Top

ಗಣೇಶ್ ಹಬ್ಬಕ್ಕೆ ತೆರೆಮೇಲೆ 'ದಿ ವಿಲನ್' ಆರ್ಭಟ ಶುರು.?

ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಡೆಡ್ಲಿ ಕಾಂಬಿನೇಷನ್​ನ ಸಿನಿಮಾ 'ದಿ ವಿಲನ್'.. ಜೋಗಿ ಪ್ರೇಮ್​ ನಿರ್ದೇಶನದ ಈ ಮೋಸ್ಟ್ ಅವೇಟೆಡ್ ಸಿನಿಮಾ ಸೌತ್ ಸಿನಿ ದುನಿಯಾದಲ್ಲಿ ಬೇಜಾನ್ ಹೈಪ್ ಕ್ರಿಯೇಟ್ ಮಾಡಿದೆ.. ಸ್ಯಾಂಪಲ್​ಗಳಿಂದ್ಲೇ ಇನ್ನಿಲ್ಲದ ಕುತೂಹಲ ಕೆರಳಿಸಿರೋ ದಿ ವಿಲನ್ ರಿಲೀಸ್​ ಯಾವಾಗ..? ಅಂತ ಫ್ಯಾನ್ಸ್ ಎದುರು ನೋಡ್ತಿದ್ದಾರೆ..

ಪ್ರೇಮ್ ನಿರ್ದೇಶನದ ಈ ಹೈವೋಲ್ಟೇಹ್ ಆಕ್ಷನ್ ಎಂಟ್ರಟ್ರೈನರ್​ನಲ್ಲಿ ಆ್ಯಮಿ ಜಾಕ್ಸನ್​ ನಾಯಕಿಯಾಗಿ ಮಿಂಚಿದ್ದಾರೆ.. ಮಿಥುನ್ ಚಕ್ರವರ್ತಿ, ಶ್ರೀಕಾಂತ್, ಮುಕುಲ್ ದೇವ್​ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.. ಅರ್ಜುನ್ ಜನ್ಯಾ ಸಂಗೀತದ ದಿ ವಿಲನ್ಸ್ ಸಾಂಗ್ಸ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಸಿನಿಮಾ ಬಗೆಗಿನ ನಿರೀಕ್ಷೆಯನ್ನ ದುಪ್ಪಟ್ಟಾಗಿಸಿದೆ..

ದುಬೈನಲ್ಲಿ ದಿ ವಿಲನ್ ಗ್ರ್ಯಾಂಡ್ ಆಡಿಯೋ ಲಾಂಚ್

ಮೊನ್​ ಮೊನ್ನೆ ಪ್ರೇಮ್, ದಿ ವಿಲನ್ ಶೂಟಿಂಗ್ ಕಂಪ್ಲೀಟ್ ಅಂತ ಅನೌನ್ಸ್ ಮಾಡಿದ್ದು, ನೋಡಿ ಕೆಲವರು ನಿಟ್ಟುಸಿರು ಬಿಟ್ಟಿದ್ರು.. ಟೀಸರ್ಸ್​​​, ಲಿರಿಕಲ್ ಸಾಂಗ್ಸ್​ ರಿಲೀಸ್​ ನಂತ್ರ ದಿ ವಿಲನ್​​ ಶೂಟಿಂಗ್​ಗೆ ಕುಂಬಳಕಾಯಿ ಒಡೆದಿದ್ರು ಪ್ರೇಮ್.. ಇದೀಗ ಕಳೆದ ಒಂದೂವರೆ ವರ್ಷದಿಂದ ನಡೀತಿದ್ದ, ಶೂಟಿಂಗ್ ಕೊನೆಗೂ ಮುಗಿತಲ್ಲ ಅಂತ ಸಮಾಧಾನ ಪಟ್ಟುಕೊಂಡಿದ್ರು.. ಅದ್ರ ಬೆನ್ನಲ್ಲೇ ಸಿನಿಮಾ ರಿಲೀಸ್ ಯಾವಾಗ..? ಅಂತ ತಲೆ ಕೆಡಿಸಿಕೊಂಡಿದ್ರು..

