Top

ಒಬ್ಬಳು ನಾರಿಗೆ ಇಬ್ಬರು ಪುರುಷ ಕಿತ್ತಾಟ : ಕಾರಣ ಏನ್‌ ಗೊತ್ತಾ.?

ಒಬ್ಬಳು ನಾರಿಗೆ ಇಬ್ಬರು ಪುರುಷ ಕಿತ್ತಾಟ : ಕಾರಣ ಏನ್‌ ಗೊತ್ತಾ.?
X

ನೆಲಮಂಗಲ : ಒಬ್ಬಳೇ ಮಹಿಳೆಗಾಗಿ, ಇಬ್ಬರು ನನ್ನ ಹೆಂಡತಿ, ನನ್ನ ಹೆಂಡತಿ ಎಂದು ಕಿತ್ತಾಡಿಕೊಂಡು, ಪರಸ್ಪರ ಹೊಡೆದಾಡಿಕೊಂಡ ವಿಚಿತ್ರ ಘಟನೆ, ನೆಲಮಂಗಲ ಬಳಿ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ, ಬಾವಿಕೆರೆ ಕ್ರಾಸ್ ಬಳಿ ನಡೆದಿದ್ದು, ಚಿಕ್ಕಬಿದರಕಲ್ಲು ನಿವಾಸಿ ಮೂರ್ತಿ ಹಾಗೂ ಮತ್ತೊಬ್ಬ ಸಿದ್ದು ಎಂಬುವವರು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಇಬ್ಬರು ಪುರುಷರು ನಾನು ಮದುವೆಯಾಗಿರೋದು, ಈಕೆ ನನಗೆ ಸೇರಬೇಕೆಂದು ಪರಸ್ಪರ ಕೈಕೈ ಮಿಲಾಯಿಸಿಕೊಂಡರು.

ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ನಡೆದಿದೆ. ಇತ್ತ ಇಬ್ಬರು ಪುರುಷರು ಬಡಿದಾಡುತ್ತಿದ್ದರೇ, ಇವರಿಗೆ ಶಾಕ್‌ ಆಗುವಂತ ಮತ್ತೊಂದು ಸಂಗತಿ ಹೊರಬಿದ್ದಿದೆ.

ಇಬ್ಬರು ಪುರುಷರಿಗೆ ಕಿತ್ತಾಟ ತಂದಿಟ್ಟು, ತನ್ನ ಹೆಂಡತಿ, ತನ್ನ ಹೆಂಡತಿ ಎಂದು ಬಡಿದಾಡಿ ಮಹಿಳೆಗೆ ಈಗಾಗಲೇ ಮತ್ತೊಬ್ಬ ಪುರುಷನೊಂದಿಗೆ ವಿವಾಹವಾಗಿದೆ, ವಿಚ್ಚೇದನ ಕೂಡ ಆಗಿದೆ.

ಈಗಾಗಿ ಇವರು ಪುರುಷರು ಈಕೆಯನ್ನು ತಾನು ಮದುವೆಯಾಗಬೇಕು. ತಾನು ಮದುವೆಯಾಗಬೇಕು ಎಂಬ ಕಾರಣಕ್ಕೆ ಹೊಡೆದಾಡಿಕೊಂಡಿದ್ದು ಎನ್ನಲಾಗಿದೆ. ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನ ಪೊಲೀಸರು ವಿಚಾರಣೆ ನಡೆಸುತಿದ್ದಾರೆ.

Next Story

RELATED STORIES