Top

ಅತ್ಯಾಚಾರ ಆರೋಪ ಮಾಡಿದವಳನ್ನೇ ವಿವಾಹವಾದ ಆಟಗಾರ

ಅತ್ಯಾಚಾರ ಆರೋಪ ಮಾಡಿದವಳನ್ನೇ ವಿವಾಹವಾದ ಆಟಗಾರ
X

ನವದೆಹಲಿ : ಭಾರತದ ಅಗ್ರ ಟೇಬಲ್ ಟೆನ್ನಿಸ್ ಆಟಗಾರ ಸೌಮ್ಯಜಿತ್ ಘೋಷ್ ಅತ್ಯಾಚಾರ ಆರೋಪ ಮಾಡಿದ ಯುವತಿಯನ್ನೇ ವಿವಾಹವಾಗುವ ಮೂಲಕ ತಮ್ಮ ಮೇಲಿದ್ದ ಅತ್ಯಾಚಾರ ಆರೋಪಗಳಿಗೆ ತೆರೆ ಎಳೆದಿದ್ದಾರೆ.

25 ವರ್ಷದ ಸೌಮ್ಯಜಿತ್ ಘೋಷ್ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ ರ್ಯಾಂಕಿಂಗ್‍ನಲ್ಲಿ 58ನೇ ಸ್ಥಾನಕ್ಕೆ ಜಿಗಿದಿದ್ದರು. ನಾಲ್ಕು ತಿಂಗಳ ಹಿಂದೆ ಯುವತಿ ಮೇಲೆ ಸೌಮ್ಯಜಿತ್ ಮಾಡಿದ ಅತ್ಯಾಚಾರ ಪ್ರಕರಣ ತಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿತ್ತು.

ಕಳೆದ ಮಾರ್ಚ್‍ನಲ್ಲಿ ಎರಡು ಬಾರಿ ಒಲಿಂಪಿಯನ್ ಹಾಗೂ ರಾಷ್ಟ್ರೀಯ ಚಾಂಪಿಯನ್ ಪಶ್ಚಿಮ ಬಂಗಾಳದ ಬರಾಸಾತ್ ಮೇಲೆ ಸೌಮ್ಯಜಿತ್ ಘೋಷ್ ಅತ್ಯಾಚಾರ ಮಾಡಿದ್ದಾರೆಂದು ಆರೋಪ ಕೇಳಿ ಬಂತು. ಸೌಮ್ಯಜೀತ್ ಆಗ ಜರ್ಮನಿಯಲ್ಲಿ ಆಡುತ್ತಿದ್ದರು.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಘೋಷ್ ಹೆದರಿ ಭಾರತಕ್ಕೆ ಬಂದಿರಲಿಲ್ಲ. ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲೂ ಸೌಮ್ಯಜಿತ್ ಆಡಿರಲ್ಲಿಲ್ಲ.

Next Story

RELATED STORIES