Top

ಕರುಣಾ`ನಿಧಿ' ಕಳೆದುಕೊಂಡ ತಮಿಳುನಾಡು ಜನತೆ

ಕರುಣಾ`ನಿಧಿ ಕಳೆದುಕೊಂಡ ತಮಿಳುನಾಡು ಜನತೆ
X

ಸಿನಿಮಾ ಬರಹಗಾರ, ಸಾಹಿತಿ, ಹೋರಾಟಗಾರ, ರಾಜಕಾರಣಿ.. ಹೀಗೆ ಬಹುಮುಖ ವ್ಯಕ್ತಿತ್ವದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ (94) ವಿಧಿವಶರಾಗಿದ್ದಾರೆ.

ಡಿಎಂಕೆ ಪಕ್ಷವನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ 94 ವರ್ಷದ ಕುರಣಾನಿಧಿ 5 ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಕರುಣಾನಿಧಿ ವೃದ್ಧಾಪ್ಯದ ಕಾರಣ ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದರು. ಸಂಜೆ 6.10 ನಿಮಿಷಕ್ಕೆ ಮೃತಪಟ್ಟರು ಎಂದು ವೈದ್ಯರು ಘೋಷಿಸಿದರು.

ಕಳೆದ ಕೆಲವು ದಿನಗಳಿಂದ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 94 ವರ್ಷದ ಕರುಣಾನಿಧಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೃದ್ಧಾಪ್ಯದ ಕಾರಣದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.

ಕರುಣಾನಿಧಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಆಸ್ಪತ್ರೆಯ ಮುಂಭಾಗ ನೆರೆದಿದ್ದರು. ವೈದ್ಯರು ಕರುಣಾನಿಧಿ ಸ್ಥಿತಿ ತೀರಾ ಗಂಭೀರ ಎಂದು ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸರಕಾರ ತಮಿಳುನಾಡಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಿದ್ದರು. ಅಲ್ಲದೇ ಚೆನ್ನೈನಲ್ಲಿ ಸ್ವಯಂಕೃತವಾಗಿ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.

ಕಿರು ಪರಿಚಯ

1924ರಲ್ಲಿ ನಾಗಪಟ್ಟಣದ ತಿರುಕುವಲೈ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಕರುಣಾನಿಧಿ ಪೂರ್ಣ ಹೆಸರು ಮುತ್ತುವೈಲ್ ಕರುಣಾನಿಧಿ. 'ಕಲೆಗಾರ' ಎಂದೇ ಖ್ಯಾತರಾಗಿದ್ದ ಕರುಣಾನಿಧಿ, 1969-2011ರವರೆಗೆ ನಡೆದ ದಲಿತರ ಪರ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅವರ ಈ ಹೋರಾಟ ಫಲವಾಗಿ ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕವಾಯಿತು.

ತಮಿಳು ಚಿತ್ರಗಳಿಗೆ ಚಿತ್ರಕಥೆ ಬರೆಯುವ ಮೂಲಕ ವೃತ್ತಿಜೀವನ ಆರಂಭಿಸಿದ ಕರುಣಾನಿಧಿ, ದ್ರಾವಿಡಂ ಮುನ್ನೆತ್ರಂ ಕಳಗಂ ಎಂಬ ಪಕ್ಷ ಹುಟ್ಟುಹಾಕುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಕೇವಲ ರಾಜಕೀಯ ನಾಯಕರಾಗಿ ಗುರುತಿಸಿಕೊಳ್ಳದೇ, ಬರಹಗಾರ, ಸಾಹಿತಿಯಾಗಿಯೂ ಜನಪ್ರಿಯರಾಗಿದ್ದರು. ಅವರ ಸಾಕಷ್ಟು ಕಥೆ, ಕಾದಂಬರಿ, ಸಾಹಿತ್ಯ ಕೃಷಿ ಜನಪ್ರಿಯವಾಗಿವೆ.

Next Story

RELATED STORIES