Top

ಭಾರತ ತಂಡದ ಫೋಟೋಶೂಟ್​ನಲ್ಲಿ ಅನುಷ್ಕಾ: ಅಭಿಮಾನಿಗಳ ಆಕ್ರೋಶ

ಭಾರತ ತಂಡದ ಫೋಟೋಶೂಟ್​ನಲ್ಲಿ ಅನುಷ್ಕಾ: ಅಭಿಮಾನಿಗಳ ಆಕ್ರೋಶ
X

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವನ್ನು ಲಂಡನ್​ನಲ್ಲಿ ನಡೆದ ರಾಯಭಾರ ಕಚೇರಿ ಭೋಜನಕೂಟದ ವ್ಯವಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ತೆಗೆದ ತಂಡದ ಫೋಟೋ ಶೂಟ್​ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಉಪಸ್ಥಿತರಿದಿದ್ದು ಅಭಿಮಾನಿಗಳನ್ನು ಕೆರಳಿಸಿದೆ.

ಭಾರತ ತಂಡದ ಜೊತೆ ಅನುಷ್ಕಾ ಶರ್ಮಾ ಪ್ರಯಾಣ ಬೆಳೆಸುತ್ತಿದ್ದಾರೆ. ನಿಯಮ ಪ್ರಕಾರ ತಂಡದ ಜೊತೆ ಆಟಗಾರರ ಪತ್ನಿಯರು ಪ್ರಯಾಣಿಸುವಂತಿಲ್ಲ. ಆದರೆ ತಂಡದ ಬಸ್​ನಲ್ಲಿಯೂ ಅನುಷ್ಕಾ ಇತ್ತೀಚೆಗೆ ಕಾಣಿಸಿಕೊಂಡಿದ್ದು, ಇದೀಗ ರಾಯಭಾರ ಕಚೇರಿಯ ಔತಣಕೂಟದಲ್ಲಿ ಪಾಲ್ಗೊಂಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಟ್ವೀಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿದೆ. ಇತರೆ ಆಟಗಾರರಿಗೆ ಇಲ್ಲದ ವಿಶೇಷ ಸೌಲಭ್ಯ ಅನುಷ್ಕಾ ಶರ್ಮಾಗೆ ಮಾತ್ರ ಯಾಕೆ? ಎಂದು ಪ್ರಶ್ನಿಸಿದ್ದಾರೆ.

Next Story

RELATED STORIES