Top

ಮಳೆಗಾಗಿ ವಿಶಿಷ್ಟ ರೀತಿಯ ಆಚರಣೆ.!

ಮಳೆಗಾಗಿ ವಿಶಿಷ್ಟ ರೀತಿಯ ಆಚರಣೆ.!
X

ಯಾದಗಿರಿ : ಮಳೆ ಬಂದಿಲ್ಲ ಎಂದರೆ ದೇವರಿಗೆ ಪೂಜೆ, ಅಭಿಷೇಕಗಳು, ಹರಕೆಗಳು, ಕಪ್ಪೆಗಳಿಗೆ ಮದುವೆ, ಕತ್ತೆಗಳ ಮದುವೆ, ಈಗೆ ವಿವಿದ ರೀತಿಯ ಅಚರಣೆಗಳನ್ನ ನೋಡಿದ್ದೇವೆ, ಆದರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ವಿಭಿನ್ನ ಆಚರಣೆ ಮಾಡಲಾಗುತ್ತದೆ.. ಏನೂ ಆಚರಣೆ ಯಾವ ಜಿಲ್ಲೆಯ ಆ ಗ್ರಾಮ ಅಂತೀರ ಇಲ್ಲಿದೆ ಓದಿ..

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ, ಮಳೆ ಬರದ ಕಾರಣ ಮಳೆಗಾಗಿ ಈ ಗ್ರಾಮದಲ್ಲೆ ವಿಚಿತ್ರ ಆಚರಣೆಯನ್ನ ಮಾಡಲಾಗುತ್ತಿದೆ. ಈಗಿನ ಕಾಲದಲ್ಲೂ ಇಂತಹ ಮೂಡನಂಬಿಕೆಗಳು ಇನ್ನೂ ಜೀವಂತವಾಗಿರುವುದಕ್ಕೆ ಸಗರ ಗ್ರಾಮದಲ್ಲಿ ನಂದಿಗೆ ನಡೆಸಿದ ವಿಶಿಷ್ಟ ರೀತಿಯ ಆಚರಣೆಯೇ ಸಾಕ್ಷಿ.

ಮಳೆ ಬಾರದ ಹಿನ್ನಲೆಯಲ್ಲಿ, ಸಗರ ಗ್ರಾಮದ ಜನರು, ಇಲ್ಲಿನ ನಂದಿ ವಿಗ್ರಕ್ಕೆ ಸಗಣಿ ಮೆತ್ತಿದರು. ಹೀಗೆ ನಂದಿಬಸವಣ್ಣ ಗಲೀಜು ಆಗುವುದರಿಂದ ಮಳೆರಾಯ ನಂದಿ ಬಸವಣ್ಣನ್ನನ್ನು ಮೈತೊಳೆಯಲು ಬಂದೇ ಬರುತ್ತಾನೆ ಎನ್ನುವುದು ಈ ಗ್ರಾಮದ ಜನರ ನಂಬಿಕೆಯಾಗಿದೆ. ಈ ಆಚರಣೆ ಮಳೆ ಬರುವವರೆಗೂ ನಡೆಯುತ್ತದೆ ಎನ್ನುತ್ತಾರೆ ಸಗರ ಗ್ರಾಮದ ಮಠಾಧೀಶರು.

ರಾಜ್ಯದಲ್ಲಿ ಮುಂಗಾರು ಹಬ್ಬರಿಸುತ್ತಿದ್ದು, ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳು ತುಂಬಿ ತುಳುಕುತ್ತಿವೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ರೈತರು ಮಳೆಗಾಗಿ ಮುಗಿಲು ನೋಡುವ ಪರಿಸ್ಥಿತಿ ಎದುರಾಗಿದೆ. ಮೊದ ಮೊದಲು ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಹಾಗಾಗಿ ರೈತರು ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಹತ್ತಿ, ಭತ್ತ, ಎಲ್ಲವನ್ನೂ ಬಿತ್ತನೆ ಮಾಡಿದ್ದಾರೆ.

ಈಗ ಮಳೆ ಕೈಕೊಟ್ಟಿದೆ. ಈ ಸಮಯದಲ್ಲಿ ಮಳೆ ಬಹುಮುಖ್ಯವಾಗಿ ಬೇಕಾಗಿದೆ. ಈಗ ಮಳೆ ಬಂದರೆ ಬಿತ್ತಿರುವ ಬೆಳೆ ಕೈಗೆ ಸಿಗುತ್ತೆ ಇಲ್ಲವಾದರೆ ಮಣ್ಣಲ್ಲಿ ಮಣ್ಣಾಗುತ್ತೆ ಎಂದು ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಇಲ್ಲಿನ ರೈತರು ದೇವರ ಮೊರೆ ಹೋಗಿದ್ದಾರೆ. ಇದಕ್ಕಾಗಿ ನಂದಿ ಬಸವಣ್ಣನಿಗೆ ಸಗಣಿ ಮೆತ್ತಿ ವಿಶಿಷ್ಠ ಆಚರಣೆ ಮಾಡಿದರು. ಹೀಗೆ ಮಾಡಿದರೇ ಮಳೆ ಬರುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆಯಾಗಿದೆ.

ಒಟ್ಟಿನಲ್ಲಿ ಮಳೆ ಇಲ್ಲದೆ ಕಂಗಾಲಾಗಿರುವ ಯಾದಗಿರಿ ರೈತರಿಗೆ ಮಳೆರಾಯ ಕೃಪೆ ತೋರಬೇಕಿದೆ. ಈ ಮೂಲಕ ಬೆಳೆದ ಬೆಳೆ ಕೈಗೆ ಬರಲು ಸಹಾಯ ಮಾಡಬೇಕಿದೆ. ಇಲ್ಲವಾದಲ್ಲಿ ರೈತ ಬೆಳೆ ಬಾರದೇ, ಮಾಡಿದ ಸಾಲ ತೀರಿಸಲಾಗದೇ, ಕಷ್ಟಕ್ಕೆ ಸಿಲುಕುತ್ತಾನೆ.

ವರದಿ : ಬಾಳಗೌಡ ಪಾಟೀಲ್, ಟಿವಿ5 ಯಾದಗಿರಿ

Next Story

RELATED STORIES