ಐಸ್ಕ್ರೀಮ್ ತಿಂದ್ರೆ ಹೊಗೆ ಹಾಕೋಳ್ತೀರಾ ಹುಷಾರ್..!

X
TV5 Kannada7 Aug 2018 5:09 AM GMT
ಮೈಸೂರು: ಐಸ್ಕ್ರೀಮ್ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಐಸ್ಕ್ರೀಮನ್ನ ಎಲ್ಲರೂ ಇಷ್ಟ ಪಟ್ಟು ತಿಂತಾರೆ. ಆದ್ರೆ ದೇಶದಲ್ಲಿ ಬ್ಯಾನ್ ಆಗಿರುವ ಹೊಗೆ ಐಸ್ಕ್ರೀಮ್, ಮೈಸೂರಿನಲ್ಲಷ್ಟೇ ಮಾರಾಟವಾಗುತ್ತಿದ್ದು, ಕೆಲ ಸಂಘಟನೆ ಈ ಐಸ್ಕ್ರೀಮ್ ಪಾರ್ಲರ್ ವಿರುದ್ಧ ಧ್ವನಿ ಎತ್ತಿದೆ.
ನೈಟ್ರೋಜನ್ ಐಸ್ಕ್ರೀಮ್ ಮಾರುತ್ತಿದ್ದ ಮೈಸೂರಿನ ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿರುವ ಮೈನಸ್ 21 ಡಿಗ್ರಿ ಕೆಫೆ ವಿರುದ್ಧ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಮನುಷ್ಯನ ಆರೋಗ್ಯಕ್ಕೆ ಡ್ರಾಗನ್ ಬ್ರೀತ್ ಐಸ್ ಕ್ರೀಮ್ ಮಾರಕವಾಗಿದ್ದು, ಈ ಪಾರ್ಲರ್ನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಪಾರ್ಲರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಆದರೂ ಕೂಡ ಈ ಬಗ್ಗೆ ಜಿಲ್ಲಾಡಳಿತ ಮತ್ತು ಪಾಲಿಕೆ ಆರೋಗ್ಯಾಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲವೆಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
https://youtu.be/YZ_kQ7VUl_s
Next Story