Top

ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ವಿಜಯೇಂದ್ರ ಏನು ಹರಕೆ ಹೊತ್ತರು ಗೊತ್ತಾ.?

ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ವಿಜಯೇಂದ್ರ ಏನು ಹರಕೆ ಹೊತ್ತರು ಗೊತ್ತಾ.?
X

ಮೈಸೂರು: ಹೋದಬಾರಿ ವಿಧಾನಸಭಾ ಎಲೆಕ್ಷನ್‌ನಿಂದ ಹಿಂಜರಿದಿದ್ದ ವಿಜಯೇಂದ್ರ, ಈ ಬಾರಿ ಲೋಕಸಭಾ ಚುನಾವಣೆಗಾಗಿ ಕಸರತ್ತು ನಡೆಸಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗಲಿ ಎಂದು ಪ್ರಾರ್ಥನೆ, ಕೋರಿಕೆ, ಹರಕೆಯೊಂದಿಗೆ, ಭರ್ಜರಿ ಪ್ರಚಾರ ಕೈಗೊಳ್ಳಲು ಮುಂದಾಗಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ನರೇಂದ್ರ ಮೋದಿ ಪ್ರಧಾನಿ ಆಗಲಿ ಎಂದು ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟ ಹತ್ತಲು ರೆಡಿಯಾಗಿದ್ದಾರೆ. ಆಗಸ್ಟ್ 10 ರಂದು ಕಾಲ್ನಡಿಗೆಯ ಮೂಲಕ ಚಾಮುಂಡಿ ಬೆಟ್ಟ ಹತ್ತಲಿರುವ ವಿಜಯೇಂದ್ರ, ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸದ್ಯಕ್ಕೆ ವಿಜಯೇಂದ್ರ ಯಾವುದೇ ಚುನಾವಣೆಗೆ ಸ್ಪರ್ಧಿಸದಿದ್ದರೂ, ಪಕ್ಷದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ವಿಜಯೇಂದ್ರ ಭವಿಷ್ಯದ ನಾಯಕನಾಗಲು ಯಡಿಯೂರಪ್ಪ ಭದ್ರ ಬುನಾದಿ ಹಾಕುತ್ತಿದ್ದಾರೆ.

Next Story

RELATED STORIES