Top

ಆಗಸ್ಟ್ 27ಕ್ಕೆ ಕುರುಕ್ಷೇತ್ರ ಆಡಿಯೋ ಔಟ್...?!

ಆಗಸ್ಟ್ 27ಕ್ಕೆ ಕುರುಕ್ಷೇತ್ರ ಆಡಿಯೋ ಔಟ್...?!
X

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 50ನೇ ಸಿನಿಮಾ ಕುರುಕ್ಷೇತ್ರದ ಆಡಿಯೋ ಅಗೋ ಬರುತ್ತೆ ಇಗೋ ಬರುತ್ತೆ ಅನ್ನೋ ಸುದ್ದಿ ಕಳೆದ ಎರಡು ತಿಂಗಳಿಂದ ಹರಿದಾಡ್ತಾ ಇದೆ. ಆದ್ರೀಗ ಇದೇ ತಿಂಗಳಾಂತ್ಯಕ್ಕೆ ಅದರ ಆಡಿಯೋ ಲಾಂಚ್ ಫಂಕ್ಷನ್ ನಡೆಯಲಿದೆ ಅನ್ನೋದು ಪಕ್ಕಾ ಆಗಿತ್ತು. ಆದ್ರೆ ಅದೂ ಸಹ ಡೌಟು ಅಂತಿದ್ದಾರೆ ನಿರ್ಮಾಪಕ. ಏನೀ ಕನ್​ಫ್ಯೂಶನ್ ಸ್ಟೋರಿ ಅಂತೀರಾ..? ಮುಂದೆ ಓದಿ..

ಬಹುಕೋಟಿ ವೆಚ್ಚದ ಮಹಾದೃಶ್ಯಕಾವ್ಯಗಳು ಮಾಡಿದಾಗಲೆಲ್ಲಾ ಒಂದಿಲ್ಲಾ ಒಂದು ವಿಘ್ನಗಳು ನಡೀತಾನೆ ಇರುತ್ವೆ. ಸದ್ಯ ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರಕ್ಕೂ ಒಂದಷ್ಟು ಸಂಕಷ್ಟಗಳು ಎದುರಾಗಿವೆ. ಅದ್ರಲ್ಲೂ ಸಿನಿಮಾ ದಿನದಿಂದ ದಿನಕ್ಕೆ ಹೊಸ ಹೊಸ ವಿವಾದಗಳನ್ನ ಸೃಷ್ಠಿಸುತ್ತಿರೋದು.

ಯೆಸ್... ಬೇಕು ಅಂತಲೇ ದುರ್ಯೋಧನ ದರ್ಶನ್ ಪಾತ್ರಕ್ಕಿಂತ ಅಭಿಮನ್ಯು ನಿಖಿಲ್ ಪಾತ್ರ ದೊಡ್ಡದಾಗಿಸಿದ್ದಾರೆ ಅನ್ನೋ ಆರೋಪದ ಜೊತೆಗೆ ಸಿನಿಮಾದ ಆಡಿಯೋ ಹಾಗೂ ರಿಲೀಸ್ ಡೇಟ್ ಪದೇ ಪದೇ ಡಿಲೇ ಆಗ್ತಾ ಹೋಗ್ತಿದೆ.

ಮುನಿರತ್ನ ಬರ್ತ್​ ಡೇಗೆ ಆಡಿಯೋ ಬರಲಿಲ್ಲ

ಕಳೆದ ಜುಲೈ ತಿಂಗಳ 23ಕ್ಕೆ, ಚಿತ್ರದ ನಿರ್ಮಾಪಕ ಮುನಿರತ್ನ ಜನುಮ ದಿನಕ್ಕೆ ಕುರುಕ್ಷೇತ್ರ ಆಡಿಯೋ ರಿಲೀಸ್ ಆಗಲಿದೆ ಎನ್ನಲಾಗ್ತಿತ್ತು. ಅದಾದ ಬಳಿಕ ಅದೇ ಜುಲೈ ತಿಂಗಳಾಂತ್ಯಕ್ಕೆ ಪೋಸ್ಟ್​ಪೋನ್ ಆಗಿದೆ ಎನ್ನಲಾಗ್ತಿತ್ತು. ಆದ್ರೆ ಅದ್ಯಾವುದೇ ಡೇಟ್​ಗೆ ಕುರುಕ್ಷೇತ್ರ ಆಡಿಯೋ ಹೊರಬರಲಿಲ್ಲ.

ತಾರಕ್ ಸಿನಿಮಾದ ನಂತ್ರ ಡಿ ಬಾಸ್​ನ ಬಿಗ್ ಸ್ಕ್ರೀನ್ ಮೇಲೆ ನೋಡೋಕೆ ಕಾತರರಾಗಿದ್ದ ದರ್ಶನ್ ಫ್ಯಾನ್ಸ್​ಗೆ ಭಾರೀ ನಿರಾಸೆಯಾಗಿತ್ತು. ಅದ್ರಲ್ಲೂ ಟೀಸರ್ ಮಾಡಿದ ಹಂಗಾಮದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದೊಂದು ದೃಶ್ಯ, ಒಂದೊಂದು ಡೈಲಾಗ್ ಕೂಡ ಧೂಳೆಬ್ಬಿಸಿವರ.

