Top

'ನನ್ನ ಅವಳಿ ಮಕ್ಕಳಿಗೆ ಹೆಣ್ಣು ಹುಡುಕಿ'- ಸ್ವಾಮೀಜಿಗೆ ಮನವಿ

ನನ್ನ ಅವಳಿ ಮಕ್ಕಳಿಗೆ ಹೆಣ್ಣು ಹುಡುಕಿ- ಸ್ವಾಮೀಜಿಗೆ ಮನವಿ
X

ಮೈಸೂರು: ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಉದ್ಯಮಿ ಅಶೋಕ್ ಖೇಣಿ, ತಮ್ಮ ಅವಳಿ ಜವಳಿ ಮಕ್ಕಳಿಗೆ ಹೆಣ್ಣು ಹುಡುಕಿ ಕೊಡಿ ಎಂದು ಸುತ್ತೂರು ಶ್ರೀಗಳಲ್ಲಿ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ನಡೆದ ಬಸವ ಜಯಂತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಖೇಣಿ, ನಮ್ಮ ಮಕ್ಕಳಿಗೆ ಹೆಣ್ಣು ಹುಡುಕಿ, ಲಿಂಗಾಯಿತರಾಗಬೇಕು, ಸುಂದರವಾಗಿರಬೇಕು.? ನಿಮ್ಮ ಆಶಿರ್ವಾದ ಇರಬೇಕು, ನಿಮ್ಮ ಮಠದಲ್ಲೇ ಮದುವೆ ಮಾಡಿಕೊಡುತ್ತೇನೆಂದು ವಿನಂತಿ ಮಾಡಿದರು. ಅಲ್ಲದೇ, ಸ್ವಾಮೀಜಿ ಬಹಳ ಸುಂದರವಾಗಿದ್ದಾರೆ. ನನ್ನ ಹೆಂಡತಿ ಸ್ವಾಮೀಜಿ ಕಣ್ಣುಗಳ ಬಗ್ಗೆ ಹೊಗಳುತ್ತಿರುತ್ತಾರೆ‌ ಎಂದು ಸ್ವಾಮೀಜಿಯನ್ನು ಹೊಗಳುವ ಭರದಲ್ಲಿ, ಅಶೋಕ್ ಖೇಣಿ ಸ್ವಾಮೀಜಿಗೆ ಮುಜುಗರ ಮಾಡಿದರು.

ಇನ್ನು ಸನ್ಯಾಸತ್ವದ ಬಗ್ಗೆ ಮಾತನಾಡಿದ ಖೇಣಿ, ರಾಜಕಾರಣ, ಉದ್ಯಮ ಎಲ್ಲಾ ಆಯಿತು. ನನಗೆ ಒಂದು ಮಠ ಕೊಡಿ. ನನ್ನನ್ನು ಸ್ವಾಮೀಜಿ ಮಾಡಿ ಎಂದು ಕೇಳಿದ್ದೆ. ಸ್ವಾಮೀಜಿ ಒಪ್ಪುತ್ತಿಲ್ಲ, ನಿಮ್ಮ ಪತ್ನಿಯ ಒಪ್ಪಿಗೆ ತನ್ನಿ ಎನ್ನುತ್ತಿದ್ದಾರೆ. ನಾನೂ ಏನು ಮಾಡಲಿ ಎಂದು ಹಾಸ್ಯ ಚಟಾಕಿ ಹಾರಿಸಿದ್ರು.

Next Story

RELATED STORIES