Top

ವಾಟ್ಸಪ್‌ನಲ್ಲೂ ಸದ್ಯದಲ್ಲೇ ಜಾಹಿರಾತು ಕಿರಿಕಿರಿ ಶುರು.!!

ವಿಶ್ವದ 1.4 ಬಿಲಿಯಲ್ ಜನರು ಬಳಸುತ್ತಿರುವ ಪ್ರಭಾವ ಶಾಲಿ ಸೋಷಿಯಲ್ ಮೀಡಿಯಾ ವಾಟ್ಸಾಪ್. ಇಂದು ದಿನೇ ದಿನೇ ಇದರ ಪ್ರಸಿದ್ದಿ ಹೆಚ್ಚುತ್ತಾ ಹೋಗುತ್ತಿದೆ.

ಹೀಗೆ ಪ್ರಸಿದ್ದಿ ಗಳಿಸುತ್ತಿರುವ ವಾಟ್ಸಾಪ್, ಯಾವುದೇ ಜಾಹಿರಾತು ಕಿರಿಕಿರಿ ಇಲ್ಲದೇ, ಇಷ್ಟು ದಿನ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ಮೂಲಕ ವಿಶ್ವದ ಅತ್ಯಂತ ಹೆಚ್ಚು ಜನರು ಬಳಸುವ ಸಾಮಾಜಿಕ ತಾಣವಾಗಿತ್ತು.

ಆದರೇ, ಇಂತಹ ವಾಟ್ಸಾಪ್, ಇದೀಗ ಹಣಕಾಸಿನ ಗಳಿಕೆಗೂ ಇದೀಗ ಮುಂದಾಗಿದೆ. 2014ರಲ್ಲಿ ಫೇಸ್‌ಬುಕ್‌ ವಾಟ್ಸಾಪ್ ಖರೀದಿಸಿದ ಮೇಲೆ, ಮಹತ್ವದ ಬದಲಾವಣೆ ಪಡೆಯುತ್ತಿದೆ. ಈ ಮೂಲಕ ಜಾಹಿರಾತು ಮೂಲಕ ಹಣ ಗಳಿಕೆಗೆ ಮುಂದಾಗಿದೆ.

ಶೀಘ್ರವೇ ನಿಮ್ಮ ವಾಟ್ಸಾಪ್‌ನಲ್ಲಿ ಜಾಹಿರಾತು ಕಿರಿಕಿರಿ ಶುರುವಾಗಲಿದೆ. ಚಾಟಿಂಗ್ ವೇಳೆ, ನಿಮಗೆ ಜಾಹಿರಾತು ಕಿರಿಕಿರಿ ಇನ್ಮುಂದೆ ಉಂಟಾಗಲಿದೆ.

ಈ ಹಿಂದೆ ಕೂಡ ಈ ಬಗ್ಗೆ ಸುದ್ದಿ ಹಬ್ಬಿತ್ತು. ಆದರೇ ನಿಜವಾಗಿರಲಿಲ್ಲ. ಇದೀಗ ನಿಜ ಸುದ್ದಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆಯ ವೇಳೆ ಜಾಹಿರಾತು ಪ್ರಸಾರಕ್ಕೆ ಅನುಮತಿ ಪಡೆದಿದೆ.

ಹೀಗಾಗಿ ಸದ್ಯದಲ್ಲೇ ವಾಟ್ಸಾಪ್‌ನಲ್ಲೂ ಜಾಹಿರಾತು ಶುರುವಾಗಲಿದೆ. ಹೀಗಾಗಿ ವಾಟ್ಸಾಪ್ ಬಳಕೆದಾರರು ಜಾಹಿರಾತು ಕಿರಿಕಿರಿ ಅನುಭವಿಸೋಕೆ ಸಿದ್ದರಾಗಿರಬೇಕಿದೆ.

Next Story

RELATED STORIES