Top

ಸ್ನೇಹಿತರು ಅಂದ್ರೆ ಹೀಗೆ ಇರಬೇಕು..!!

ಸ್ನೇಹಿತರು ಅಂದ್ರೆ ಹೀಗೆ ಇರಬೇಕು..!!
X

ವಿಶೇಷ ವರದಿ : ಮಂಜುನಾಥ್ ತಳವಾರ್, ಟಿವಿ5 ಬಾಗಲಕೋಟೆ

ಬಾಗಲಕೋಟೆ : ಸ್ನೇಹಿತರು ಅಂದ್ರೆ ಹಿಂಗ್ ಇರಬೇಕು ಅಂತ ಅನ್ಸಿಬೇಕು. ಯಾಕಂದ್ರೆ ಬಾಗಲಕೋಟೆಯಲ್ಲಿ ಇಬ್ಬರು ಸ್ನೇಹಿತರಿದ್ದಾರೆ. ಇವರ ಸ್ನೇಹ ನೋಡಿದ್ರೆ ಎಂಥವರಿಗೂ ಇದು ಅಪರೂಪದ ಸ್ನೇಹ ಅನ್ಸುತ್ತೆ. ಅಂಧನೊಂದಿಗೆ ಬೆಸದ ಆತನ ಸ್ನೇಹ ಎಲ್ಲದಕ್ಕೂ ಮಿಗಿಲಾಗಿದೆಯಂತೆ. ಇವರಿಬ್ಬರ ಸ್ನೇಹವನ್ನ ನೋಡಿದ ಜನ್ರು ರಾಮ್-ರಹೀಮ್, ಶಿಶುನಾಳ ಷರೀಫ್ -ಗೋವಿಂದ ಭಟ್ಟರು ಬಂದ್ರು ನೋಡಿ ಎನ್ನುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದೆ ಇವರ ಸ್ನೇಹ.

ಕಣ್ಣು ಕಾಣದೆಯಿದ್ರೂ ಎಲ್ಲರನ್ನೂ ಪ್ರೀತಿಯಿಂದ ಕಾಣೋ ಅವಿವಾಹಿತ ಅಂಬಾದಾಸ್ ಕುಲಕರ್ಣಿ. ಇವರು ಜೊತೆಯಲ್ಲಿ ಹಗಲಿರುಳು ಸ್ನೇಹಿತನ ಸೇವೆಯಲ್ಲಿ ಕಾಲ ಕಳೆಯುತ್ತಿರೋ ವಿವಾಹಿತ ಇಕ್ಬಾಲಸಾಬರು... ಹೌದು... ಇಂಥದೊಂದು ಅಪರೂಪದ ಹಿಂದೂ-ಮುಸ್ಲಿಮ್ ಭಾವೈಕ್ಯತೆ ಸ್ನೇಹದ ಜೋಡಿ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ...

ಬ್ರಾಹ್ಮಣ ಕುಟುಂಬದ ಅಂಬಾದಾಸ್ ಕುಲಕರ್ಣಿಯವರಿಗೆ 71ರ ಇಳಿವಯಸ್ಸು.. ಇವರ ತಮ್ಮನೂ ಸಹಿತ ದೃಷ್ಠಿದೋಷಯುಳ್ಳವರು. ಅನುವಂಶೀತೆಯಿಂದ ತಮ್ಮ ಕಣ್ಣು ಕಳೆದುಕೊಂಡಿದ್ದಾರೆ. ಎಸ್ ಎಸ್ ಎಲ್ ಸಿ ವರೆಗೆ ಓದಿರೋ ಅಂಬಾದಾಸರು ದಿನಂಪ್ರತಿ ಎಲ್ಲೆಡೆ ಹೋಗಬೇಕಾದ್ರೆ ಯಾರಾದಾದರೂ ಸಹಾಯ ಪಡೆಯಲೇಬೇಕು.

