Top

ಸರ್ಕಾರಿ ಕಚೇರಿಯಲ್ಲೇ ಗುಂಡು ತುಂಡು ಪಾರ್ಟಿ.!!

ಸರ್ಕಾರಿ ಕಚೇರಿಯಲ್ಲೇ ಗುಂಡು ತುಂಡು ಪಾರ್ಟಿ.!!
X

ದಾವಣಗೆರೆ : ಇತ್ತೀಚೆಗೆ ಸರ್ಕಾರಿ ಕಚೇರಿಗಳು ಬಾರ್ ಆಂಡ್ ರೆಸ್ಟೋರೆಂಟ್ ಗಳಾದ್ವಾ ಅನ್ನೋ ಪ್ರಶ್ನೆ ದಾವಣಗೆರೆ ಜನರನ್ನ ಕಾಡಲು ಆರಂಭಿಸಿದೆ. ಯಾಕಂದರೆ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಚಂದ್ರಶೇಖರ್ ಮತ್ತು ಆಹಾರ ಇಲಾಖೆಯ 10 ರಿಂಧ 15 ಜನರು ಗುಂಡು, ತುಂಡು ಪಾರ್ಟಿ ಮಾಡಿದ್ದಾರೆ. ಅದು, ದಾವಣಗೆರೆ ಕೋರ್ಟ್ ಪಕ್ಕದಲ್ಲೆ ಇರುವ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ.

ರಾತ್ರಿ 11 ಗಂಟೆ ಸುಮಾರಿನಲ್ಲಿ ಸರ್ಕಾರಿ ಕಚೇರಿಯಲ್ಲಿಯೇ ಎಲ್ಲರೂ ಭಾನುವಾರ ರಾತ್ರಿ ಭರ್ಜರಿ ಮದ್ಯ ಮತ್ತು ಮಾಂಸ ಸೇವಿಸುತ್ತ ಹರಟೆ ಹೊಡೆಯುತ್ತಿದ್ದರು. ಈ ವೇಳೆ ಸುದ್ದಿ ತಿಳಿದು ಮಾಧ್ಯಮದವರು ಸ್ಥಳಕ್ಕೆ ಹೋಗುತ್ತಿದ್ದಂತೆ, ಕ್ಯಾಮರಾಗಳನ್ನು ಕಂಡು ಒಬ್ಬೊಬ್ಬರೇ ಕುಡಿಯುತ್ತಿದ್ದ ಬಾಟಲಿಗಳನ್ನು ಮುಚ್ಚಿಟ್ಟುಕೊಂಡು ಅಲ್ಲಿಂದ ಓಡೋಕೆ ಪ್ರಾರಂಭಿಸಿದರು. ಸರ್ಕಾರಿ ಕಚೇರಿ ಒಳಗೆ ಹೋಗಿ ನೋಡಿದರೆ ಎಲ್ಲರೂ ಬಾಟಲಿ ಹಾಗೂ ಮಾಂಸ ಮುಂದಿಟ್ಟುಕೊಂಡು ಕುಡಿಯುತ್ತಿದ್ದರು.

ಗುಂಡು ತುಂಡು ಪಾರ್ಟಿಯ ನೇತೃತ್ವ ವಹಿಸಿದ್ದ ದಾವಣಗೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಅವರನ್ನ ಕೇಳಿದರೆ ಈಗ ಆಷಾಡ ಅಲ್ವಾ. ಬಾರ್ ಆಂಡ್ ರೆಸ್ಟೋರೆಂಟ್ ಗಳಲ್ಲಿ ಮಾಡೋಕಾಗಲ್ಲ. ಹೀಗಾಗಿ, ಇಲ್ಲಿ ಮಾಡಿದ್ಧೇವೆ ಎಂದು ಹೇಳಿದರು. ಈ ಮೂಲಕ ಗುಪ್ತವಾಗಿ ನಡೆಯುತ್ತಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಗುಂಡು ಪಾರ್ಟಿ ವಿಷಯ ಬಹಿರಂಗವಾಗಿದ್ದಕ್ಕೆ, ಸಾರ್ವಜನಿಕ ವಲಯದಲ್ಲೂ ಆಕ್ರೋಶ ಕಾರಣವಾಗಿದೆ.

ಈ ಬಗ್ಗೆ ಲೆಕ್ಕಪರಿಶೋದನಾ ಉಪನಿರ್ದೆಶಕರನ್ನ ಕೇಳಿದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ. ಜನತಾ ಬಜಾರ್ ನಲ್ಲಿಯೇ ಲೆಕ್ಕ ಪರಿಶೋಧನಕರ ಕಚೇರಿ ಇದ್ದು, ಇಲ್ಲಿಂದಲೇ ಅವರ ಕಚೇರಿಗೆ ಹೋಗ ಬೇಕು. ಅವರ ಕಚೇರಿ ಬೀಗ ಹಾಕಿದ್ದರಿಂದ ಇಲ್ಲಿಯೇ ಪಾರ್ಟಿ ಮಾಡಿರಬಹದು. ಈ ಪಾರ್ಟಿ ಯಾರು ಏಕೆ ಮಾಡಿದರು ಗೊತ್ತಿಲ್ಲಾ, ಸರ್ಕಾರಿ ಕಚೇರಿಗಳಲ್ಲಿ ಈ ರೀತಿ ಮಾಡ ಬಾರದು, ಮಾಡಿರುವುದು ತಪ್ಪು ಎನ್ನುತ್ತಾರೆ.

ಒಟ್ಟಿನಲ್ಲಿ, ಅಧಿಕಾರಿಗಳು ಗುಟ್ಟಾಗಿ ಮಾಡುತ್ತಿದ್ದ ಗುಂಡು ಪಾರ್ಟಿ ವಿಷಯ ಇದೀಗ ಬಹಿರಂಗವಾಗಿದೆ. ಇದೀಗ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಗುಂಡು ತುಂಡು ಪಾರ್ಟಿ ಮಾಡಿದವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡ ಬೇಕಿದೆ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES