಿ ಡೇನಿಯಲ್‌ ವ್ಯಾಟ್‌ ಜತೆಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಭರ್ಜರಿ ಪಾರ್ಟಿ ಮಾಡಿದ್ದಾರೆ. ಮಧ್ಯಾಹ್ನ ಹೊಟೇಲ್‌ವೊಂದರಲ್ಲಿ ಇವರಿಬ್ಬರು ಹೊಟ್ಟೆತುಂಬಾ ಊಟ ಮಾಡಿದ್ದಾರೆ. ಬಳಿಕ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಅರ್ಜುನ್‌ ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಲೈಕ್ಸ್‌, ಕಾಮೆಂಟ್‌ ಬಂದಿದೆ.

ಅರ್ಜುನ್‌ ತೆಂಡುಲ್ಕರ್‌ ಇತ್ತೀಚೆಗೆ ಲಂಕಾದ ವಿರುದ್ಧದ ಅಂಡರ್‌ 19 ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ವ್ಯಾಟ್‌ 2014ರಲ್ಲಿ ವಿರಾಟ್‌ ಕೊಹ್ಲಿ "ವಿಲ್‌ ಯೂ ಮ್ಯಾರಿ ಮೀ...' ಎಂದು ಟ್ವೀಟ್‌ ಮಾಡಿ ಭಾರೀ ಸುದ್ದಿಯಾಗಿದ್ದರು. ಆದರೆ ಕೊಹ್ಲಿ ವ್ಯಾಟ್‌ಗೆ ತಿರುಗಿ ಉತ್ತರ ನೀಡಲು ಹೋಗದೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರನ್ನು ವಿವಾಹವಾಗಿದ್ದರು.

Next Story

RELATED STORIES