Top

ರಾಜ್ಯಸಭಾ ಉಪ ಸ್ಪೀಕರ್ ಹುದ್ದೆ: ಹರಿವಂಶ್ v/s ವಂದನಾ ಪೈಪೋಟಿ

ರಾಜ್ಯಸಭಾ ಉಪ ಸ್ಪೀಕರ್ ಹುದ್ದೆ: ಹರಿವಂಶ್ v/s ವಂದನಾ ಪೈಪೋಟಿ
X

ಆಡಳಿತಾರೂಢ ಕೇಂದ್ರ ಸರಕಾರ ರಾಜ್ಯಸಭಾ ಉಪಸ್ಪೀಕರ್ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪ್ರತಿಪಕ್ಷಗಳು ಶರದ್ ಪವಾರ್ ನೇತೃತ್ವದ ಎನ್​ಸಿಎ ಪಕ್ಷದ ವಂದನಾ ಚವ್ಹಾಣ್ ಅವರನ್ನು ಕಣಕ್ಕಿಳಿಸಿವೆ.

ಮಂಗಳವಾರ ಇಡೀ ದಿನ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗಳು ನಡೆದವು. ಇಡೀ ದಿನ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳಿಗೆ ದೆಹಲಿ ಕೇಂದ್ರಸ್ಥಾನವಾಯಿತು. ಅಂತಿಮವಾಗಿ ಕಾಂಗ್ರೆಸ್ ಎನ್​ಸಿಎ ಪಕ್ಷದ ವಂದನಾ ಚವಾಣ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತು.

ಇದೇ ವೇಳೆ ಎನ್​ಡಿಎ ಪಕ್ಷದ ಅಭ್ಯರ್ಥಿ ಹರಿವಂಶ್ ಗೆಲ್ಲಿಸಲು ನಿತೀಶ್ ಕುಮಾರ್, ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಶಿವಸೇನಾ ಹಾಗೂ ಅಕಾಲಿದಳದ ಬೆಂಬಲ ಪಡೆಯಲು ಯತ್ನಿಸಿದರು. ಬಿಜೆಪಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿವೆ ಎಂದು ಹೇಳಿಕೊಂಡರೂ ಎರಡೂ ಕೈಪಕ್ಷಗಳು ಕೈಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೀಜು ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷ ತಟಸ್ಥ ನಿಲುವು ತೆಗೆದುಕೊಂಡಿದ್ದು, ಯಾವ ಪಕ್ಷಕ್ಕೆ ತಮ್ಮ ಬೆಂಬಲ ನೀಡಲಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.

ಮೂಲತಃ ವಕೀಲೆಯಾಗಿರುವ ವಂದನಾ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದು, ಪುಣೆ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Next Story

RELATED STORIES