Top

ಏಷ್ಯನ್ ಗೇಮ್ಸ್ ನಿಂದ ಮೀರಾ ಬಾಯಿ ಚಾನು ಹೊರಗೆ

ಏಷ್ಯನ್ ಗೇಮ್ಸ್ ನಿಂದ ಮೀರಾ ಬಾಯಿ ಚಾನು ಹೊರಗೆ
X

ಬೆನ್ನುನೋವಿನಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಏಷ್ಯನ್ ಗೇಮ್ಸ್ ನಿಂದ ಹೊರಗುಳಿಯಲಿದ್ದಾರೆ.

ಭಾರತೀಯ ವೇಟ್​ಲಿಫ್ಟಿಂಗ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್, ಈ ವಿಷಯವನ್ನು ಖಚಿತಪಡಿಸಿದ್ದು, ಹೌದು, ಮೀರಾಬಾಯಿ ಏಷ್ಯನ್​ ಗೇಮ್ಸ್ ನಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ.

ಮೀರಾಬಾಯಿ ಕೋಚ್ ವಿಜಯ್ ಶರ್ಮ ಆಗಸ್ಟ್ 18ರಿಂದ ನಡೆಯುವ ಏಷ್ಯನ್ ಗೇಮ್ಸ್​ನಿಂದ ಚಾನು ದೂರ ಉಳಿಯಲು ಶಿಫಾರಸು ಮಾಡಿದ್ದರು. ನಂತರ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಜ್ಜಾಗಬೇಕಿರುವ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್​ನಿಂದ ದೂರ ಉಳಿಯುವುದು ಒಳ್ಳೆಯದು ಎಂದಿದ್ದರು.

Next Story

RELATED STORIES