ಗಿನ್ನಿಸ್ ದಾಖಲೆಯ ನಿರೀಕ್ಷೆಯಲ್ಲಿ ಯೋಗ ಪಟು.!

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮಯ ಯೋಗ ಪಟು ತುಕಾರಾಮ್ ಕೋಳಿ, ಯೋಗದಲ್ಲಿ ಏನಧರೂ ಸಾಧನೆ ಮಾಡಬೇಕು ಎಂಬ ಪಣ ತೊಟ್ಟಿರುವ ತುಕಾರಾಮ್ ಅವರು ಯೋಗದ ಭಾಗವಾಗಿರುವ ಸೂರ್ಯ ನಮಸ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಇವರು ಸೂರ್ಯ ನಮಸ್ಕಾರ ಸುಲಲಿತವಾಗಿ ತೆಗೆಯುತ್ತಿದ್ದು ಯೋಗ ಲೋಕಅಶ್ಚರ್ಯ ಪಡುವಂತ್ತಾಗಿದೆ. ಗಿನ್ನಿಸ್ ದಾಖಲೆಯೂ ಸಮೀಪಿಸುತ್ತಿದ್ದಾರೆ ಎಂದರೂ ತಪ್ಪಾಗಕ್ಕಿಲ್ಲ.
ತುಕಾರಾಮ್ ಅವರು ಮೊದಲು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರು ವೈದ್ಯರ ಸಲಹೆಯಂತೆ ಯೋಗ ಕಲಿಯಲು ಮುಂದಾಗುತ್ತಾರೆ. ಆದರೆ ತುಕಾರಾಮ್ಗೆ ಯೋಗದ ಬಗ್ಗೆ ಎಳ್ಳಷ್ಟೂ ಮಾಹಿತಿ ಇರಲಿಲ್ಲ ನಂತರ ಅವರಿವರು ಮಾಡುವುದನ್ನು ನೋಡಿಕೊಂಡು ಪ್ರಶಾಂತ ವಾತಾವರಣ ಇರುವ ಕೃಷ್ಣಾ ನದಿ ದಡದಲ್ಲಿ ಹೋಗಿ ದಿನಕ್ಕೆ 10 ರಿಂದ 20 ನಿಮಿಷ ಸೂರ್ಯ ನಮಸ್ಕಾರ ಮಾಡೋದಕ್ಕೆ ಮುಂದಾಗುತ್ತಾರೆ.
ಹೀಗೆ ಶುರುವಾದ ಯೋಗಾಭ್ಯಾಸ, ಈಗ ದಿನದಲ್ಲಿ 100 ಬಾರಿ ಸೂರ್ಯ ನಮಸ್ಕಾರ ಮಾಡಲು ಶುರುಮಾಡಿದ್ದಾರೆ. ಈ ಮೂಲಕ ನಿರಂತರವಾಗಿ ಎರಡು ವರ್ಷದಿಂದ ಯೋಗ ಇದೇ ಸಾಧನೆಯಲ್ಲಿ ತೊಡಗಿದ್ದಾರೆ. ಕಳೆದ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಮಾಡಿದ ಇವರ ಸಾಧನೆ, ಎಲ್ಲರನ್ನೂ ನಿಬ್ಬೆರಗು ಮೂಡಿಸುವಂತೆ ಮಾಡಿತ್ತು.
ಇದೀಗ ಇದೇ ಸ್ಪೂರ್ತಿಯಲ್ಲಿ, 12 ನಿಮಿಷದಲ್ಲಿ 108 ಬಾರಿ, 20 ನಿಮಿಷದಲ್ಲಿ 250ರಿಂದ 260 ಬಾರಿ ಸೂರ್ಯ ನಮಸ್ಕಾರ ಮಾಡುವ ಮೂಲಕ, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗೋಕೆ ತಯಾರಿ ನಡೆಸುತ್ತಿದ್ದಾರೆ. ಇಂತಹ ತುಕಾರಾಮ್ ಕೋಳಿ ಅವರು ಎಡೆಬಿಡದೆ ಸೂರ್ಯನಮಸ್ಕಾರ ತೆಗೆದು ಎಲ್ಲರ ಗಮನವೂ ಸೆಳೆಯುತ್ತಿದ್ದಾರೆ. ದಾಖಲೆ ನಿರೀಕ್ಷೆಯಲ್ಲಿ ಇರುವ ಕೋಳಿ ಅವರು ಪ್ರಯತ್ನ ಆದಷ್ಟು ಬೇಗ ಈಡೇರಲಿ ಎಂಬುವುದು ಎಲ್ಲರ ಆಶಯ.
ವರದಿ : ರವೀಂದ್ರ ಚೌಗುಲೆ, ಟಿವಿ5 ಚಿಕ್ಕೋಡಿ