ಒಂದು ದಿನ ಕಚೇರಿಯೊಂದರಲ್ಲಿ ಇಕ್ಬಾಲ್ ಸಾಬ್ ಹಾಗೂ ಅಂಬಾದಾಸ್ ಭೇಟಿ ಪರಿಚಯವಾಗಿ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆದಿದೆ.. ಇವರಿಬ್ಬರ ಸ್ನೇಹಕ್ಕೀಗ ಬರೋಬ್ಬರಿ 10 ವರ್ಷ ತುಂಬಿದೆ. ಇನ್ನು ದಿನಂಪ್ರತಿ ಬೆಳೆಗಾದ್ರೆ ವಾಕಿಂಗ್ ಮಾಡಿಸೋದ್ರಿಂದ ಹಿಡಿದು, ಊಟ, ತಿಂಡಿ, ಔಷಧ, ಮದುವೆ ಮುಂಜಿವಿಗಳಿಗೆ ಕರೆದುಕೊಂಡು ಹೋಗುವ ಮೂಲಕ, ಇಕ್ಬಾಲ್‌ ಸಾಬ್‌ ಸೇವೆ ಮಾಡ್ತಾ ಇದ್ದಾರೆ ಗೆಳೆಯ ಅಂಬಾದಾಸ್‌.

ಇನ್ನು ಅಂಬಾದಾಸರಿಗೂ ಇಕ್ಬಾಲಸಾಬ ಅಂದ್ರೆ ಎಲ್ಲಿಲ್ಲದ ಪ್ರೀತಿ. ಅವರು ಬರೋವರೆಗೂ ಯಾವುದೇ ಸಭೆ, ಸಮಾರಂಭಕ್ಕೂ ಹೋಗೋದಿಲ್ಲ. ಇಕ್ಬಾಲಸಾಬ ತಮ್ಮ ಬೈಕ್ ತಂದ ಮೇಲೆ ಮನೆಯಿಂದಲೇ ಅವರನ್ನ ನಿಧಾನವಾಗಿ ಕರೆದುಕೊಂಡು ಹೋಗ್ತಾರೆ. ತಾವು ಹಿಂದೂಗಳಾಗಿದ್ರೂ ಮುಸ್ಲಿಂನಾಗಿರೋ ಇಕ್ಬಾಲಸಾಬ ಅಂದ್ರೆ ಪಂಚಪ್ರಾಣವಂತೆ.

ಇನ್ನು ಬ್ರಾಹ್ಮಣ ಸ್ನೇಹಿತನ ಸೇವೆ ಮಾಡ್ತಾ ಇರೋದ್ರಿಂದ ಇಕ್ಬಾಲ್ ಸಾಬ ಜೀವನದಲ್ಲಿ ಒಳ್ಳೆಯದಾಗಿದೆಯಂತೆ. ಪ್ರತಿನಿತ್ಯ ಇಬ್ಬರೂ ಜೊತೆಜೊತೆಯಾಗಿಯೇ ಓಡಾಡೋದ್ರಿಂದ ಬಾಗಲಕೋಟೆ ನಗರದಲ್ಲೂ ಇಬ್ಬರನ್ನೂ ಒಟ್ಟಾಗಿಯೇ ಗುರುತಿಸಿ ಕುಚುಕು ಗೆಳೆಯರಿಗೆ ರಾಮ -ರಹೀಮ ಹಾಗೂ ಶರೀಫ್ ಸಾಬ -ಗೋವಿಂದ ಭಟ್ಟರು ಎಂದು ಇವರ ಸ್ನೇಹ ಕೊಂಡಾಡುತ್ತಾರೆ. ಸ್ನೇಹಕ್ಕೆ ಜಾತಿಯಿಲ್ಲ. ನಮ್ಮಿಬ್ಬರ ಸ್ನೇಹ ಎಲ್ಲದಕ್ಕೂ ಮಿಗಿಲಾಗಿದೆ. ಜಾತಿ ಬೇರೆಯಾದ್ರೂ ನಮ್ಮಿಬ್ಬರಲ್ಲಿ ಹರಿಯೋ ರಕ್ತ ಕೆಂಪುತಾನೆ ಅನ್ನೋದು ಇಕ್ಬಾಲ್ ಸಾಬರ ನುಡಿಯಾಗಿದೆ.

ಒಟ್ಟಿನಲ್ಲಿ ಜಾತಿ-ಜಾತಿ ಎಂದು ಹೊಡೆದಾಡೋ ಜನರಿರೋ ಕಾಲದಲ್ಲಿ, ಅಂಧ ಬ್ರಾಹ್ಮಣ ಗೆಳೆಯನಿಗಾಗಿ ತನ್ನ ಜೀವನ ಮೀಸಲಿಟ್ಟ ಮುಸ್ಲಿಂ ಗೆಳೆಯನೊಬ್ಬನ ಪ್ರೀತಿ, ಸ್ನೇಹತ್ವ ಇಂದಿನ ಸಮಾಜಕ್ಕೆ ಮಾದರಿಯಾಗಿದೆ.

Next Story

RELATED STORIES