ಈ ತಿಂಗಳಾಂತ್ಯಕ್ಕೂ ರಿಲೀಸ್ ಆಗೋದು ಡೌಟು ಕುರುಕ್ಷೇತ್ರ ಸಾಂಗ್ಸ್..!

ಹೌದು... ಒಂದಷ್ಟು ನ್ಯೂಸ್ ಪೇಪರ್​ಗಳಲ್ಲಿ ಇದೇ ಆಗಸ್ಟ್ 27ಕ್ಕೆ ಕೊನೆಗೂ ಕುರುಕ್ಷೇತ್ರ ಆಡಿಯೋ ರಿಲೀಸ್ ಆಗ್ತಿದೆ ಅಂತ ಸುದ್ದಿಯಾಗಿದೆ. ಆದ್ರೆ ಈ ಕುರಿತು ನಮ್ಮ ಮೂವಿಮನೆ ಟೀಂ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ಸಿನಿಮಾ ಇನ್ನೂ ರೆಡಿಯಾಗಿಲ್ಲ. ಇನ್ನು ಆಡಿಯೋ ಲಾಂಚ್ ಹೇಗೆ ಸಾಧ್ಯ..? ಸದ್ಯಕ್ಕೆ ಮಾಡ್ತಿಲ್ಲ. ನಾವೇ ಅಫಿಶಿಯಲ್ ಆಗಿ ಅನೌನ್ಸ್ ಮಾಡ್ತೀವಿ ಅಂದಿದ್ದಾರೆ.

ಅಂತೂ ಸ್ಕಂದ ಪದ್ಯ ಮಿಶ್ರಿತ ಹಾಡುಗಳನ್ನ ಕೇಳೋಕೆ ಕಾತರರಾಗಿದ್ದ ಕನ್ನಡ ಸಿನಿಪ್ರಿಯರಿಗೆ ಚಿತ್ರತಂಡದ ಈ ಬ್ರೇಕಿಂಗ್ ನ್ಯೂಸ್, ಶಾಕ್ ನೀಡಿದೆ. ಇನ್ನೂ ದ್ವಿತಿಯಾರ್ಧ ಸಿನಿಮಾದ ಗ್ರಾಫಿಕ್ಸ್ ಹಾಗೂ ತ್ರೀಡಿ ವರ್ಕ್​ ಕಂಪ್ಲೀಟ್ ಆಗದ ಹಿನ್ನೆಲೆಯಲ್ಲಿ ಚಿತ್ರತಂಡ ಆಡಿಯೋ ಹಾಗೂ ರಿಲೀಸ್ ಡೇಟ್ ಪದೇ ಪದೇ ಮುಂದೂಡ್ತಿದೆ ಎನ್ನಲಾಗ್ತಿದೆ.

ಕ್ವಾಲಿಟಿ ಸಿನಿಮಾನ ಕೊಡೋ ಸನ್ನಾಹದಲ್ಲಿರೋ ಚಿತ್ರತಂಡ, ಬಾಹುಬಲಿ ರೇಂಜ್​ನ ಮಹಾದೃಶ್ಯಕಾವ್ಯ ಕೊಡೋ ತಯಾರಿಯಲ್ಲಿದೆ. ಅದೇನೇ ಇರಲಿ, ನಾಗಣ್ಣ- ವಿ ನಾಗೇಂದ್ರ ಪ್ರಸಾದ್ ನಿರ್ದೇಶನದ 70ಕೋಟಿ ವೆಚ್ಚದ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಠಿಸಲಿದೆ. ಇನ್ನು ದರ್ಶನ್ ಕರಿಯರ್​ಗೂ ಬಹುದೊಡ್ಡ ಬ್ರೇಕ್ ಕೊಡೋ ಎಲ್ಲಾ ಲಕ್ಷಣಗಳು ಎದ್ದು ಕಾಣ್ತಿದೆ.

ಅದೇನೇ ಇರಲಿ, ಆದಷ್ಟು ಬೇಗ ಕುರುಕ್ಷೇತ್ರ ಆಡಿಯೋ ಹೊರಬರಲಿ, ಅದ್ರ ಬೆನ್ನಲ್ಲೇ ಸಿನಿಮಾ ಕೂಡ ಬೆಳ್ಳಿತೆರೆ ಮೇಲೆ ಮಿಂಚಲಿ ಅನ್ನೋದೇ ನಮ್ಮ ಆಶಯ.

Next Story

RELATED STORIES