Top

ಸ್ವಾಮಿ ವಿವೇಕಾನಂದ, ಬಸವಣ್ಣ ಅವರ ಕೊಲೆ: ಪ್ರೊ.ಭಗವಾನ್

ಸ್ವಾಮಿ ವಿವೇಕಾನಂದ, ಬಸವಣ್ಣ ಅವರ ಕೊಲೆ: ಪ್ರೊ.ಭಗವಾನ್
X

ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣ ಅವರನ್ನು ಕೊಲೆ ಮಾಡಲಾಗಿದೆ. ಅವರು ಸಹಜವಾಗಿ ಐಕ್ಯರಾಗಲಿಲ್ಲ ಎಂದು ಹಿರಿಯ ಸಾಹಿತಿ ಪ್ರೊಫೆಸರ್ ಕೆ.ಎಸ್ ಭಗವಾನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಚರ್ಚೆಗೂ ಕೂಡ ತಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಜನರ ಕಲ್ಯಾಣಕ್ಕೆ ದುಡಿದವರು. ಅಮೆರಿಕದಲ್ಲಿ ಅದ್ಭುತ ಭಾಷಣ ಮಾಡಿದವರು. ಅಂತಹವರು ಹಿಂದಿನ ದಿನ ಚೆನ್ನಾಗಿಯೇ ಇದ್ದರು. ಮಾರನೇ ದಿನ ಮೃತಪಟ್ಟರು ಎಂದು ಹೇಗೆ ಸಾಧ್ಯ. ಅದು ಅಷ್ಟು ಚಿಕ್ಕ ವಯಸ್ಸಿನಲ್ಲಿ ಎಂದು ಪ್ರಶ್ನಿಸಿದರು.

ಬಸವಣ್ಣ ಅವರದ್ದೂ ಅಷ್ಟೇ. ಕೂಡಲ ಸಂಗಮದಲ್ಲಿ ಐಕ್ಯವಾದರು ಎಂದು ಹೇಳುತ್ತಾರೆ. ದೇಹ ಸಮೇತ ಸ್ವರ್ಗಕ್ಕೆ ಹೋದರು ಎನ್ನುತ್ತಾರೆ. ಜಾತಿ ವ್ಯವಸ್ಥೆ ವಿರುದ್ಧ ಚಳುವಳಿಯನ್ನೇ ಮಾಡಿದ ಬಸವಣ್ಣಅವರನ್ನು ಕೂಡಲ ಸಂಗಮದಲ್ಲಿ ಕೊಲ್ಲಲಾಗಿದೆ.

ಸ್ವರ್ಗ, ನರಕ ಎಂಬುದು ಯಾವುದೂ ಇಲ್ಲ. ಬುದ್ಧ ಕೂಡ ಸ್ವರ್ಗ, ನರಕ ಎಲ್ಲಾ ಇಲ್ಲೇ ಇದೆ. ಆಸೆ ಬಿಟ್ಟು ಬದುಕಿರಿ ಎಂದು ಹೇಳಿದ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈಗಾಗಲೇ ನಮ್ಮವರು ಚಂದ್ರ, ಮಂಗಳ ಎಲ್ಲಾ ಸುತ್ತಿ ಬಂದಿದ್ದಾರೆ. ಎಲ್ಲೂ ಸ್ವರ್ಗ, ನರಕ ಸಿಕ್ಕಿಲ್ಲ ಎಂದು ಭಗವಾನ್ ಹೇಳಿದರು.

Next Story

RELATED STORIES