Top

ಸ್ಟೀವನ್ ಹಿಂದಿಕ್ಕಿದ ಕೊಹ್ಲಿ ಟೆಸ್ಟ್​ ನಲ್ಲಿ ನಂ.1 ಬ್ಯಾಟ್ಸ್ ಮನ್

ಸ್ಟೀವನ್ ಹಿಂದಿಕ್ಕಿದ ಕೊಹ್ಲಿ ಟೆಸ್ಟ್​ ನಲ್ಲಿ ನಂ.1 ಬ್ಯಾಟ್ಸ್ ಮನ್
X

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲುಂಡರೂ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ನಂ.1 ಬ್ಯಾಟ್ಸ್ ಮನ್ ಸ್ಥಾನ ಅಲಂಕರಿಸಿದ 7ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

29 ವರ್ಷದ ವಿರಾಟ್ ಕೊಹ್ಲಿ 7 ವರ್ಷದ ನಂತರ ಅಗ್ರಸ್ಥಾನ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. 2011 ಜೂನ್​ನಲ್ಲಿ ಸಚಿನ್ ತೆಂಡುಲ್ಕರ್ ನಂ.1 ಸ್ಥಾನ ಅಲಂಕರಿಸಿದ ನಂತರ ಕೊಹ್ಲಿ ಈ ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್​ಬಾಸ್ಟನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಮೊದಲ ಇನಿಂಗ್ಸ್ ನಲ್ಲಿ 149 ರನ್ ಸಿಡಿಸಿದ್ದ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ 51 ರನ್ ಗಳಿಸಿದ್ದರು. ಈ ಮೂಲಕ ಕೊಹ್ಲಿ 31 ಅಂಕ ಗಳಿಸುವ ಮೂಲಕ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅವರನ್ನು ಹಿಂದಿಕ್ಕಿ ವೃತ್ತಿಜೀವನದಲ್ಲಿ ಮೊದಲ ಬಾರಿ ನಂ.1 ಸ್ಥಾನಕ್ಕೇರಿದರು. 67 ಟೆಸ್ಟ್​ ಗಳನ್ನು ಆಡಿದ ಕೊಹ್ಲಿ ಇದು ವೃತ್ತಿಜೀವನದ ಅತೀ ದೊಡ್ಡ ಸಾಧನೆಯಾಗಿದೆ.

Next Story

RELATED STORIES