Top

ಸೂರಿಲ್ಲದೇ ಶೌಚಾಲಯದಲ್ಲೇ ತಾಯಿ-ಮಗಳು ವಾಸ

ಸೂರಿಲ್ಲದೇ ಶೌಚಾಲಯದಲ್ಲೇ ತಾಯಿ-ಮಗಳು ವಾಸ
X

ಚಿಕ್ಕಬಳ್ಳಾಪುರ : ಸರ್ಕಾರ ಗುಡಿಸಲುಮುಕ್ತ ರಾಜ್ಯ ಮಾಡಬೇಕು ಎಂದು ಬೊಬ್ಬೆಹೊಡೆಯುತ್ತಿದೆ. ಮನೆ ಇಲ್ಲದವರಿಗೆ ಮನೆ ಕಲ್ಪಿಸಿ ಎಂದು ಹೇಳುತ್ತಿದೆ. ಮನೆ ಕಟ್ಟಿಸಿಕೊಳ್ಳಲು ಮನೆಗಳನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಗಳಿಗೆ ಮಂಜೂರು ಮಾಡುತ್ತಿದೆ. ಆದರೇ, ಸರ್ಕಾರದ ವಸತಿ ಯೋಜನೆಗಳು ಸರಿಯಾಗಿ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂಬುದಕ್ಕೆ, ಚಿಕ್ಕಬಳ್ಳಾಪುರದ ಘಟನೆಯೇ ಸಾಕ್ಷಿ.

ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಬೆಳಕಿಗೆ ಬಂದಿದೆ. ಮಂಚೇನಹಳ್ಳಿ ಗ್ರಾಮದ ಲಕ್ಷ್ಮಮ್ಮ ಮತ್ತು ಅವರ ಮಗಳು ಕಳೆದ 7 ವರ್ಷಗಳಿಂದ ವಸತಿ ಇಲ್ಲದೇ ಶೌಚಾಲಯದಲ್ಲಿಯೇ ವಾಸ ಮಾಡುತ್ತಿದ್ದಾರೆ.

ಈ ಬಗ್ಗೆ ನಮ್ಮ ಟಿವಿ5 ತಂಡ ಲಕ್ಷ್ಮಮ್ಮ ಭೇಟಿ ಮಾಡಿ ವಿಚಾರಿಸಿದರೇ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೇಳಿದರೇ, ಕೆಲ ದಿನಗಳ ಕಾಲ ಇಲ್ಲೇ ಇರಮ್ಮ, ಮನೆ ಬಂದಾಗ ಕೊಡ್ತೀವಿ ಎಂದು ಹೇಳಿ ಹೇಳಿ, ಕಳೆದ 7 ವರ್ಷಗಳಿಂದ ಶೌಚಾಲಯದಲ್ಲೇ ವಾಸ ಮಾಡುವಂತೆ ಮಾಡಿದ್ದಾರೆ. ಏನ್ ಮಾಡಲೀ ಸ್ವಾಮಿ.? ಅಧಿಕಾರಿಗಳನ್ನು ಕೇಳಿ ಕೇಳಿ ಸಾಕಾಗಿದೆ. ಯಾರೂ ನಿವೇಶನ ಮಂಜೂರು ಮಾಡುವ ಕಾಳಜಿ ತೋರಲಿಲ್ಲ. ಹೀಗಾಗಿ ಇಲ್ಲೇ ಬದುಕುತ್ತಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಅಂತ ಜನಸಾಮಾನ್ಯರ ಸೇವೆ ಮಾಡಬೇಕು. ಆದರೇ, ಇಂತಹ ಕಾರ್ಯಕ್ಕೆ ಮುಂದಾಗದೇ, ಇರೋ ಕಾರಣವೇ, ಲಕ್ಷ್ಮಮ್ಮ ಶೌಚಾಲಯದಲ್ಲಿ ಕಳೆದ 7 ವರ್ಷಗಳಿಂದ ವಾಸಿಸಿಕೊಂಡು ಬರುವಂತಾಗಿದೆ. ಈ ಬಗ್ಗೆ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ. ಸೂರಿಲ್ಲದ ಲಕ್ಷ್ಮಮ್ಮ ಮತ್ತು ಮಗಳಿಗೆ ಸೂರು ಕಲ್ಪಿಸಿಕೊಡಲಿ.

ವರದಿ : ಮುರಳಿಧರ್, ಟಿವಿ5 ಚಿಕ್ಕಬಳ್ಳಾಪುರ

Next Story

RELATED STORIES