Top

ನಿನ್ನ ಸ್ನೇಹದಿಂದ.. ಎಲ್ಲಾ ಚೆಂದ ಚೆಂದ..

ನಿನ್ನ ಸ್ನೇಹದಿಂದ.. ಎಲ್ಲಾ ಚೆಂದ ಚೆಂದ..
X

ವಿಶೇಷ ವರದಿ : ವೀಣಾ ಸಿದ್ದಾಪುರ, ಟಿವಿ5 ಬೆಂಗಳೂರು

ಬೆಂಗಳೂರು : ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ನಾನು ಸ್ನೇಹ ಜೀವಿ.. ರಕ್ತ ಸಂಬಂಧಗಳ ಮೀರಿದ ಬಂಧವಿದು, ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ.. ಅರೇ ಎನಪ್ಪಾ ಇವ್ರು ನ್ಯೂಸ್​ ಓದೋದು ಬಿಟ್ಟು ಕನ್ನಡ ಚಿತ್ರರಂಗದ ಫ್ರೇಂಡ್​ಶಿಪ್​ ಸಾಂಗ್​ಗಳನ್ನಾ ಹೇಳ್ತಿದಾರೆ ಅಂದ್ಕೊಳ್ತಿದೀರಾ.. ಅದ್ರಲ್ಲೇ ಇರೋದು ನೋಡಿ ವಿಶೇಷತೆ.. ಯಾಕಂದ್ರೆ ಜೀವನದಲ್ಲಿ ಪ್ರಮುಖ ಪಾತ್ರ ವಹಿಸೋ ಸ್ನೇಹಿತರ ದಿನಾಚರಣೆ ಇಂದು..

ಸ್ನೇಹ ಈ ಪದ ಕೇಳಿದ್ರೆ ಸಾಕು ಮನಸ್ಸಲ್ಲಿ ಒಂಥರಾ ಖುಷಿಯಾಗುತ್ತೆ.. ಜೊತೆಗೆ ನಮ್ಮ ಜೀವನದ ಎಳುಬೀಳಿನಲಿ ಪ್ರಮುಖ ಪಾತ್ರ ವಹಿಸಿದ ಸ್ನೇಹಿತರ ಚಿತ್ರಗಳು ಕಣ್ಮುಂದೆ ಬರುತ್ವೆ.. ಇನ್ನೂ ಸ್ಬೇಹಿತರ ದಿನ ಅಂದ್ರೆ ಕೇಳ್ಬೇಕಾ.. ಹರಟೆ ಮೋಜು ಮಸ್ತಿ, ಜೊತೆಗೊಂದಿಷ್ಟು ಖುಷಿಯಂತೂ ಕಾಮನ್​.. ಇನ್ನೂ ಇವತ್ತು ವಿಶ್ವ ಸ್ನೇಹಿತರ ದಿನಾಚರಣೆ.. ಈ ಹಿನ್ನಲೆ ಸಿಲಿಕಾನ್​ ಸಿಟಿ ಮಂದಿ ಸ್ನೇಹದ ಸಂಕೇತವಾಗಿ ಪ್ರೇಂಡ್​ಶಿಪ್​ ಡೇ ಸೆಲೆಬ್ರೇಟ್​ ಮಾಡಿದ್ರು.

ಹೌದು ಮನಸ್ಸು ಮನಸ್ಸುಗಳ ಬಾಂಧವ್ಯವೇ ಈ ಗೆಳೆತನ. ನೋವು ನಲಿವಿಗೆ ಸಾಥ್ ನೀಡಿ ಜೊತೆಯಲ್ಲಿ ಬೆರೆಯುವ ಮನಸ್ಸೇ ಸ್ನೇಹದ ರೂಪ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷ ಬೆಲೆಕಟ್ಟಲಾಗದ್ದು.. ಈ ಹಿನ್ನಲೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಸ್ನೇಹಿತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ್ರು.. ಜೊತೆಗೆ ಕಾಲ ಕಳೆದು ನಕ್ಕು ನಲ್ಲಿದ್ರು.. ತಮ್ಮ ಜೀವನದಲ್ಲಿ ಪ್ರಮುಖವಾದ ಸ್ನೇಹಿತರನ್ನಾ ಹೆಮ್ಮೆಯಿಂದ ನೆನಪಿಸಿಕೊಂಡು ಶುಭಾಷಯ ತಿಳಿಸಿದ್ರು..

ಒಂದ್ಕಡೆ ಕಾಲೇಜು ಕನ್ಯಾ ಮಣೆಗಳೆಲ್ಲಾ ಸೇರಿ ಬಲೂನ್​ ಹಿಡ್ಕೊಂಡು ಪ್ರೆಂಡ್​ಶಿಪ್​ ಬ್ಯಾಂಡ್​ ಕಟ್ಟಕೊಂಡು ಶುಭಾಶಯ ವಿನಿಮಯ ಮಾಡಿಕೊಂಡ್ರು.. ಇನ್ನೋಂದ್ಕಡೆ ಪುಣಾಣಿ ಮಕ್ಕಳಿಂದ ಹಿಡ್ದು ದೊಡ್ಡೋರು ಕೇಕ್​ ಕಟ್ ಮಾಡಿ ಫ್ರೆಂಡ್​ಶಿಪ್​ ಬ್ಯಾಂಡ್​ ಕಟ್ಕೊಂಡು ಸೆಲೆಬ್ರೇಟ್​ ಮಾಡಿದ್ರು.. ಇನ್ನೂ ಪುಟಾಣಿ ಮಕ್ಳು ಕೇಕ್​ ತಿನಿಸ್ತಾ ಫ್ರೇಂಡ್​ಶಿಪ್​ ಬ್ಯಾಂಡ್​ ಕಟ್ಕೊಂಡಿದ್ದು ವಿಶೇಷವಾಗಿತ್ತು.. ಜೊತೆಗೆ ಬೆಡಗಿಯರ ಕೈನಲ್ಲೂ ಕಲರ್​ ಕಲರ್​ ಫ್ರೆಂಡ್​ಶಿಪ್​ ಬ್ಯಾಂಡ್​ಗಳು ಮೀರಿ ಮೀರಿ ಮಿಂಚ್ತಾ ಕಮಾಲ್​ ಮಾಡಿದ್ವು..

ಸ್ನೇಹ ಅನ್ನೋದು ಹಾಗೇ ಇದಕ್ಕೆ ಜಾತಿ ಅಂತಸ್ತುಗಳಿಲ್ಲ.. ಸ್ನೇಹ ಮರೆಯಲಾರದ್ದು.. ಸ್ನೇಹಕ್ಕೆ ಸಾವಿಲ್ಲ.. ಸ್ನೇಹ ಅಮರ.. ಇಂಥ ಸ್ನೇಹ ಪ್ರತಿಯೊಬ್ಬರ ಜೀವನದಲ್ಲಿ ಹಚ್ಚ ಹಸಿರಾಗಿರಲಿ.. ಯಾವುದೋ ಕಾರಣದಿಂದ ದೂರವಾದ ಸ್ನೇಹಿತರೆಲ್ಲರೂ ಒಂದಾಗಲಿ.. ಒನ್ಸ್​ ಅಗೇನ್​ ಟಿವಿ 5 ವಿಕ್ಷಕರಿಗೂ ಹ್ಯಾಪಿ ಫ್ರೆಂಡ್​ಶಿಪ್​ ಡೇ..

Next Story

RELATED STORIES