Top

ರಿಲೀಸ್ ಆಗಲ್ವಾ ಪ್ರಿಯಾ ಪ್ರಕಾಶ್ ನಟನೆಯ ಸಿನಿಮಾ..?

ಬಣ್ಣದ ಲೋಕದಲ್ಲಿ ಯಾರು ಯಾವಾಗ ಬೇಕಾದ್ರು ಸ್ಟಾರ್ ಆಗ ಬಹುದು. ಆದ್ರೆ ಸಿನಿ ಇತಿಹಾಸದ ಪುಟವನ್ನು ನೋಡ್ತಿದ್ರೆ ಒಂದು ಸಿನಿಮಾ ತೆರೆಕಂಡು ಸೂಪರ್ ಹಿಟ್ ಆದ ನಂತರ ಕಲಾವಿದ ಸ್ಟಾರ್ ಆಗೋದು. ಆದ್ರೆ ಇನ್ನು ಸಿನ್ಮಾನೂ ರಿಲೀಸ್ ಆಗಿಲ್ಲ, ಟ್ರೈಲರೂ ಲಾಂಚ್ ಆಗಿಲ್ಲ. ಹೊರ ಬಂದಿದ್ದು ಜಸ್ಟ್ 3ನಿಮಿಷ 17 ಸೆಕೆಂಡ್​ ನ ಒಂದು ಹಾಡು.ಅದ್ರಲ್ಲಿ ಆ ಚೆಲುವೆ ಕಾಣಿಸಿಕೊಂಡಿದ್ದು ಜಸ್ಟ್ 20ರಿಂದ 30 ಸೆಕೆಂಡು ಅಷ್ಟೆ. ತನ್ನ ಮೀನುಗಂಗಳಿಂದ ಬಿಲಿಯನ್ ಬಾಯ್ಸ್​​ ಹೃದಯಗಳಿಗೆ ಬೆಳ್ಳಿ ಬಾಣ ಬಿಟ್ಟಳು.

ಆ ಒಂದು ಕಣ್ಸನ್ನೆ ಪ್ರಿಯಾ ಪ್ರಕಾಶ್ ವಾರಿಯರ್ ಬದುಕನ್ನೇ ಬದಲಾಯಿಸಿಬಿಡ್ತು.. ರಾತ್ರೋ ರಾತ್ರಿ ಪ್ರಿಯಾ ನ್ಯಾಷನಲ್ ಕ್ರಶ್ ಆಗಿ ಬಿಟ್ಲು.. ಪ್ರಿಯಾ ಖ್ಯಾತಿಯನ್ನು ಎನ್​ಕ್ಯಾಶ್ ಮಾಡಿಕೊಳ್ಳಲು ಮುಂದಾದ ಚಿತ್ರತಂಡ ಈಗ ಫುಲ್ ಚಿತ್ರದ ಕಥೆಯನ್ನೆ ಪ್ರಿಯಾ ಮೇಲೆ ವಾಲಿಸಿ, ಹೊಸದಾಗಿ ಶೂಟಿಂಗೂ ಮಾಡಿದೆ.. ಮಾರ್ಚ್​ನಲ್ಲಿ ತೆರೆಕಾಣಬೇಕಿದ್ದ ಒರ್ ಆಡರ್ ಲವ್ ಸಿನಿಮಾ ಈಗ ಸೆಪ್ಟೆಂಬರ್ 14ಕ್ಕೆ ಎಂದು ನಿಗದಿಯಾಗಿದೆ.. ಆದ್ರೆ ಈಗ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಟ್ವಿಸ್ಟ್ ಬಂದಿದೆ. ಸಿನಿಮಾ ರಿಲೀಸ್ ಮಾಡಿ ಗರಿ ಗರಿ ಪಿಂಕ್ ನೋಟುಗಳನ್ನು ಎಣಿಸ ಬೇಕಿದ್ದ ಪ್ರೋಡ್ಯೂಸರ್ ಸಾಹೇಬ್ರೆ ನಾಪತ್ತೆ ಆಗಿ ಬಿಟ್ಟಿದ್ದಾರಂತೆ.. ಹಿಗಾಗಿ ಶೂಟಿಂಗ್ ಅರ್ಧಂ ಬರ್ಧಂ ಆಗಿದೆಯಂತೆ.

ಮಾಲಿವುಡ್​ನ ಗಾಸಿಪ್‌​​ಗಳು ಅಷ್ಟರ ಮಟ್ಟಿಗೇನು ಸೌಥ್​​ನಲ್ಲಿ ಸದ್ದು ಮಾಡೋದಿಲ್ಲ. ಆದ್ರೆ ಪ್ರಿಯಾ ಪ್ರಕಾಶ್ ವಾರಿಯರ್​ ನಟಿಸಿರುವ ಈ ಒರ್ ಆಡರ್ ಲವ್​ ಸಿನಿಮಾದ ಬಗ್ಗೆ ಈಗ ಊಹಾ ಪೋಹಗಳು ಗಗನದಲ್ಲಿ ಗಾಳಿಪಟವಾಗಿವೆ.. ನಿರ್ಮಾಪಕ ಔಸೆಪಾಚನ್ ವಾಲಕುಜಿ ರೀ ಶೂಟಿಂಗ್​​ನ ಖರ್ಚು ತಡೆಯಲಾಗದೆ, ಅಡ್ರೆಸ್​ ಇಲ್ದಂಗೆ ಮಾಯವಾಗಿ ಬಿಟ್ಟಿದ್ದಾರಂತೆ..

Next Story

RELATED STORIES