ಭಾರ..ಭಾರ.. ಪೊಲೀಸ್ ಟೋಪಿ ಭಾರ : ಕ್ಯಾಪ್ ಬದಲಿಗೆ ಸರ್ಕಾರ ನಿರ್ಧಾರ

ಬೆಂಗಳೂರು : ದಿನದ ಇಪ್ಪತ್ತ ನಾಲ್ಕು ಗಂಟೆ, ವಾರದ ಏಳು ದಿನ, ತಿಂಗಳ ಇಡೀ ದಿನಗಳು ನಮ್ಮನ್ನು ರಕ್ಷಣೆ ಮಾಡುತ್ತಿರುವವರು ಪೊಲೀಸರು.
ಇತ್ತೀಚಿಗೆ ಬದಲಾದ ಹವಾಮಾನ ವೈಫರಿತ್ಯಕ್ಕೆ, ಬದಲಾದ ಕಾಲಕ್ಕೆ ಅನುಗುಣವಾಗಿ, ನಮ್ಮ ಪೊಲೀಸ್ ಗೆಟಪ್ ಕೂಡ ಬದಲಾವಣೆ ಆಗಲಿದೆಯಂತೆ. ಅದರ ಮೊದಲ ಭಾಗವಾಗಿ, ಟೋಪಿ ಚೇಂಜ್..
ಹೌದು.. ದಶಕಗಳ ಕಾಲ ಕರ್ನಾಟಕ ಪೊಲೀಸರ ತಲೆಯ ಮೇಲಿದ್ದ ಹಳೆಯ ಟೋಪಿ ಬದಲಾವಣೆ ಆಗಲಿದೆ. ಕೇಂದ್ರ ಆರೋಗ್ಯ ಇಲಾಖೆ ಶಿಫಾರಸ್ಸಿನ ಮೇರಿಗೆ ಕ್ಯಾಪ್ ಬದಲಾವಣೆಗ ಸರ್ಕಾರ ಮುಂದಾಗಿಯಂತೆ.
ಪೇದೆ, ಮುಖ್ಯ ಪೇದೆಗಳ ಟೋಪಿಗಳನ್ನು ಬದಲಾವಣೆ ಮಾಡಿ, ತಮಿಳು ನಾಡು ಪೊಲೀಸರು ಧರಿಸುವ ಮಾದರಿಯ ಟೋಪಿ ನೀಡಲು ಸರ್ಕಾರ ಚಿಂತನೆ ನಡೆಸಿದೆಯಂತೆ.
ರಾಜ್ಯದ ಪೊಲೀಸರು ಧರಿಸುತ್ತಿದ್ದ ಹಳೆಯ ಮಾದರಿಯ ಟೋಪಿಗಳು, ಅಲ್ಲದೇ ಭಾರವಾಗಿರೋದ್ರಿಂದ ಪೇದೆಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದಂತೆ.
ಈ ಎಲ್ಲಾ ಕಾರಣಗಳಿಂದಾಗಿ, ಹಗುರವಾದ ಟೋಪಿ ನೀಡಲು ಮುಂದಾಗಿದೆ. ಈ ಮೂಲಕ ರಾಜ್ಯ ಪೊಲೀಸರ ಟೋಪಿ ಸದ್ಯದಲ್ಲೇ ಬದಲಾವಣೆ ಆಗಲಿದೆ. ಈ ಬಗ್ಗೆ ಇಂದು ನಡೆದ ಇಲಾಖೆಯ ಉನ್ನತ ಪೊಲೀಸ್ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ.