Top

ಬಾಹುಬಲಿ-2 ದಾಖಲೆ ಮುರಿದ ಸಂಜು

ಬಾಹುಬಲಿ-2 ದಾಖಲೆ ಮುರಿದ ಸಂಜು
X

ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ಸಂಜು ಚಿತ್ರ ಗಳಿಕೆಯಲ್ಲಿ ಬಾಹುಬಲಿ-2 ಹಿಂದಿಕ್ಕಿದೆ.

ಬಾಹುಬಲಿ-2 ಭಾರತೀಯ ಚಿತ್ರರಂಗದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ ದಾಖಲೆ ಹೊಂದಿದೆ. ಆದರೆ ಸಂಜು ಚಿತ್ರ ಹಿಂದಿ ಅವತರಣಿಕೆಯಲ್ಲಿ ಈ ದಾಖಲೆಯನ್ನು ಮುರಿದು ಅತೀ ಹೆಚ್ಚು ಗಳಿಕೆ ಮಾಡಿದ ಮೂರನೇ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಆಸ್ಟ್ರೇಲಿಯಾದಲ್ಲಿ ಕೂಡ ಬಾಹುಬಲಿ-2 ದಾಖಲೆಯನ್ನು ಹಿಂದಿಕ್ಕಿದ ಸಾಧನೆ ಮಾಡಿದೆ. ರಣಬೀರ್ ಕಪೂರ್ ವೃತ್ತಿಜೀವನದ ಅತೀ ದೊಡ್ಡ ಹಿಟ್ ಚಿತ್ರ ಇದಾಗಿದೆ.

ದೀಪಿಕಾ ಪಡುಕೋಣೆ ಮತ್ತು ರಣಭೀರ್ ಕಪೂರ್ ನಟನೆಯ ಹಾಗೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಅತೀ ಹೆಚ್ಚು ಆದಾಯ ಗಳಿಸಿದ ಚಿತ್ರವಾಗಿದೆ. ಈ ಚಿತ್ರ 3163 ಕೋಟಿ ರೂ. ಸಂಗ್ರಹಿಸಿದರೆ, ಆಮೀರ್ ಖಾನ್ ಅವರ ದಂಗಾಲ್ ಚಿತ್ರ 2623 ಕೋಟಿ ರೂ. ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ.

ಸಂಜು ಚಿತ್ರದ ಒಟ್ಟಾರೆ ಗಳಿಕೆ ಇದುವರೆಗೆ 2409 ಕೋಟಿ ರೂ. ಆಗಿದ್ದರೆ, ಬಾಹುಬಲಿ (ಹಿಂದಿ) 2407 ಕೋಟಿ ರೂ. ಸಂಗ್ರಹಿಸಿದೆ. ಪಿಕೆ ಚಿತ್ರ 2110 ಕೋಟಿ ರೂ. ಗಳಿಸಿದೆ.

Next Story

RELATED STORIES