ವಿಲನ್ಸ್ ಮನೆಗೆ ಲಕ್ಷ್ಮೀ ಇಲ್ಲ.. ಗಣೇಶ ಬರೋದು ಫಿಕ್ಸ್..!!

ಯೆಸ್.. ದಿ ವಿಲನ್ ಸಿನಿಮಾ ರಿಲೀಸ್ ಯಾವಾಗ ಅಂತ ಕೇಳ್ತಿದ್ದವರಿಗೆ ದುಬೈನಲ್ಲಿ ಆಡಿಯೋ ಲಾಂಚ್ ಅಂತ ಸ್ವೀಟ್ ನ್ಯೂಸ್ ಕೊಟ್ಟಿದೆ ಚಿತ್ರತಂಡ.. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಆಡಿಯೋ ದುಬೈನಲ್ಲಿ ಲಾಂಚ್ ಆಗ್ತಿರೋದು ವಿಶೇಷ.. ಆ ಮೂಲಕ ದಿ ವಿಲನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡೋ ಸೂಚನೆ ಸಿಕ್ತಿದೆ.. ಆಗಸ್ಟ್ 17ಕ್ಕೆ ದುಬೈನಲ್ಲಿ ದಿ ವಿಲನ್ ಆಲ್ಬಮ್ ರಿಲೀಸ್ ಆಗಲಿದೆ..

ಈ ಹಿಂದೆ ಪ್ರೇಮ್ ನಿರ್ದೇಶನದ ಎರಡು ಸಿನಿಮಾಗಳು ವರಲಕ್ಷ್ಮಿ ಹಬ್ಬಕ್ಕೆ ತೆರೆಕಂಡು ಸಕ್ಸಸ್ ಆಗಿತ್ತು.. ಹೀಗಾಗಿ ದಿ ವಿಲನ್ ಚಿತ್ರವನ್ನ ಈ ವರ್ಷದ ವರಲಕ್ಷ್ಮೀ ಹಬ್ಬಕ್ಕೆ ತೆರೆಗೆ ತರ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ.. ಆದ್ರೆ, ವಿಲನ್ಸ್​ ಅಬ್ಬರ ನೋಡೋಕೆ ಕಾಯ್ತಿರೋರಿಗೆ ವರಲಕ್ಷ್ಮೀ ಹಬ್ಬಕ್ಕೆ ಸಿನಿಮಾ ರಿಲೀಸ್ ಇಲ್ಲ ಅನ್ನೋ ಸುದ್ದಿ ಸಿಕ್ಕಿದೆ.. ಹಾಗಾದ್ರೆ, ಮತ್ತೆ ಯಾವಾಗ..? ಅನ್ನೋ ಪ್ರಶ್ನಗೆ ಗಣೇಶ ಹಬ್ಬಕ್ಕೆ ಅಂತ ಸುಳಿವು ಸಿಕ್ಕಿದೆ..

ಗಣೇಶ ಹಬ್ಬದ ವೀಕೆಂಡ್​ನ ಟಾರ್ಗೆಟ್ ಮಾಡಿ ಸೆಪ್ಟೆಂಬರ್ 13ಕ್ಕೆ ದಿ ವಿಲನ್​ ಸಿನಿಮಾ ರಿಲೀಸ್ ಪ್ಲಾನ್ ಮಾಡಲಾಗ್ತಿದೆ ಅನ್ನೋ ಮಾತುಗಳು ಕೇಳಿಬರ್ತಿದೆ..40 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರೋ ಅದ್ದೂರಿ ಸಿನಿಮಾ ದಿ ವಿಲನ್.. ಹಾಗಾಗಿ ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರ ರಿಲೀಸ್ ಆದ್ರೆ, ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ ಅನ್ನೋ ಲೆಕ್ಕಾಚಾರ ಚಿತ್ರತಂಡದ್ದು.. ಹಾಗಾದ್ರೆ, ಗಣೇಶ ಹಬ್ಬಕ್ಕೆ ದಿ ವಿಲನ್ ಶುರುವಾಗುತ್ತಾ..? ಈ ಪ್ರಶ್ನೆಗೆ ಉತ್ತರ ಸ್ವತ: ಪ್ರೇಮ್ ಹೇಳಬೇಕು..

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Next Story

RELATED STORIES